ಚಿಕ್ಕಮಗಳೂರು

ಯೋಗ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

Published On :

ಚಿಕ್ಕಮಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಆಜಾದ್ ಪಾರ್ಕ್ ಕನ್ನಡ ಸರ್ಕಾರಿ ಶಾಲಾವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಆಜಾದ್ ಪಾರ್ಕ್ ಕನ್ನಡ ಶಾಲೆ, ಪ್ರೌಢಶಾಲಾ ವಿಭಾಗದಲ್ಲಿ ಮಾಚೇನಹಳ್ಳಿ ಪ್ರೌಢಶಾಲಾ ತಂಡ ಹೆಚ್ಚಿನ ಬಹುಮಾನಗಳನ್ನು ಪಡೆದುಕೊಂಡಿವೆ.
ವಿವಿಧ ವಿಭಾಗಗಳಲ್ಲಿ ವಿಜೇತರಾದವರ ವಿವರ: 14 ವರ್ಷದ ಬಾಲಕರ ವಿಭಾಗ ಜೆ. ಮನೋಜ್- ಪ್ರ, ಸೈಫಾಅಲಿ- ದ್ವಿ, ಇರ್ಫಾನ್-  ತೃ (ಆಜಾದ್ ಪಾರ್ಕ್ ಶಾಲೆ), ಸುನೀಲ್ ಮತ್ತು ಪ್ರಶಾಂತ್ (ಸಮಾಧಾನಕರ). ಬಾಲಕಿಯರ ವಿಭಾಗ ಲಿಖಿತಾ- ಪ್ರ, ಮಾರ್ತಅಖಿಲಾರಾಣಿ- ದ್ವಿ, ಮುಸ್ಕಾನ್ ಖಾನಂ- ತೃ, ನಬೀಸಾಬಾನು ಮತ್ತು ಪುಣ್ಯ (ಸಮಾಧಾನಕರ ಬಹುಮಾನ) (ಆಜಾದ್ ಪಾರ್ಕ್ ಶಾಲೆ).
17 ವರ್ಷದ  ಬಾಲಕರ ವಿಭಾಗ: ಎಸ್.ಕೆ. ಭರತ- ಪ್ರ, ಕೆ.ಆರ್. ಲಕ್ಷ್ಮಣ- ದ್ವಿ (ಮಾಚೇನಹಳ್ಳಿ ಪ್ರೌಢಶಾಲೆ),  ಸಂಜಯ್- ತೃ, ಚಂದನ- ನಾಲ್ಕನೇ, ಪವನ್- ಐದನೇ (ವಿ.ವಿ.ಎಸ್. ಸಿರಿವಾಸೆ).  ಬಾಲಕಿಯರ ವಿಭಾಗ ಡಿ.ಪಿ. ರಂಜಿತಾ- ಪ್ರ (ಎಂಇಎಸ್), ವಿ. ಕವಿತಾ- ದ್ವಿ (ಬಸವನಹಳ್ಳಿ ಬಾಲಿಕಾ ಪ್ರೌಢಶಾಲೆ), ಪ್ರಿಯಾಂಕಾ- ತೃ, ರಂಜಿತಾ- ನಾಲ್ಕನೇ, ಸಿಂಧೂ- ಐದನೇ (ಮಾಚೇನಹಳ್ಳಿ ಪ್ರೌಢಶಾಲೆ) ಸ್ಥಾನ ಪಡೆದುಕೊಂಡಿದ್ದಾರೆ.
 ಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ವರಾಚಾರ್, ದೈಹಿಕ ಶಿಕ್ಷಣ ಶಿಕ್ಷಕ ರವಿಕುಮಾರ್, ವೇದಾವತಿ ಅವರು ಬಹುಮಾನ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.