ಚಿಕ್ಕಮಗಳೂರು

ಪರಿಹಾರಕ್ಕೆ ಸಂತ್ರಸ್ತ ರೈತರ ಆಗ್ರಹ

Published On :

ಕ.ಪ್ರ.ವಾರ್ತೆ, ಕೊಪ್ಪ, ಆ.5
ಅತಿಯಾದ ಮಳೆಯಿಂದ ಅಡಕೆ ತೋಟಗಳಿಗೆ ಕೊಳೆ ರೋಗ ತಗುಲಿದ್ದು, ಬೆಳೆ ಕಳೆದುಕೊಂಡ ತಾಲೂಕಿನ ಸಂತ್ರಸ್ಥ ರೈತರು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಸೋಮವಾರ ತಾಲೂಕು ಕಚೇರಿ ಎದುರು ಕೊಳೆ ರೋಗದಿಂದ ಉದುರಿದ ಅಡಕೆ ಕಾಯಿಗಳನ್ನು ಸುರಿದು ಪ್ರತಿಭಟಿಸಿದರು.
ಮಳೆಗಾಲದಲ್ಲಿ ಅಡಕೆ ಮರಗಳಿಗೆ ಔಷಧಿ ಸಿಂಪಡಿಸಿದ್ದರೂ 2 ತಿಂಗಳ ಕಾಲ ಸತತ ಮಳೆ ಸುರಿದಿದ್ದರಿಂದ ಅಡಕೆ  ತೋಟ ಸೇರಿದಂತೆ ಕಾಫಿ, ಕಾಳುಮೆಣಸು ಬೆಳೆಗಳಿಗೆ ಕೊಳೆ ರೋಗತಗಲಿದ್ದು, ಕೈಗೆ ಬಂದಿರುವ ಸಂಪೂರ್ಣ ಫಸಲು ಉದುರುತ್ತಿವೆ.
ಮರಗಳು ನಾಶವಾಗುವ ಅಂಚಿನಲ್ಲಿರುವುದರಿಂದ ನಾವು ಈ ಬೆಳೆಗಳನ್ನೇ ಅಲಂಬಿಸಿಕೊಂಡಿದ್ದು, ಕಂಗಾಲಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದರು.
ಅದ್ದರಿಂದ ಈ ಪ್ರದೇಶ ಪ್ರಕೃತಿ ವಿಕೋಪದಿಂದ ಹಾನಿಯಾದ ಪ್ರದೇಶ ಎಂದು ಪರಿಗಣಿಸಿ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ ಮನವಿಯನ್ನು ತಹಸೀಲ್ದಾರ್ ಶ್ರೀಧರ್ ಮೂರ್ತಿ ಪಂಡಿತ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.
ಈ ಸಮಯದಲ್ಲಿ ಸರ್ವಪಕ್ಷ ಮುಖಂಡ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ, ಜೆಡಿಎಸ್ ಮುಖಂಡ ದಿವಾಕರ್ ಭಟ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶೋಭಿಂತ್, ತಾಪಂ ಅಧ್ಯಕ್ಷೆ ಪದ್ಮಾವತಿ  ರಮೇಶ್, ಉಪಾಧ್ಯಕ್ಷ ಬೆಳಗೊಳ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಜಯಂತ್, ಸುಭದ್ರಮ್ಮ, ಸುಜಾತ, ರೈತ ಮುಖಂಡ ಬೆಳಪ್ಪಗೌಡ ಸೇರಿದಂತೆ ನೂರಕ್ಕೂ ಹೆಚ್ಚು ಜನ ಸಂತ್ರಸ್ತರು, ರೈತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.