ಚಿಕ್ಕಮಗಳೂರು

ಮಂಡೇಲಾ, ಮಲಾಲಾ ಸಂದೇಶ ಮಾದರಿಯಾಗಲಿ

Published On :

ಚಿಕ್ಕಮಗಳೂರು: ವರ್ಣಬೇಧ ನೀತಿ ವಿರುದ್ಧ ಹೋರಾಟ ನಡೆಸಿದ ನೆಲ್ಸನ್ ಮಂಡೇಲಾ ಮತ್ತು ಪಾಕಿಸ್ತಾನದ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸೂಫಾಜೀಯಾ ಅವರ ಹೋರಾಟ ಮತ್ತು ಸಂದೇಶಗಳಿಂದ ನಮ್ಮ ವಿದ್ಯಾರ್ಥಿಗಳು ಪಾಠ ಕಲಿಯಬೇಕು ಎಂದು  ನಿವೃತ್ತ ಉಪನ್ಯಾಸಕ ಬಿ. ತಿಪ್ಪೇರುದ್ರಪ್ಪ ಸಲಹೆ ಮಾಡಿದ್ದಾರೆ.
 ಜನಜಾಗೃತಿ ಸಮಾಜ ಸೇವಾ ಸಂಸ್ಥೆ ನಗರದ ಎಸ್.ಟಿ.ಜೆ. ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ನೆಲ್ಸನ್ ಮಂಡೇಲಾ ಮತ್ತು ಶಿಕ್ಷಣ ಹೋರಾಟಗಾರ್ತಿ ಮಲಾಲ ಯೂಸೂಫಾಜಿಯಾ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು.
 ಕೇವಲ 16 ವರ್ಷದ ಬಾಲಕಿ ಶಿಕ್ಷಣ ಹೋರಾಟಗಾರ್ತಿ ಮಲಾಲ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದಂತೆ ಭಯೋತ್ಪಾದನೆ, ಬಡತನ, ಅನಕ್ಷರತೆ ಮತ್ತು ಮೂಡನಂಬಿಕೆಗಳ ವಿರುದ್ಧ ನಮ್ಮ ಯುವಜನತೆ ಹೋರಾಡುವ ಮೂಲಕ ದೇಶವನ್ನು ರಕ್ಷಿಸುವ ಅಗತ್ಯವಿದೆ ಎಂದರು. ಒಂದು ಮಗು, ಒಬ್ಬ ಶಿಕ್ಷಕ, ಒಂದು ಲೇಖನಿ, ಒಂದು ಪುಸ್ತಕ ಜಗತ್ತನ್ನೇ ಬದಲಿಸಬಲ್ಲದು ಎಂಬ ಮಲಾಲಾಳ ಸಂದೇಶ ಇಂದಿನ ಸಂದರ್ಭದಲ್ಲಿ ಅತ್ಯಂತ ಮಹತ್ವದ್ದಾಗಿದೆ ಎಂದ ಅವರು, ಈ ಹಿನ್ನೆಲೆಯಲ್ಲಿ ಮಂಡೇಲಾ ಮತ್ತು ಮಲಾಲಾ ಅವರ ಚಿಂತನೆಗಳನ್ನು ಇಂದಿನ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
 ಪ್ರಗತಿಪರ ಚಿಂತಕ ಬಿ. ಅಮ್ಜದ್ ಮಾತನಾಡಿ, ನೆಲ್ಸನ್ ಮಂಡೇಲಾ ಮತ್ತು ಮಲಾಲಾ ಅವರ ಹೋರಾಟ ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕು ಎಂದು ತಿಳಿಸಿದರು.
 ಬಾಲಕರಾದ ಅಮಾನ್ ಮತ್ತು ಅಮ್ರೀನ್ ಅವರಿಂದ ಸಮಾರಂಭದಲ್ಲಿ ನಡೆದ ಭಗವದ್ಗೀತೆ ಮತ್ತು ಕುರಾನ್ ಪಠಣ ಸಭಿಕರ ಗಮನ ಸೆಳೆಯಿತು. ಶಾಸಕ ಸಿ.ಟಿ. ರವಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
 ಕಾಲೇಜಿನ ಪ್ರಾಂಶುಪಾಲ ಕೆ.ಎಚ್. ಕರೂರ್ ಅಧ್ಯಕ್ಷತೆ ವಹಿಸಿದ್ದರು. ಜನಜಾಗೃತಿ ಸಮಾಜ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ಕೆ.ಎಂ. ಇಕ್ಬಾಲ್, ಅಧ್ಯಕ್ಷ ವಿಶ್ವನಾಥ್ ಸಂಕಲ್ಪ, ಪ್ರಧಾನ ಕಾರ್ಯದರ್ಶಿ ಜೆ. ಸತ್ಯನಾರಾಯಣ, ಸಾಹಿತಿಗಳಾದ ಎ.ಜಿ. ಜಗದೀಶ್, ರಮೇಶ್ ಬೊಂಗಾಳೆ, ಕೆ.ಟಿ. ಸುನೀಲ್ ಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.