ಸ್ವಾತಂತ್ರ್ಯೋತ್ಸವ
ನರಸಿಂಹರಾಜಪುರ: 67ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿವಿದೆಡೆ ಸಂಘ ಸಂಸ್ಥೆಗಳು ವಿಭಿನ್ನವಾಗಿ ಆಚರಿಸಿದವು. ಪಟ್ಟಣದ ಎಲ್.ಎಫ್.ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕ್ಲಬ್ ಸದಸ್ಯರು ಚಿಟ್ಟಿಕೊಡಿಗೆ ಸಮೀಪ ಇರುವ ಬುದ್ಧಮಾಂದ್ಯ ಮಕ್ಕಳ ಆಶ್ರಮಕ್ಕೆ ತೆರಳಿ 2 ಕ್ವಿಂಟಲ್ ಅಕ್ಕಿ ಹಾಗೂ ದವಸ ಧಾನ್ಯ ನೀಡಿದರು. ನಂತರ ಶಾಂತಿ ಭವನದ ಬಳಿ ಇರುವ ದಿವ್ಯ ಕಾರುಣ್ಯ ಆಶ್ರಮಕ್ಕೆ ತೆರಳಿ ಅನಾಥ ಮಕ್ಕಳಿಗೆ ಅಕ್ಕಿ, ದವಸ ಧಾನ್ಯ ನೀಡಿದರು. ಈ ಸಂದರ್ಭದಲ್ಲಿ ಎಲ್.ಎಫ್. ಸ್ಪೋರ್ಟ್ಸ್‌ಕ್ಲಬ್ ಅಧ್ಯಕ್ಷ ಎನ್.ಜೆ.ಫೌಲೋಸ್, ಕಾರ್ಯದರ್ಶಿ ಥೋಮಸ್, ಉಪಾಧ್ಯಕ್ಷ ಪಿ.ಪಿ. ಶೇವಿಯಾರ್ ಮೊದಲಾದವರು ಇದ್ದರು.
ಹಣ್ಣು ವಿತರಣೆ
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶೃಂಕೋನ ಮಾಜಿ ಸೈನಿಕರ ಸಂಘದ ವತಿಯಿಂದ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು. ಶೃಂಕೋನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿಜಯ್, ಕಾರ್ಯದರ್ಶಿ ಯತಿರಾಜ್ ಮೊದಲಾದವರು ಇದ್ದರು.
ವನ ಮಹೋತ್ಸವ
ಜ್ವಾಲಾಮಾಲಿನಿ ಜೇಸಿ ಸಂಸ್ಥೆ ವತಿಯಂದ ಸ್ವಾತಂತ್ತ್ರ್ಯದಿನಾಚರಣೆ ಅಂಗವಾಗಿ ಮುಕ್ತಿಧಾಮದಲ್ಲಿ ಗಿಡನೆಡುವ ಮೂಲಕ ವನಮಹೋತ್ಸವ ಆಚರಿಸಿದರು. ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿದರು. ಶಾಂತಿಭವನದ ಬಳಿ ಇರುವ ದಿವ್ಯ ಕಾರುಣ್ಯ ಆಶ್ರಮಕ್ಕೆ ತೆರಳಿದ ಜೇಸಿ ಸದಸ್ಯರು ಅನಾಥ ಮಕ್ಕಳಿಗೆ ಬಟ್ಟೆ, ಬ್ರೆಡ್, ಹಣ್ಣು, ದಿನಸಿ ವಿತರಿಸಿದರು. ಈ ಸಂದರ್ಭದಲ್ಲಿ ಜ್ವಾಲಾ ಮಾಲಿನಿ ಜೇಸಿ ಸಂಸ್ಥೆಯ ಅಧ್ಯಕ್ಷ ಎಸ್.ಎಸ್. ಶೇಷಗಿರಿ, ಕಾರ್ಯದರ್ಶಿ ವಿಜಯಕುಮಾರ್, ವಿಶೇಷಾಧಿಕಾರಿ ಅಭಿನವ ಗಿರಿರಾಜ್, ಉಪಾಧ್ಯಕ್ಷ ಪುರುಷೋತ್ತಮ್, ಜೀವೇಂದ್ರಕುಮಾರ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

