ಕಷ್ಟದ ಜೀವನ ಶಿಸ್ತು ಕಲಿಸುವ ಪಾಠಶಾಲೆ
ಬಾಳೆಹೊನ್ನೂರು: ಗುರು ಪರಶಿವನ ಸಾಕಾರ ರೂಪ. ಹೆತ್ತ ತಾಯಿ ತಂದೆಯ ಋಣ, ಶ್ರೀ ಗುರುವಿನ ಋಣ, ಮತ್ತು ಸಮಾಜದ ಋಣವನ್ನು ಪ್ರತಿಯೊಬ್ಬ ಮನುಷ್ಯ ತೀರಿಸಿದಾಗಲೇ ಮಾನವ ಜೀವನ ಸಾರ್ಥಕಗೊಳ್ಳುವುದೆಂದು ರಂಭಾಪುರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯರು ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ರಂಭಾಪುರೀ ಪೀಠದಲ್ಲಿ ಲಿಂಗೈಕ್ಯ ಶ್ರೀ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ 22ನೆಯ ಪುಣ್ಯಾರಾಧನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶಿಸ್ತು ಕಲಿಸುವ ಶಾಲೆ: ತಂದೆ ತಾಯಿಗಳು ಭೌತಿಕ ಶರೀರ ಮತ್ತು ಸಂಪದ ಕೊಟ್ಟರೆ ಶ್ರೀಗುರು ಅಧ್ಯಾತ್ಮದ ಜ್ಞಾನ ನೀಡಿ, ಮೋಕ್ಷ ಸಾಧನೆಗೆ ಕಾರಣೀಭೂತನಾಗುತ್ತಾನೆ. ಗುರುವಿಗೆ ಯೋಗ್ಯ ಶಿಷ್ಯ ಮತ್ತು ಶಿಷ್ಯನಿಗೆ ಯೋಗ್ಯ ಗುರು ಸಿಗುವುದು ಅಷ್ಟು ಸುಲಭವಲ್ಲ. ಶ್ರೀಗುರು ನಿಸ್ವಾರ್ಥ ಸೇವೆಗೆ ಒಲಿಯುವವನೇ ಹೊರತು ಯಾವುದೇ ಭೌತಿಕ ಸಂಪತ್ತಿಗೆ ಒಲಿಯಲಾರ. ಕಷ್ಟದ ಜೀವನ ಶಿಸ್ತನ್ನು ಕಲಿಸುವ ಪಾಠಶಾಲೆ ಎಂಬುದನ್ನು ಅವರು ಚನ್ನಾಗಿ ಅರ್ಥೈಸಿಕೊಂಡಿದ್ದರು ಎಂದರು. ಹಲಗೂರು ಬೃಹನ್ಮಠದ ಶ್ರೀ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಲಿಂ.ಶ್ರೀ ಜಗದ್ಗುರುಗಳ ಕ್ರಿಯಾಕತೃತ್ವ ಶಕ್ತಿಯನ್ನು ಮತ್ತು ಅವರಲ್ಲಿರುವ ದೂರದೃಷ್ಟಿ ಉತ್ಕೃಷ್ಟ ಗುಣಗಳನ್ನು ಮುಕ್ತ ಕಂಠದಿಂದ ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ದೊಡ್ಡಸಗರದ ಶ್ರೀ ಸೋಮೇಶ್ವರ ಶಿವಾಚಾರ್ಯರು, ಗುಳೇದಗುಡ್ಡದ ಕಾಡಸಿದ್ಧೇಶ್ವರ ಶಿವಾಚಾರ್ಯರು, ಚನ್ನಗಿರಿ ಕೇದಾರ ಶಿವಶಾಂತವೀರ ಶಿವಾಚಾರ್ಯರು, ಜಕ್ಕಲಿಯ ವಿಶ್ವಾರಾಧ್ಯ ಶಿವಾಚಾರ್ಯರು, ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯರು, ಭೇರುಗಂಡಿಮಠದ ರೇಣುಕ ಮಹಂತ ಶಿವಾಚಾರ್ಯರು, ಕಾರ್ಜುವಳ್ಳಿ ಹಿರೇಮಠದ ಶಂಭುಲಿಂಗ ಶಿವಾಚಾರ್ಯರು, ಹರಪನಹಳ್ಳಿ ಪ್ರಮೋದ ಸ್ವಾಮೀಜಿ, ಕೂಡಲದ ಮಹೇಶ್ವರ ಸ್ವಾಮೀಜಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಸಮಾರಂಭದಲ್ಲಿ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಭಕ್ತ ಸಮೂಹ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

