ಅಧಿಕಾರಿ ವರ್ಗಾವಣೆ; ಪರ ವಿರೋಧ ವ್ಯಾಖ್ಯಾನ
ಮೂಡಿಗೆರೆ: ವಲಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ರಮೇಶ್ ಬಾಬು ಅವರನ್ನು ವರ್ಗಾವಣೆ ಮಾಡುವಂತೆ ಕೆಲವು ಮರದ ವ್ಯಾಪಾರಿಗಳು ಒತ್ತಾಯಿಸಿದ್ದಾರೆ. ಆದರೆ ಅವರನ್ನು ವರ್ಗಾವಣೆ ಮಾಡಬಾರದೆಂದು ಸಾರ್ವಜನಿಕರು ಮತ್ತು ಇನ್ನು ಕೆಲವು ಮರದ ವ್ಯಾಪರಿಗಳು ಒತ್ತಾಯಿಸಿದ್ದು ಸಂರಕ್ಷಾಣಾಧಿಕಾರಿಗಳ ವರ್ಗಾವಣೆಯಲ್ಲಿ ಪರ-ವಿರೋಧಗಳು ವ್ಯಕ್ತವಾಗಿವೆ.
ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ರವಿ ದೇವವೃಂದ ಹಾಗೂ ಯು.ಎಚ್. ಹೇಮಶೇಖರ್ ಮಾತನಾಡಿ, ಹಿಂದೆ ಮೂಡಿಗೆರೆಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್ ಬಾಬು ಬ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು. ಅಂದಿನ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ಕೈ ಗೊಂಬೆಯಾಗಿ ಮರದ ವ್ಯಾಪಾರಿಗಳನ್ನು ಸುಲಿಗೆ ಮಾಡುತ್ತಿದ್ದು. ಮತ್ತೆ ವಲಯ ಅರಣ್ಯ ಸಂರಕ್ಷಾಣಾಧಿಕಾರಿಯಾಗಿ ಆಗಮಿಸಿ ತಮ್ಮ ಹಳೆಯ ಚಾಳಿಯನ್ನೆ ಮುಂದುವರೆಸುತ್ತಿರುವ ರಮೇಶ್ ಬಾಬು ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.
ರಮೇಶ್ ಬಾಬು ಅವರು ಕೆವಿಟ್ ತರುವುದರ ಮೂಲಕ ಮರಳಿ ಮೂಡಿಗೆರೆಯಲ್ಲೇ ಠಿಕಾಣಿ ಹೂಡಲು ಹುನ್ನಾರ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ವರ್ಗಾಯಿಸುವಂತೆ ಒತ್ತಾಯಿಸಿ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸುರೇಶ್, ಮುಸ್ತಾಫ, ತಮ್ಮಣ ಗೌಡ ಉಪಸ್ಥಿತರಿದ್ದರು.
ವಿರೋಧ: ಅರಣ್ಯ ಸಂರಕ್ಷಣಾಧಿಕಾರಿ ಹರಿಶ್ ಬಾಬು ಅವರ ವರ್ಗಾವಣೆಗೆ ಕೆಲವು ಮರದ ವ್ಯಾಪಾರಿಗಳು ಹುನ್ನಾರ ನಡೆಸುತ್ತಿದ್ದು. ತಕ್ಷಣ ಅವರ ವರ್ಗಾವಣೆ ರದ್ದು ಪಡಿಸುವಂತೆ ಜಿಪಂ ಸದಸ್ಯ ವಿ.ಕೆ. ಶಿವೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೆಲವರ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲಾ ಎಂದು ನಿಷ್ಟಾವಂತ ಅಧಿಕಾರಿಯನ್ನು ವರ್ಗಾವಣೆ ಮಾಡುವುದು ಸರಿಯಲ್ಲ. ಇತ್ತೀಚೆಗೆ ಮರದ ವ್ಯಾಪಾರಿಯೋರ್ವರಿಗೆ ಸೇರಿದ್ದ ಅಕ್ರಮ ಮರಗಳನ್ನು ರಮೇಶ್ ಬಾಬು ಹಿಡಿದು ವಶಕ್ಕೆ ತೆಗೆದುಕೊಂಡಿದ್ದು. ಇದರಿಂದ ಕುಪಿತ ಗೊಂಡ ಕೆಲವರು ರಮೇಶ್ ಬಾಬು ಅವರನ್ನು ವರ್ಗಾವಣೆ ಮಾಡುವಂತೆ ತಪ್ಪು ಮಾಹಿತಿ ನೀಡಿ ವರ್ಗಾವಣೆ ಮಾಡಿಸಿದ್ದು. ಅವರು ನ್ಯಾಯಾಲಯದ ಮೂಲಕ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದು. ವರ್ಗಾವಣೆ ಮಾಡಿದ್ದೇ ಆದಲ್ಲಿ ಸರ್ವ ಪಕ್ಷದ ಸದಸ್ಯರು ಮತ್ತು ಬೆಳೆಗಾರರೊಂದಿಗೆ ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ಮರದ ವ್ಯಾಪಾರಿಗಳ ಸಂಘದಲ್ಲಿ 100 ಕ್ಕೂ ಅಧಿಕ ಸದಸ್ಯರಿದ್ದು. ಕೇವಲ ನಾಲ್ಕು ಜನ ಸದಸ್ಯರು ಸಾಮಾನ್ಯ ಜನರಿಗೆ ಸ್ಪಂಧಿಸುವ ಹಾಗೂ ಪ್ರಾಮಾಣಿಕ ವ್ಯಕ್ತಿಯ ವಿರುದ್ಧ ವರ್ಗಾವಣೆಗೆ ಚಿತಾವಣೆ ನಡೆಸುತ್ತಿರುವುದು ಸರಿಯಲ್ಲಾ ಎಂದು ವಿರೋಧ ವ್ಯಕ್ತ ಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

