ಇಲ್ಲಿ ಸೇತುವೆ ಇಲ್ಲ ಕಾಲುಸಂಕವೇ ಎಲ್ಲ
ಮೂಡಿಗೆರೆ, ಆ.19: ದೇಶಕ್ಕೆ ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕಾಲುಸೇತುವೆ ಮತ್ತು ಶಾಶ್ವತ ಸೇತುವೆ ನಿರ್ಮಾಣವಾಗದೇ ಮಲೆನಾಡಿನ ಗ್ರಾಮೀಣ ಭಾಗದ ಜನರು, ವಿದ್ಯಾರ್ಥಿಗಳು ಹಾಗೂ ವಯೋವೃದ್ಧರು ಕಾಲು ಸಂಕದಲ್ಲೇ ಓಡಾಡ ಬೇಕಾಗಿದೆ.
ತಾಲೂಕಿನ ಬಾಳೂರ್ ಹೋಬಳಿಯಲ್ಲಿರುವ ಕೆ. ತಲಗೂರಿನ ಬಿಕ್ಕರಣೇ - ಬೀರಗೂರ್ ಎಂಬಲ್ಲಿ ಬಡ ಕುಟುಂಬಗಳೇ ಅಧಿಕವಾಗಿದ್ದು, ರೈತರು ಗದ್ದೆಗೆ, ವಿದ್ಯಾರ್ಥಿಗಳು ಶಾಲೆಗೆ, ಸಾರ್ವಜನಿಕರು ಪಟ್ಟಣಕ್ಕೆ ತೆರಳಬೇಕಾದರೆ ಮರದ ಕಾಲುಸಂಕಗಳನ್ನೇ ದಾಟಿ ಹೋಗಬೇಕಾಗಿದೆ.
ಹುಸಿ ಭರವಸೆ: ಚುನಾವಣೆ ಸಮಯದಲ್ಲಿ ಬರುವ ಜನಪ್ರತಿನಿಧಿಗಳು ಇದೇ ಮರದ ಕಾಲು ಸಂಕವನ್ನು ದಾಟಿ ಬಂದು ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿ ಮತ ಪಡೆಯುತ್ತಾರೆ. ಗೆದ್ದ ನಂತರ ಮರೆಯುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾಗಿಲ್ಲ.
ನದಿ ನೀರು ಉಕ್ಕಿ ಹರಿಯುತ್ತಿರುವ ಪರಿಣಾಮ ಕಾಲು ಸಂಕ ದಾಟವುದೇ ಕಷ್ಟಕರವಾಗಿದೆ. ಬಿಕ್ಕರಣೆಯಿಂದ ಬೀರಗೂರಿಗೆ ಸಂಪರ್ಕ ಕಲ್ಪಿಸುವ ಕಾಲುಸೇತುವೆ ಆಥವಾ ಶಾಶ್ವತ ಸೇತುವೆ ನಿರ್ಮಾಣಗೊಂಡಲ್ಲಿ ಓಡಾಡಲು ಅನುಕೂಲಕವಾಗುತ್ತದೆ ಎಂದು ಗ್ರಾಮಸ್ಥರ ಅನಿಸಿಕೆ.
ನಾನು ಹುಟ್ಟಿದಾಗಿನಿಂದಲೂ ಈ ಮರದ ಕಾಲು ಸಂಕದ ಮೇಲೆ ನಡೆದಾಡುತ್ತಿದ್ದೇನೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ ನಮ್ಮೂರಿಗೆ ಮಾತ್ರ ಅಭಿವೃದ್ಧಿ ಮೊರೀಚಿಕೆಯಾಗಿದೆ. ನನಗೆ ಈಗ 100 ವರ್ಷ ತುಂಬಿದೆ. ಇನ್ನಾದರೂ ಸರ್ಕಾರ ಮುಂದಿನ ಪೀಳಿಗೆಗಾದರೂ ಸೇತುವೆ ನಿರ್ಮಾಣ ಮಾಡಲಿ.
ಬೋಬೇಗೌಡ
ಬಿಕ್ಕರಣೆ ಬೀರಗೂರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

