ಚಿಕ್ಕಮಗಳೂರು

ಅನಾಥಾಲಯದಲ್ಲಿ ಮದುವೆ

Published On :

ಬೆಂಗಳೂರು: ಹೊಸೂರು ರಸ್ತೆಯಲ್ಲಿರುವ ಅನಾಥ ಮಕ್ಕಳ ಬಾಲಮಂದಿರ/ಸ್ವೀಕಾರ ಕೇಂದ್ರ ಸೋಮವಾರ ಬೆಳಗ್ಗೆ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಅಲ್ಲಿ ಮಂಗಳವಾದ್ಯ ಮೊಳಗುತ್ತಿತ್ತು.
ಅದೊಂದು ವಿವಾಹ ಸಮಾರಂಭ. ಆನಾಥ ಯುವತಿಯಾಗಿ ಸರ್ಕಾರದ ಆಶ್ರಯ ಪಡೆದಿದ್ದ ಯುವತಿ ಪೂಜಾ (ಕಾಳಮ್ಮ) ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಬಸರೀಕಟ್ಟೆ ನಿವಾಸಿ ಬಿ.ಪಿ. ಸತೀಶ್ ಅವರ ಕೈ ಹಿಡಿಯುವ ಮೂಲಕ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಳು.
ಸಂಗಮೇಶ ಪೇಟೆಯ ಪೂರ್ಣಪ್ರಜ್ಞ ವಸತಿ ಶಾಲೆಯ ಉದ್ಯೋಗಿಯಾದ ಸತೀಶ್ ನಿರಾಶ್ರಿತ ಯುವತಿಗೆ ಬಾಳು ಕೊಡುವ ಮೂಲಕ ಆದರ್ಶ ಮೆರೆದರು. ಸಚಿವರು, ಅಧಿಕಾರಿಗಳು ಮತ್ತು ಸ್ಥಳೀಯ ಈ ವಿಶೇಷವಾದ ವಿವಾಹಕ್ಕೆ ಸಾಕ್ಷಿಯಾದರು. ಸತೀಶ್ ಅವರ ತಂದೆ ಪದ್ಮನಾಭ, ತಾಯಿ ಮಹಾಲಕ್ಷ್ಮಿ, ಸಹೋದರ, ಸಹೋದರಿ ಮತ್ತು ಬಂಧುಗಳು ಮದುವೆಯಲ್ಲಿ ಸಂತಸದಿಂದ ಭಾಗಿಯಾಗಿದ್ದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರಿ, ಜಿಲ್ಲಾಧಿಕಾರಿ ಡಾ. ಜಿ.ಸಿ. ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಮೇಶ್ ಹಾಲಭಾವಿ, ಈ ಹಿಂದೆ ಸ್ವೀಕಾರ ಕೇಂದ್ರದಿಂದ ಮದುವೆಯಾಗಿದ್ದ ಭಾರತಿಯ ಪುಟ್ಟ ಮಗಳು ಮದುವೆಗೆ ಸಾಕ್ಷಿಯಾಗಿದ್ದರು.
ಪೂಜಾ ಆರೂವರೆ ವರ್ಷದ ಬಾಲಕಿಯಾಗಿದ್ದಾಗ ಅನಾಥಲಾಗಿ ಬಾಲಮಂದಿರ ಸೇರಿದ್ದಳು. ನಂತರ ಬಸವನಗುಡಿಯ ಅಶ್ರಮದಲ್ಲಿದ್ದ ಆಕೆ 9ನೇತರಗತಿವರೆಗೆ ಓದಿದ್ದಾಳೆ. ಪ್ರಸಾಧನ, ಕಂಪ್ಯೂಟರ್ ಮತ್ತು ಹೊಲಿಗೆ ತರಬೇತಿ ಪಡೆದಿದ್ದಾಳೆ.
ಇಂತಹ ವಿವಾಹಗಳಿಗೆ ಸರ್ಕಾರ 20 ಸಾವಿರ ಸಹಾಯಧನ ನೀಡುತ್ತದೆ. ಈ ಪೈಕಿ 15 ಸಾವಿರವನ್ನು ದಂಪತಿಯ ಜಂಟಿ ಖಾತೆಯಲ್ಲಿ ಠೇವಣಿ ಇಡಲಾಗುತ್ತಿದೆ. ಉಳಿದ ಹಣವನ್ನು ಮದುವೆ ವೆಚ್ಚಕ್ಕೆ ಬಳಸಲಾಗುತ್ತದೆ ಎಂದು ಸ್ವೀಕಾರ ಕೇಂದ್ರದ ಅಧೀಕ್ಷಕಿ ವಾಸಂತಿ ತಿಳಿಸಿದರು.
ಬೆಳಗ್ಗೆ 9.30ಕ್ಕೆ ಮುಹೂರ್ತ ನಿಗದಿಯಾಗಿತ್ತು. ಆದರೆ, ಟ್ರಾಫಿಕ್ ಜಾಮ್ನಲ್ಲಿ ವರ ಹಾಗೂ ಆತನ ಕುಟುಂಬ ಸದಸ್ಯರು ಸಿಲುಕಿದ್ದರಿಂದ ವಿವಾಹ ಸುಮಾರು ಒಂದೂವರೆ ಗಂಟೆಗಳ ಕಾಲ ತಡವಾಗಿ ನಡೆಯಿತು. ಬಾಲಮಂದಿರದ ಆವರಣದಲ್ಲಿರುವ ಗಣೇಶ ದೇವಸ್ಥಾನದ ಮುಂದೆ ಹಿಂದೂ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮ ಸರಳವಾಗಿ  ನಡೆಯಿತು.



ಓದಿದ್ದು 9ನೇ ತರಗತಿ. ಹೆತ್ತವರನ್ನು ಕಳೆದುಕೊಂಡ ನನಗೆ ಸ್ವೀಕಾರ ಕೇಂದ್ರವೇ ಎಲ್ಲಾ. ಅವರು ತೋರಿಸಿದ ವರನನ್ನು ಒಪ್ಪಿ ವಿವಾಹವಾಗಿದ್ದೇನೆ. ಉನ್ನತ ವ್ಯಾಸಂಗಕ್ಕೆ ಒತ್ತು ನೀಡುವ ಆಸೆ ಇದೆ.
ಟಿ ಪೂಜಾ, ವಧು
ಇಂದಿನ ಯುವಕರು ಜಾತಿಬೇಧ ಮರೆತು ಮಾನವೀಯತೆಗೆ ಆದ್ಯತೆ ನೀಡಬೇಕು. ಈ ವಿವಾಹಕ್ಕೆ ಪೋಷಕರ ಸಂಪೂರ್ಣ ಒಪ್ಪಿಗೆ ಇದೆ.
ಟಿ  ಸತೀಶ್, ವರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.