ಮುಖ್ಯಮಂತ್ರಿಗಳಿಂದ ಅನುದಾನದ ಭರವಸೆ
ಕಡೂರು: ಕಡೂರು ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮೀಣ ರಸ್ತೆ ಅಭಿವೃದ್ಧಿ ಮತ್ತು ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರಕ್ಕೆ ರು. 59.25 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಅನುದಾನ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ದತ್ತ, ಕಡೂರು ತಾಲೂಕು ಡಾ.ಡಿ.ಎಂ. ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕಾಗಿದ್ದು, ವರದಿ ಅನ್ವಯ 2013-14ನೇ ಸಾಲಿನಲ್ಲಿ ರು. 4 ಕೋಟಿ ವೆಚ್ಚದಲ್ಲಿ ಕ್ಷೇತ್ರದ ಬಿವೈಎಸ್ ಎಸ್ ರಸ್ತೆಯಿಂದ ಕಿ.ಮೀ. 20ರಿಂದ 43.20ರವರೆಗೆ ರಸ್ತೆ ಅಭಿವೃದ್ಧಿ, ರು. 3 ಕೋಟಿ ವೆಚ್ಚದಲ್ಲಿ ಬೆಲಗೂರು ಪಂಚನಹಳ್ಳಿ ರಸ್ತೆ ಅಭಿವೃದ್ಧಿ ರು. 4 ಕೋಟಿ ವೆಚ್ಚದಲ್ಲಿ ಅಂತರಘಟ್ಟೆ ರಸ್ತೆಯ ಕಿ.ಮೀ.10ರಿಂದ 19.50ರವರೆಗೆ ಅಭಿವೃದ್ದಿಪಡಿಸುವುದು ಹಾಗು ರು. 2 ಕೋಟಿ ವೆಚ್ಚದಲ್ಲಿ ಕೆ.ಎಂ.ರಸ್ತೆಯಿಂದ ಬುಕ್ಕಸಾಗರ ಮಾರ್ಗವಾಗಿ ಎಮ್ಮೇದೊಡ್ಡಿಗೆ ಸೇರುವ ರಸ್ತೆ ಅಭಿವೃದ್ಧಿಗೊಳಿಸುವುದು ಸೇರಿದಂತೆ ಹಲವು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಇದಲ್ಲದೆ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಯೋಜನೆ ಅಡಿ ರು. 5 ಕೋಟಿ ವೆಚ್ಚದಲ್ಲಿ ರಾ. ಹೆ. 206ರ ಕಡೂರಿನಿಂದ ಮರವಂಜಿ ಬೆಲಗೂರು ಮಾರ್ಗವಾಗಿ ಶ್ರೀರಾಮಪುರಕ್ಕೆ ಸೇರುವ ರಸ್ತೆ ಅಭಿವೃದ್ಧಿಗೆ ರು. 5 ಕೋಟಿ, ರಾ.ಹೆ. 206ರ ಕಡೂರಿನಿಂದ ಹಿರೇನಲ್ಲೂರು ಅಜ್ಜಂಪುರ ಯರಗನಹಳ್ಳಿ ರಾ.ಹೆ. 13ನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ರು. 5 ಕೋಟಿ ಸೇರಿದಂತೆ ಒಟ್ಟು ರು. 59.25 ಕೋಟಿ ವೆಚ್ಚದಲ್ಲಿ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

