ರಾಜ್ಯ ಮಟ್ಟಕ್ಕೆ ಆಯ್ಕೆ
ನರಸಿಂಹರಾಜಪುರ: ಚಿಕ್ಕಮಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ಗೋಷ್ಠಿಯಲ್ಲಿ ಪಟ್ಟಣದ ಡಿಸಿಎಂಸಿ (ಶಾರ ದಾ ವಿದ್ಯಾ ಮಂದಿರ) ಪ್ರೌಢ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ಪಿ. ವಿಜೇತ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯನ್ನು ಶಾಲಾ ಆಡಳಿತ ಮಂಡಳಿ,ಪ್ರಾಶುಪಾಲರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
ಪದವಿ ಸ್ವೀಕಾರ ಸಮಾರಂಭ ಇಂದು
ನರಸಿಂಹರಾಜಪುರ: ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಪದವಿ ಸ್ವೀಕಾರ ಸಮಾರಂಭ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಗಸ್ಟ್ 22 ರ ಬೆಳಿಗ್ಗೆ 10.30 ಕ್ಕೆ ನಡೆಯಲಿದೆ. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಗೂ ಸಾಹಿತಿ ಚಟ್ಣಳ್ಳಿ ಮಹೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸುಬ್ಬಣ್ಣ ನಾಡಿಗ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಡಿ.ಎನ್. ಜೀವರಾಜ್, ಶರಣ ಸಾಹಿತ್ಯ ಪರಿಷತ್ತಿನ ನಿಯೋಜಿತ ಅಧ್ಯಕ್ಷೆ ಮೀನಾಕ್ಷಿ ಕಾಂತರಾಜ್ ಇರುವರು.
ತ್ರೀಜಿ ಸೇವೆಗೆ ಚಾಲನೆ
ಮೂಡಿಗೆರೆ: ಭಾರತೀಯ ಸಂಚಾರ ನಿಗಮವು ಪಟ್ಟಣದಲ್ಲಿ ಜಿಲ್ಲಾ ಮಹಾ ಪ್ರಬಂಧಕ ಕೆ. ನಟರಾಜನ್ ತ್ರೀಜಿ ಸೇವೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪಟ್ಟಣದ ಜನತೆಯ ಕನಸು ನನಸಾಗಿದೆ. ಪಟ್ಟಣ ಹಾಗೂ ಹ್ಯಾಂಡ್ಪೋಸ್ಟ್ ಭಾರತೀಯ ಸಂಚಾರಿ ನಿಗಮದ ಮೊಬೈಲ್ ಟವರ್ನಲ್ಲಿ 500 ಮೀ. ವ್ಯಾಪ್ತಿಯಲ್ಲಿ ತ್ರೀಜಿ ಸೇವೆ ಇಂದಿನಿಂದ ಪ್ರಾರಂಭಗೊಂಡಿದ್ದು, ಸಾರ್ವಜನಿಕರು ಸದುಪಯೋಗ ಪಡೆಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪ ಪ್ರಬಂಧಕ ಪ್ರಭಾಕರ್, ಉಪ ಮಂಡಲಾಧಿಕಾರಿ ರವಿರಾಜ್ ಎ, ಕಿರಿಯ ಅಭಿಯಂತರ ರಾಬರ್ಟ್ ಲೋಭೋ, ಭಾಸ್ಕರ್, ಉಪವಿಭಾಗಾಧಿಕಾರಿ ಭಾಸ್ಕರ್ ಮತ್ತು ಮೂಡಿಗೆರೆ ಭಾರತೀಯ ಸಂಚಾರ ನಿಗಮದ ಸಿಬ್ಬಂದಿ ಇದ್ದರು.
ಕೊಳೆರೋಗ: ಪರಿಹಾರಕ್ಕೆ ಒತ್ತಾಯ
ತರೀಕೆರೆ: ತಾಲೂಕಿನ ಅಮೃತಾಪುರ ಹೋಬಳಿಯಲ್ಲಿ ವ್ಯಾಪಕವಾಗಿ ಅಡಕೆ ಮರಗಳಿಗೆ ಕೊಳೆ ರೋಗ ತಗುಲಿದ್ದು ಶೇ.40 ಫಸಲು ಹಾನಿಯಾಗಿದೆ. ಮರಗಳಿಗೂ ಸುಳಿಗೊಳೆ ರೋಗ ಬಂದಿದ್ದು, ಅಡಕೆ ಮರಗಳೂ ಒಣಗಿ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಪರಿಹಾರ ಕೊಡುವುದರ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಮುದುಗುಂಡಿ ಲೋಹಿತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

