'ಮೋದಿಯಿಂದ ದೇಶಕ್ಕೆ ಸುಭದ್ರ ನಾಯಕತ್ವ'
ಕನ್ನಡಪ್ರಭ ವಾರ್ತೆ, ಕಡೂರು, ಡಿ.1
ದೇಶಾದ್ಯಂತ ಮೋದಿ ಅವರಿಗೆ ಇರುವ ಜನ ಬೆಂಬಲವು ಮತಗಳಾಗಿ ಪರಿವರ್ತನೆಗೊಳ್ಳಲು ದೇಶದಲ್ಲಿರುವ ಯುವ ಶಕ್ತಿ ಸಂಘಟಿತರಾಗಿ ಬಿಜೆಪಿಯನ್ನು ಸಂಘಟಿಸಿದಲ್ಲಿ ಮೋದಿ ಪ್ರಧಾನಿಯಾಗಲು ಸಾಧ್ಯ ಎಂದು ಮಾಜಿ ಶಾಸಕ ಡಾ ವೈ.ಸಿ. ವಿಶ್ವನಾಥ್ ತಿಳಿಸಿದರು.
ಪಟ್ಟಣದ ಕೋಟೆಯ ಶಂಕರಮಠದಲ್ಲಿ ನಡೆದ ಹಾಸನ ಜಿಲ್ಲಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಡೂರು ವಿಧಾನಸಭಾ ಕ್ಷೇತ್ರದ ಶಕ್ತಿ ಕೇಂದ್ರ ಹಾಗು ಮಂಡಲಗಳ ಮುಖಂಡರು ಕಾರ್ಯಕರ್ತರ ಸಭೆ ಉಧ್ಘಾಟಿಸಿ ಮಾತನಾಡಿದರು.
ನರೇಂದ್ರ ಮೋದಿ ಅವರಿಗೆ ಇಡೀ ದೇಶವೇ ಅಲ್ಲದೆ ಹೊರದೇಶದಲ್ಲೂ ಬೆಂಬಲ ಸಿಗುತ್ತಿರುವುದು ಸಂತೋಷದ ಸಂಗತಿ. ದೇಶವನ್ನು ಸಂಕಷ್ಟದಿಂದ ಪಾರು ಮಾಡಲು ಹಾಗೂ ಸುಭದ್ರವಾಗಿಡಲು ಸಮರ್ಥ ವ್ಯಕ್ತಿಯಾಗಿರುವ ಮೋದಿ ಅವರಿಂದ ಮಾತ್ರ ಸಾಧ್ಯ. ಮೋದಿ ಪ್ರಧಾನಿಯಾದಲ್ಲಿ ಮಾತ್ರ ದೇಶದ ಜನಸಾಮಾನ್ಯರ ಸಂಕಷ್ಟ ಪರಿಹರಿಸಿ ದೇಶವನ್ನು ಸಾಲಮುಕ್ತಿ ಮತ್ತು ಭಯಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದರು.
ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್ ಮಾತನಾಡಿ, ದೇಶಾದ್ಯಂತ ಬಿಜೆಪಿ ಪರವಾದ ಅಲೆ ಎದ್ದಿದೆ. ಅದಕ್ಕೆ ತಕ್ಕಂತೆ ಬಿಜೆಪಿ ಎಲ್ಲ ರೀತಿಯ ರಂಗಸಜ್ಜಿಕೆ ಸಿದ್ಧಮಾಡಿಕೊಂಡಿದೆ. ಕೇಂದ್ರದ ಯುಪಿಎ ಸರ್ಕಾರವು 3ಜಿ, ಕಲ್ಲಿದ್ದಲು ಮತ್ತಿತರ ಹಗರಣಗಳಿಂದಾಗಿ ಬೇಸತ್ತಿರುವ ದೇಶದ ಜನರು ಕಾಂಗ್ರೆಸ್ ಕಿತ್ತೊಗೆಯುವ ಮನಸ್ಸು ಮಾಡಿದ್ದಾರೆ ಎಂದರು.
ಮುಖಂಡ ನವಿಲೆ ಅಣ್ಣಪ್ಪ ಮಾತನಾಡಿ, ತುರ್ತು ಪರಿಸ್ಥಿತಿ ನಂತರ ಹಾಸನ ಲೋಕಸಭಾ ಚುನಾವಣೆಯಲ್ಲಿ ಕಡೂರು ಹಾಗೂ ಹಾಸನ ಕ್ಷೇತ್ರಗಳು ಕಾಂಗ್ರೆಸ್ಸೇತರ ಪಕ್ಷಗಳಿಗೆ ಬೆಂಬಲಿಸಿದ ಕ್ಷೇತ್ರಗಳಾಗಿವೆ. ಯುಪಿಎ ಸರ್ಕಾರದವರು ಬ್ರಿಟೀಷರಿಗಿಂತ ಹೆಚ್ಚು ಲೂಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಮುಖಂಡರಾದ ಬೀರೂರು ದೇವರಾಜ್, ಕಡೂರು ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರ್, ನಗರ ಘಟಕದ ಅಧ್ಯಕ್ಷ ಎ.ಮಣಿ, ಮುಖಂಡರಾದ ಕಾಮನಕೆರೆ ಶಶಿಧರ್, ಪುರಸಭಾ ಸದಸ್ಯ ರಾಜೇಶ್, ಶಿವಶಂಕರ್, ಎ.ಇ. ರತ್ನ ಇದ್ದರು.
--
'ರೈತ ಕ್ಷೇತ್ರ ಪಾಠ ಶಾಲೆ ಯಶಸ್ವಿ'
ನರಸಿಂಹರಾಜಪುರ: ಕೃಷಿ ಇಲಾಖೆಯ ಭೂ ಚೇತನ ಯೋಜನೆಯಡಿ ನಡೆಯುತ್ತಿರುವ ರೈತ ಕ್ಷೇತ್ರ ಪಾಠ ಶಾಲೆಯು ಯಶಸ್ವಿಯಾಗುತ್ತಿದೆ ಎಂದು ತಾಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಭಾನುವಾರ ಹಾತೂರು ಗ್ರಾಮದ ರಾಘವೇಂದ್ರ ಅವರ ಕೃಷಿ ಕೇತ್ರದಲ್ಲಿ ಕೃಷಿ ಇಲಾಖೆಯ ಭೂ ಚೇತನ ಯೋಜನೆಯಡಿ ನಡೆದ ಬತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಸೀತೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಎಸ್. ಉಮೇಶ್ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಬಂದರೆ ಮಾತ್ರ ರೈತರ ಬದಕು ಹಸನಾಗುತ್ತದೆ ಎಂದರು.
ಕೃಷಿ ಇಲಾಖೆಯ ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕಿ ಕು. ವಾಸುಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಭೂ ಚೇತನ ಯೋಜನೆಯಡಿ ನಡೆಯುತ್ತಿರುವ ರೈತ ಕ್ಷೇತ್ರ ಪಾಠ ಶಾಲೆ ಮತ್ತು ಕ್ಷೇತ್ರೋತ್ಸವದ ಉದ್ದೇಶ ಮತ್ತು ಮಹತ್ಸದ ಬಗ್ಗೆ ವಿವರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಾತೂರಿನ ಕೃಷಿಕ ಕುಟ್ಟಿ ಪೂಜಾರಿ ವಹಿಸಿದ್ದರು. ಅತಿಥಿಗಳಾಗಿ ಬೆಳ್ಳೂರು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಬಿ.ಎಸ್. ಬಾಲಕೃಷ್ಣ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

