ಚಿಕ್ಕಮಗಳೂರು

ಪರಭಾಷಿಗರಿಗೂ ಕನ್ನಡ ಕಲಿಸಿ: ದೇವರಾಜ್

Published On :

ಕ.ಪ್ರ. ವಾರ್ತೆ, ಬೀರೂರು, ಡಿ.4
ಕನ್ನಡಿಗರು ಪರಭಾಷಿಗರ ವಿಶ್ವಾಸ ಗಳಿಸಿ, ಕನ್ನಡ ಕಲಿಯುವಂತೆ ಪ್ರೋತ್ಸಾಹಿಸುವಲ್ಲಿ ಮುಖ್ಯ ಪಾತ್ರ ವಹಿಸುವ ಮೂಲಕ ಕನ್ನಡ ತಾಯಿಯ ಸೇವೆ ಸಲ್ಲಿಸಬೇಕು ಎಂದು ಬಿಜೆಪಿ ಮುಖಂಡ ಬೀರೂರು ದೇವರಾಜ್ ಹೇಳಿದರು.
ಪಟ್ಟಣದ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಆಯೋಜಿಸಿದ್ದ 58 ನೇ ಕನ್ನಡ ರಾಜ್ಯೋತ್ಸವ  ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಿಗರು ಕನ್ನಡ ಕಲಿತು ಕನ್ನಡಕ್ಕಾಗಿ ಹೋರಾಡಬೇಕು. ಆಟೋ ಚಾಲಕರು ದಿನಪೂರ್ತಿ ದುಡಿದ ಹಣವನ್ನು ದುರುಪಯೋಗ ಪಡಿಸಿಕೊಳ್ಳದೆ ಸಂಸಾರ ನಡೆಸಿಕೊಂಡು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸಕೊಡಿಸಿ ಇತರರಂತೆ ಪ್ರಗತಿ ಹೊಂದಬೇಕು ಎಂದರು.
ರಾಜ್ಯದಲ್ಲಿ ಕನ್ನಡಿಗರು ಅನ್ಯರನ್ನು ಪ್ರೀತಿಸುತ್ತಾರೇ ವಿನಹ ಅವರಿಗೆ ಕನ್ನಡ ಕಲಿಸಲು ಪ್ರಯತ್ನಿಸುವುದಿಲ್ಲ. ಅನ್ಯರಿಗೆ ನಮ್ಮ ಮಾತೃಭಾಷೆ ಬಗ್ಗೆ ಒಲವು ತೋರಿಸುವಂತೆ ಆಕರ್ಷಿಸಿದಲ್ಲಿ ಮಾತ್ರ ಕನ್ನಡ ರಾಜ್ಯೋತ್ಸದ ದಿನಾಚರಣೆಗೆ ನಿಜವಾದ ಅರ್ಥ ದೊರೆತಂತಾಗುತ್ತದೆ ಎಂದರು.
ಜೆಡಿಎಸ್ ಮುಖಂಡ ಎಚ್. ಉಮೇಶ್ ಮಾತನಾಡಿ, ಅಧಿಕಾರಿಗಳಿಂದ ಹಿಡಿದು ರಾಜ್ಯದಲ್ಲಿ ವಾಸ ಮಾಡುತ್ತಿರುವವರೆಲ್ಲರೂ ಕನ್ನಡ ಭಾಷೆಗೆ ಒತ್ತು ನೀಡಿದರೆ ಸರ್ವರೂ ಕನ್ನಡ ಕಲಿಯುತ್ತಾರೆ. ಆಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಸ್. ರಮೇಶ್ ಮಾತನಾಡಿದರು. ಆಟೋ ಸಂಘದ ಅಧ್ಯಕ್ಷ ಎನ್. ಶಂಕರ್  ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ವಿ. ಜಯರಾಂ, ಪುರಸಭಾ ಸದಸ್ಯ ವಿಜಯೇಂದ್ರ ಬಾಬು, ಮುಕ್ತಿಯಾರ್, ಈಶ್ವರಪ್ಪ, ಅರ್ಜುನ್, ಪುರಸಭೆ ಮುಖ್ಯಾಧಿಕಾರಿ ಕೃಷ್ಣಮೂರ್ತಿ, ಮಾಣಿಕ್ ಭಾಷಾ, ಉಪಾಧ್ಯಕ್ಷ ಸದಾಶಿವ, ರುದ್ರೇಗೌಡ, ಸಂಘದ ಕಾರ್ಯದರ್ಶಿ ರಾಜು, ಚಲನಚಿತ್ರ ನಟರಾದ ನೇಹಾ ಪಾಟೀಲ್, ಪೂರ್ಣಿಮಾ, ಶಿಕ್ಷಣ ಇಲಾಖೆಯ ಶ್ರೀಧರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪತ್ರಕರ್ತ ಎನ್. ಸೋಮಶೇಖರ್, ಪೊಲೀಸ್ ಉಪ ನಿರೀಕ್ಷಕ ಪುಟ್ಟಸ್ವಾಮಿ, ಸೋಮಪ್ಪ, ಸುರೇಶ್ ಹಾಗೂ  ಖ್ಯಾತ ಶಿಲ್ಪಿ ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಲಾಯಿತು.
ಹೆಸರಾಂತ ಯೋಗಪಟು ಬಾಲಕಿ ಕೃಪಾ ಶ್ರೀಧರ್ ಯೋಗ ಪ್ರದರ್ಶಿಸಿದರು. ಕಡೂರು ಪ್ರದೀಪ್ ಚಲನ ಚಿತ್ರನಟರ ಧ್ವನಿ ಮೂಲಕ ಜನರ ಮನ ರಂಜಿಸಿದರು. ಅಂಜನ್ ಕುಮಾರ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.