ಚಿಕ್ಕಮಗಳೂರು

ಅವಳಿ ಪಟ್ಟಣಗಳಿಗೆ ಶೀಘ್ರ ಶುದ್ಧ ನೀರು

Published On :

ಕಡೂರು: ಆಮೆಗತಿಯಲ್ಲಿ ಸಾಗುತ್ತಿದ್ದ ಭದ್ರಾ ನದಿಯಿಂದ ಕಡೂರು, ಬೀರೂರು ಪಟ್ಟಣಗಳಿಗೆ ಶಾಶ್ವತ ಕುಡಿಯುವ ನೀರೊದಗಿಸುವ ಯೋಜನೆಗೆ ವೈ.ಎಸ್.ವಿ. ದತ್ತ ಅವರು ಕಡೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಮೇಲೆ ಯೋಜನೆ ಜಾರಿಗಿದ್ದ ಸಮಸ್ಯೆ ನಿವಾರಿಸಿದ್ದು, ಶೀಘ್ರದಲ್ಲೇ ಅವಳಿ ಪಟ್ಟಣಗಳಿಗೆ ಶುದ್ಧ  ಕುಡಿಯುವ ನೀರು ದೊರಕಲಿದೆ ಎಂದು ಕಡೂರು ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಕಡೂರು ಪಟ್ಟಣದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಪುರಸಭಾ ಸದಸ್ಯರಾಗಿ, ಕೆ.ಎಂ. ಕೃಷ್ಣಮೂರ್ತಿಯವರು ಶಾಸಕರಾಗಿದ್ದ 2003ರಲ್ಲಿ  ಭದ್ರಾ ನದಿಯಿಂದ ಕಡೂರು, ಬೀರೂರು ಪಟ್ಟಣಗಳಿಗೆ ಶಾಶ್ವತ ನೀರೊದಗಿಸುವ ಈ ಕಾಮಗಾರಿಗೆ ಚಾಲನೆ ಸಿಕ್ಕಿತು ಎಂದರು.
ಆನಂತರ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದ ಈ ಯೋಜನೆಗೆ ದತ್ತ ಅವರು ಶಾಸಕರಾದ ಕೆಲವೇ ದಿನಗಳಲ್ಲಿ ಚುರುಕು ಸಿಕ್ಕಿದೆ.
ರು. 1339 ಲಕ್ಷ: ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ದತ್ತ ಅವರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ನೀರಾವರಿ ಸಚಿವರು, ಹೆಬ್ಬೆಯಿಂದ ಬೀರೂರು ಪಟ್ಟಣಕ್ಕೆ ನೀರಿನ ಯೋಜನೆಗೆ ಸರ್ಕಾರವು 2007ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಅಂದಾಜು ವೆಚ್ಚ ರು. 1339 ಲಕ್ಷವನ್ನು ಭದ್ರಾ ನದಿಯಿಂದ ಕಡೂರು ಹಾಗೂ ಮಾರ್ಗಮಧ್ಯದ 34 ಹಳ್ಳಿಗಳಿಗೆ ನೀರು ಕೊಡಲು ನೀಡಲಾಗಿತ್ತು ಎಂದಿದ್ದಾರೆ.
ಆಮೇಲೆ ಈ ಯೋಜನೆ ಪರಿಷ್ಕೃತಗೊಂಡು 2013ರಲ್ಲಿ ಯುಐಡಿ ಎಸ್‌ಎಸ್‌ಎಂ, ಯೋಜನೆಯಲ್ಲಿ ಎರಡು ಪಟ್ಟಣಗಳಿಗೆ ಪರಿಷ್ಕೃತ ಅಂದಾಜು ವೆಚ್ಚ ರು. 4920 ಲಕ್ಷಕ್ಕೆ ಅನುಮೋದನೆ ನೀಡಲಾಯಿತು ಎಂದು ಉತ್ತರಿಸಿದ್ದಾರೆ ಎಂದರು.
ಶಾಸಕರು ಬೆಂಗಳೂರಿನಲ್ಲಿರುತ್ತಾರೆ ಎಂದು ದೂರುವ ಅನ್ಯಪಕ್ಷದವರು ಶಾಸಕರು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ವಾರದಲ್ಲಿ ಕೆಲದಿನ ಬೆಂಗಳೂರಲ್ಲಿ ಇರಬೇಕಾಗುವುದರಿಂದ ತಪ್ಪು ತಿಳಿಯಬಾರದು ಎಂದ ಶ್ರೀನಿವಾಸ್, ದತ್ತರವರು ಸರ್ಕಾರದ ಮೇಲೆ ಒತ್ತಡ ತಂದು ಕ್ಷೇತ್ರಕ್ಕೆ ಜರೂರಾಗಿ ಆಗಬೇಕಾಗಿರುವ ಕೆಲಸ ತಂದು ಅಭಿವೃದ್ದಿ ಮಾಡಲಿದ್ದಾರೆ. ಅಭಿವೃದ್ಧಿಗೆ ಎಲ್ಲರೂ ಪಕ್ಷಾತೀತವಾಗಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಜೆಡಿಎಸ್ ಮುಖಂಡ ಲಕ್ಕಣ್ಣ, ಕೆ.ಎಸ್. ತಿಪ್ಪೇಶ್, ವಿನಯ್ ದಂಡಾವತಿ, ಕಂಸಾಗರ ಶೇಖರ್, ಪ್ರಗತಿ ಸೋಮಣ್ಣ, ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.