ಸಾಹಿತ್ಯದಿಂದ ಭ್ರಾತೃತ್ವ ವೃದ್ಧಿ
ಕ.ಪ್ರ.ವಾರ್ತೆ ಮೂಡಿಗೆರೆ ಡಿ.10
ಸಾಹಿತ್ಯವನ್ನು ಓದಿ ಅರ್ಥ ಮಾಡಿಕೊಂಡಲ್ಲಿ ನಿಜವಾದ ಮನುಷ್ಯರಾಗಿ ರೂಪುಗೊಳ್ಳಲು ಸಾಧ್ಯ ಎಂದು ವಿದ್ವಾನ್ ಚಂದ್ರಶೇಖರ ಕೆದಿಲಾಯ ಅಭಿಪ್ರಾಯಪಟ್ಟರು.
ಕಳಸ ಪಟ್ಟಣದ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ನಡೆದ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಪ್ರಬೋಧಿನಿ ವಿದ್ಯಾ ಕೇಂದ್ರ ಜಗದೀಶ್ವರ ಆಂಗ್ಲ ಮಾಧ್ಯಮ ಶಾಲೆ ಸಹಯೋಗದಲ್ಲಿ ಏರ್ಪಡಿಸಿದ್ದ ಅನ್ನಪೂರ್ಣೇಶ್ವರಿ ದತ್ತಿನಿಧಿ ಉಪನ್ಯಾಸದಲ್ಲಿ “¨ÚÈÚß% ಮತ್ತು ಸಂಸ್ಕೃತಿ ಉತ್ಕಲದಲ್ಲಿ ಸಾಹಿತ್ಯದ ®Û}ÚÃ’ ವಿಷಯದ ಬಗ್ಗೆ ಅವರು ಮಾತನಾಡಿದರು.
ಸಾಹಿತ್ಯ ಮತ್ತು ಧರ್ಮ ಸಂಸ್ಕ ೃತಿ ಪರಸ್ಪರ ಒಂದನ್ನು ಬಿಟ್ಟು ಒಂದಿಲ್ಲ. ಸಾಹಿತ್ಯದಲ್ಲಿ ಬರುವುದು ನಮ್ಮ ಧರ್ಮ ಸಂಸ್ಕೃತಿಯಲ್ಲೂ ಬರುತ್ತದೆ. ಜೈನ ಸಾಹಿತ್ಯ, ವಚನ ಸಾಹಿತ್ಯ, ದಾಸಸಾಹಿತ್ಯ, ಸೂಫಿ ಸಾಹಿತ್ಯಗಳು ಕೂಡ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿವೆ. ಎಲ್ಲಾ ಧರ್ಮಗಳ ಮೂಲ ತಳಹದಿ ಮಾನವತೆಯೇ ಆಗಿದೆ. ಸತ್ಯ ಶಾಂತಿ ಪ್ರೇಮ ಬಿಂಬಿಸುತ್ತದೆ. ಹೊಸ ಹೊಸ ಧರ್ಮಗಳು ಹುಟ್ಟಿದಂತೆ ಸಾಹಿತ್ಯವು ಹೊಸ ಹೊಸ ವಿಚಾರಧಾರೆ ಹೊರತರುತ್ತದೆ. ಆದರೆ ಮೂಲದಲ್ಲಿ ಎಲ್ಲಾ ಧರ್ಮದ ಮೂಲಕ ಹರಿದು ಬಂದ ಸಾಹಿತ್ಯವೂ ವಿಶ್ವ ಭ್ರಾತ್ರುತ್ವವನ್ನು ಬೋಧಿಸುತ್ತದೆ ಎಂದರು.
ಬಸವಣ್ಣನವರ ಕ್ರಾಂತಿಕಾರಿ ವಿಚಾರಧಾರೆಗಳಿಂದ ವಚನ ಸಾಹಿತ್ಯ ಬೆಳೆದು ಇಂದು ವಿಶ್ವದಲ್ಲಿಯೇ ಶ್ರೇಷ್ಠ ಸಾಹಿತ್ಯ ಎನಿಸಿದೆ. ಮಾಧ್ವ ಪರಂಪರೆ ಬೆಳೆದಂತೆ ವ್ಯಾಸರಾಜರಿಂದ ಭಕ್ತಿಗೀತೆಗಳು ಶ್ರೇಷ್ಠ ಸಾಹಿತ್ಯ ಎನಿಸಿತು. ಯಾವುದೇ ಧರ್ಮ, ಸಂಸ್ಕೃತಿಯ ಭಾಷೆಯಿಲ್ಲದೆ ಬೆಳೆಯಲಾರದು. ವೇದ ಕಾಲದಲ್ಲಿ ಸಂಸ್ಕೃತ ಭಾಷೆಯಿಂದ ಧರ್ಮ ಹಾಗೂ ಸಂಸ್ಕೃತಿಗಳ ಬೆಳವಣಿಗೆ ಬಂದರೆ, ಮುಂದಿನ ದಿನಗಳಲ್ಲಿ ಕನ್ನಡ, ತಮಿಳಿನಂತಹ ಸ್ಥಳೀಯ ಬಾಷೆಗಳು ಧರ್ಮದ ಬೆಳವಣಿಗೆಗೆ ಕಾರಣವಾಗಬಹುದು. ಇಂದು ಯಾವುದೇ ಧರ್ಮ ಅಥವಾ ಅವರ ಸಂಸ್ಕೃತಿ ನೋಡಬೇಕಾದರೆ ಭಾಷೆಯ ನೆರವಿಲ್ಲದೆ ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟಿಸಿದ ಕಿರುತೆರೆ ಕಲಾವಿದ ರಾಜಗೋಪಾಲ ಜೋಷಿ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟಿಸಿ ಅದರಲ್ಲಿ ಕನ್ನಡವನ್ನು ಬೆಳೆಸುವ ಜಾಗೃತಿ ಮಾಡಿದರೆ ಕನ್ನಡ ಸಾಹಿತ್ಯವನ್ನು ಉಳಿಸಬಹುದು. ಆಂಗ್ಲಭಾಷೆ ಬೇಕು. ಆದರೆ, ಮೊದಲು ನಮ್ಮ ಕನ್ನಡತನ ಉಳಿಸಿ ನಂತರ ಬೇರೆ ಭಾಷೆ ಸಖ್ಯ ಬೆಳೆಸಬೇಕಿದೆ ಎಂದರು.
ಕಸಾಪ ಹೋಬಳಿ ಅಧ್ಯಕ್ಷ ಅಬ್ದುಲ್ ಕರೀಂ, ಜೆಇಎಂ ಶಾಲಾ ಅಧ್ಯಕ್ಷ ಎಚ್.ಎಸ್.ಶ್ರೀಕಾಂತ್, ಕೃಷಿಕ ಕೆ.ದೇವದಾಸ್, ಪ್ರಬೋಧಿನಿ ವಿದ್ಯಾ ಕೇಂದ್ರದ ಮುಖ್ಯ ಶಿಕ್ಷಕ ಆನಂದ್, ಕಸಾಪ ತಾಲೂಕು ನಿಕಟ ಪೂರ್ವ ಅಧ್ಯಕ್ಷ ಅ.ರಾ. ರಾಧಾಕೃಷ್ಣ, ಸತೀಶ್ಚಂದ್ರ, ಅಗಸ್ಟೀನ್, ಆಶೋಕ್, ನಿತ್ಯಾನಂದ ಶೆಣೈ, ರವೀಂದ್ರ ಭಟ್, ತಿಮ್ಮಪ್ಪ ಗೌಡ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

