ಚಿಕ್ಕಮಗಳೂರು

15ರಂದು ಹೃದ್ರೋಗ, ಸೀಳ್ದುಟಿ ತಪಾಸಣೆ

Published On :

ಚಿಕ್ಕಮಗಳೂರು:  ಮಂಗಳೂರಿನ ಪ್ರತಿಷ್ಠಿತ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ರೋಟರಿ ಕ್ಲಬ್ನ ಸಹಯೋಗದೊಂದಿಗೆ ಜಿಲ್ಲೆಯ ಎನ್.ಆರ್.ಪುರದ ಪುಷ್ಪ ಆಸ್ಪತ್ರೆಯಲ್ಲಿ ಡಿ.15ರಂದು ಮಕ್ಕಳ ಹೃದ್ರೋಗ ಮತ್ತು ಸೀಳುತುಟಿ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ.
ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿರುವ ಶಿಬಿರದಲ್ಲಿ ಎ.ಜೆ. ಆಸ್ಪತ್ರೆಯ ಹೃದ್ರೋಗ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದ ತಜ್ಞ ವೈದ್ಯರ ತಂಡ ರೋಗಿಗಳನ್ನು ಉಚಿತವಾಗಿ ತಪಾಸಣೆ ಮಾಡುವುದರ ಜೊತೆಗೆ ವೈದ್ಯಕೀಯ ಸಲಹೆ ಮತ್ತು ಸೂಚನೆಯನ್ನು ನೀಡಲಿದೆ.
ಆಗಾಗ ಉಸಿರಾಟದ ತೊಂದರೆ, ಆಟವಾಡುವ ವೇಳೆ ಮೈ ನೀಲಿಗಟ್ಟುವ ಸಮಸ್ಯೆ ಎದುರಿಸುತ್ತಿರುವ ಮಕ್ಕಳು ಸೀಳುತುಟಿ, ಸೀಳಂಗುಲ, ಮುಖ, ಕಿವಿ, ಮೂಗು, ಕೈಗಳ ವಿಕೃತಿ, ಬೆರಳುಗಳೇ ಇಲ್ಲದಿರುವುದು, ಅಪಘಾತದಿಂದ ಬಲಹೀನವಾದ ಕೈ, ಸುಟ್ಟಗಾಯದಿಂದ ಚರ್ಮ ಮುದುಡುವಿಕೆ, ಚರ್ಮದ ವಿಕೃತಿ, ಬಾಯಿಯ ಕ್ಯಾನ್ಸರ್, ಕಲೆಗಳು, ಮಚ್ಚೆಗಳು, ಬೋಳುತಲೆ ಸಮಸ್ಯೆ ಎದುರಿಸುತ್ತಿರುವವರು ಈ ಶಿಬಿರದಲ್ಲಿ ತಪಾಸಣೆಗೆ ಒಳಪಡಬ ಹುದಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಗ ತಿಳಿಸಿದ್ದಾರೆ.
ತಪಾಸಣೆಗೆ ಒಳಗಾದವರಿಗೆ ಎಕೋಕಾರ್ಡಿಯೋಗ್ರಫಿಯನ್ನು ಉಚಿತವಾಗಿ ಮಾಡಲಾಗುವುದು. ಹೃದಯ ರೋಗಿ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಸೀಳುತುಟಿ ಸಮಸ್ಯೆ ಇರುವವರಿಗೆ ಊಟ, ವಸತಿ, ಪ್ರಯಾಣದ ವೆಚ್ಚವನ್ನೂ ಸಹ ನೀಡುವುದರ ಜೊತೆಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಮಾಹಿತಿಗೆ 8147617288 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.