ಚಿಕ್ಕಮಗಳೂರು

ಉತ್ತಮ ಆರೋಗ್ಯಕ್ಕೆ ಆಹಾರ ಶುದ್ಧಿ ಅಗತ್ಯ

Published On :

ಕ.ಪ್ರ.ವಾರ್ತೆ, ಹೊಸನಗರ, ಡಿ.12 ಉತ್ತಮ ಆರೋಗ್ಯ ಹೊಂದಲು ಮಾನಸಿಕ ನೆಮ್ಮದಿ ಅಗತ್ಯ. ನೆಮ್ಮದಿ ಸಾಧಿಸಲು ಆಹಾರ ಶುದ್ಧಿ, ಪಥ್ಯ, ಜಪತಪ ನೆರವಾಗುತ್ತವೆ ಎಂದು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀ  ಹೇಳಿದರು.
ಹವ್ಯಕ ವಲಯ ಹಾಗೂ ನಗರ ಸುವರ್ಣ ಕ್ಲಿನಿಕ್ ಸಂಯುಕ್ತವಾಗಿ ರಾಮಚಂದ್ರಾಪುರದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಮತ್ತು ಆಯುರ್ವೇದ ಚಿಕಿತ್ಸಾ ಸಲಹಾ ಶಿಬಿರ ಉದ್ಘಾಟಿಸಿ, ದೈವ ವಿರೋಧವಿದ್ದಾಗಲೂ ನೆಮ್ಮದಿ ಇಲ್ಲದೆ ಅನಾರೋಗ್ಯ ಬಾಧಿಸುತ್ತದೆ ಆಗ ಕೇವಲ ಔಷಧ ಕೆಲಸ ಮಾಡದು ಮನಸ್ಸಿಗೆ ನೆಮ್ಮದಿ ನೀಡುವ ಅರ್ಚನೆ  ಅಗತ್ಯವಾಗಬಹುದು ಎಂದರು.
ಆರೋಗ್ಯವಾಗಿರಲು ಆಹಾರ ಶುದ್ಧಿ ಅತ್ಯಂತ ಮುಖ್ಯ. ಕೆಲಮೊಮ್ಮೆ ಪಥ್ಯ ಕೂಡ ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ. ಇನ್ನು ಧ್ಯಾನ ಜಪತಪಗಳು ಮನಸ್ಸಿನಲ್ಲಿ  ಪ್ರಶಾಂತತೆ ಆವರಿಸಿ ವ್ಯಕ್ತಿಯ ದೇಹ ಸುಸ್ಥಿತಿಗೆ ಬರುತ್ತದೆ ಎಂದರು.
ಶಿಬಿರದಲ್ಲಿ ತಪಾಸಣೆ ನಡೆಸಿದ ಮಹಾರಾಷ್ಟ್ರದ ಆಯುರ್ವೇದ ನಾಡಿ ತಜ್ಞ ಸಚಿನ್, ವೈದ್ಯರಾದ ನಗರ ಚೈತನ್ಯ, ವಸಂತಕುಮಾರ್ ಕುಂಬ್ಳೆ ಇದ್ದರು. ವಲಯದ ಅಧ್ಯಕ್ಷ ವಡ್ಡಿನಬೈಲು ವೆಂಕಟೇಶ್, ಸಂಪೆಕಟ್ಟೆ ಕುಮಾರ್ ಮೊದಲಾದವರು ಇದ್ದರು. ವಿವಿಧ ಕಡೆಗಳಿಂದ ಆಗಮಿಸಿದ್ದ ನೂರಾರು ರೋಗಿಗಳು ತಪಾಸಣೆ ಹಾಗೂ ಚಿಕಿತ್ಸೆ ಪಡೆದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.