'ಮಕ್ಕಳಿಗೆ ಪಠ್ಯದಷ್ಟೇ ಕ್ರೀಡೆಯೂ ಅಗತ್ಯ'
ಚಿಕ್ಕಮಗಳೂರು: ಮಕ್ಕಳಿಗೆ, ಪಠ್ಯ ಕ್ರಮದ ಬಗ್ಗೆ ಎಷ್ಟು ಆಸಕ್ತಿ ಇದೆಯೋ ಅಷ್ಟೇ ಆಸಕ್ತಿ ಕ್ರೀಡೆ ಮತ್ತು ಸಾಸ್ಕೃತಿಕ ಚಟುವಟಿಕೆಗಳಲ್ಲಿಯೂ ಇರಬೇಕು ಎಂದು ಶ್ರೀ ಸಾಯಿ ಏಂಜಲ್ಸ್ ಸಂಸ್ಥೆಯ ಮುಖ್ಯ ಪ್ರಾಂಶುಪಾಲರಾದ ವಿಜಯಾ ನಾಗೇಶ್ ಹೇಳಿದ್ದಾರೆ.
ಶ್ರೀ ಸಾಯಿ ಏಂಜಲ್ಸ್ ಶಾಲೆಯ 20ನೇ ವರ್ಷದ ಸಂಭ್ರಮಾಚರಣೆ ಮತ್ತು ಶಾಲಾ ವಾರ್ಷಿಕೋತ್ಸವ ಅಂಗವಾಗಿ ನಗರದ ಹೊರವಲಯದ ಸಿರಿಗಾಪುರದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ 2 ದಿನಗಳ ಸಾಂಸ್ಕೃತಿಕ ಉತ್ಸವದಲ್ಲಿ ಅವರು ಮಾತನಾಡಿದರು.
ಮಾದರಿ ಲ್ಯಾಬ್: ಈ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜಿಸುವ ನಿಟ್ಟಿನಲ್ಲಿ ಗಣಿತ ಮತ್ತು ಇಂಗಿಷ್‌ನ ಅತ್ಯಾಧುನಿಕ ಮಾದರಿಯ ಲ್ಯಾಬ್ ಅಳವಡಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನದ ಜೊತೆ ವೈಜ್ಞಾನಿಕವಾಗಿ ಬೆಳವಣಿಗೆ ಹೊಂದಬೇಕೆಂಬ ದೃಷ್ಟಿಹೊಂದಿ ಶಾಲೆಯಲ್ಲಿ ಇತ್ತೀಚೆಗೆ ವಿಜ್ಞಾನ ವಸ್ತು ಪ್ರದರ್ಶನ ಮಾಡುವ ಮೂಲಕ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವಲ್ಲಿ ಯಶಸ್ಸಿನ ಹಾದಿ ಕಂಡಿದ್ದೇವೆಂದರು.
ಪ್ರಾಂಶುಪಾಲ ಯಾಮಿನಿ ಸವೂರ್ ಮಾತನಾಡಿ, ಆಧುನಿಕ ಜೀವನದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು, ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ಗಣಿತ ಪ್ರಯೋಗಾಲಯವನ್ನು ಸ್ಥಾಪಿಸಿದ ಕೀರ್ತಿ ಸಾಯಿ ಏಂಜಲ್ಸ್ ಶಾಲೆಯದ್ದಾಗಿದೆ. ಈ ಶಾಲೆಯ ಮಕ್ಕಳು ನೃತ್ಯ, ಆಶುಭಾಷಣ ಸ್ಪರ್ಧೆಗಳಲ್ಲಿ ಅಂತರ ಶಾಲೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸುವ ಮೂಲಕ ಉತ್ತಮ ವಾಕ್ಚಾತುರ್ಯ ಹೊಂದಿದ್ದಾರೆಂಬ ಕೀರ್ತಿಗೆ ಪಾತ್ರರಾಗಿದ್ದಾರೆಂದರೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: ಕಾರ್ಯಕ್ರಮದಲ್ಲಿ ಕರಗ, ಮರಾಠಿ ನೃತ್ಯ, ಶಿವನ ಡಮರು ಡ್ಯಾನ್ಸ್, ಗಣೇಶನ ವೇಷ, ಕೂಚು ಪುಡಿನೃತ್ಯ ಮತ್ತು ಕನ್ನಡವನ್ನು ಪ್ರತಿ ಬಿಂಬಿಸುವ ಜೋಗದಸಿರಿ ಬೆಳಕಿನಲ್ಲಿ, ಬೆಳಂ ಬೆಳಗ, ಹಚ್ಚುವೆವು ಕನ್ನಡದ ದೀಪದ ಹಾಡಿಗೆ ಹಳದಿ-ಕೆಂಪು ಬಣ್ಣದ ಬಟ್ಟೆ ತೊಟ್ಟು ನರ್ತಿಸಿದ ಭಂಗಿ ಎಲ್ಲರ ಅಕರ್ಷಣೆಯಾಗಿತ್ತು.ಆಡಳಿತ ಮಂಡಳಿ ಖಜಾಂಚಿ ನಾಗೇಶ್, ಉಪಾಧ್ಯಕ್ಷ ಅನಿಲ್ ಸವೂರ್, ಸಹ ಕಾರ್ಯದರ್ಶಿ ಕಾರ್ತಿಕ್ ಮತ್ತು ಸದಸ್ಯರುಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

