ಚಿಕ್ಕಮಗಳೂರು

ನಗುವಿನಿಂದ ಜೀವನ ಕ್ಷೇಮ: ಜೋಷಿ

Published On :

ಚಿಕ್ಕಮಗಳೂರು: ಜೀವನದಲ್ಲಿ ನಗು ಎಷ್ಟು ಪ್ರಾಮುಖ್ಯವಾಗಿರುತ್ತದೆಂದರೆ ಆ ನಗುವಿನ ಜೊತೆ ಸಾರ್ಥಕದ ವ್ಯವಸ್ಥೆ ಕಾರಣವಾಗಿರುತ್ತದೆ ಎಂದು ಹೊರನಾಡು ಅನ್ನಪೂಣೇಶ್ವರಿ ಕ್ಷೇತ್ರದ ಧರ್ಮಕರ್ತರಾದ ಭೀಮೇಶ್ವರ ಜೋಷಿ ಹೇಳಿದ್ದಾರೆ.
ನಗರದ ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘ ಪತ್ರಕರ್ತರ ಕ್ಷೇಮಾಭಿವೃದ್ಧಿಯ ಸಹಾಯಾರ್ಥವಾಗಿ ಬುಧವಾರ ಆಯೋಜಿಸಿದ್ದ ನಗೆಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಗು ಎಲ್ಲಿ ಇರುತ್ತದೋ ಅಲ್ಲಿ ಜೀವನ ಕ್ಷೇಮವಾಗಿರುತ್ತದೆ. ಆ ಕ್ಷೇಮವಾಗಿರುವ ವ್ಯವಸ್ಥೆ ಆಗಬೇಕೆಂದು ಯೋಚನೆ ಮಾಡಿದಾಗ ಆ ಕ್ಷೇಮ ಸಂಪಾದಿಸುವ ವ್ಯವಸ್ಥೆಯ ತಮ್ಮ ದಿನನಿತ್ಯದ ಬದುಕು ಸೂಕ್ತವಾದ ಮಾತು ಸೃಷ್ಟಿ ಮಾಡಿಕೊಂಡಾಗ ಆ ಕ್ಷೇಮ ಸಿಗುತ್ತದೆ. ನಮ್ಮ ಜೀವನಕ್ಕೆ ನೆಮ್ಮದಿಯೂ ಸಿಗುತ್ತದೆ. ಆ ನೆಮ್ಮದಿ ಸಿಕ್ಕಾಗ ನಗು ತನ್ನಿಂದತಾನೆ ಆಶ್ರಯದ ವ್ಯವಸ್ಥೆ ಆಗುತ್ತದೆ ಎಂದರು.
ಮೌಲ್ಯ ಮುಖ್ಯ: ದುಃಖಕ್ಕೆ ಒಳಗಾದಾಗ ನಗು ಮುಖ್ಯವಾಗಿ ಹಾಗೂ ಪ್ರಾಮುಖ್ಯವಾದ ಅಂಶ ಜೀವನಕ್ಕೆ ಕೊಡುತ್ತದೆ. ಬರೀ ಹಣ ಕ್ಷೇಮ ಕೊಡುವುದಿಲ್ಲ. ಹಣ ಒಂದು ಭಾಗ. ಹಣಕ್ಕೆ ಗುಣ ಸೇರಿಕೊಂಡಾಗ ಅದಕ್ಕೆ ಮೌಲ್ಯ ತೊಡಗಿಸುವ ಗುಣಗಳು ಬರುತ್ತವೆ. ಹಣ ಎಷ್ಟು ಮುಖ್ಯವೋ ಮೌಲ್ಯವೂ ಅಷ್ಟೇ ಮುಖ್ಯ. ಇದನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದ ಅವರು, ಕ್ಷೇಮ, ನೆಮ್ಮದಿ, ಸಂತೋಷ, ನಗು ಇವು ಒಂದಕ್ಕೊಂದು ಕೊಂಡಿಯಾಗಿ ಬೆಸೆದುಕೊಂಡಿರುತ್ತವೆ ಎಂದು ಹೇಳಿದರು.
ಅರ್ಥಪೂರ್ಣ: ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಎಲ್ಲರನ್ನೂ ನಗಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಇಂದಿನ ಸ್ಥಿತಿಗೆ ಈ ನಗೆಹಬ್ಬ ಅರ್ಥಪೂರ್ಣವಾಗಿದ್ದು, ಎಲ್ಲರನ್ನೂ ರಂಜಿಸುತ್ತಾ ನಗುವಿನ ಮೂಲಕ ಪತ್ರಕರ್ತರ ನೋವುಗಳನ್ನು ಮರೆಯುವಂತಾಗಿ ಸಂಕಷ್ಟಗಳು ದೂರವಾಗಿ ನೆಮ್ಮದಿ ಸಿಗಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ. ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿಗಾರ ಬಿ. ತಿಪ್ಪೇರುದ್ರಪ್ಪ ಉಪಸ್ಥಿತರಿದ್ದರು. ಸಿ.ಎಸ್. ಬೋಜೇಗೌಡ ಸ್ವಾಗತಿಸಿದರು, ಕಾರ್ಯದರ್ಶಿ ಅಮರ್‌ನಾಥ್ ನಿರೂಪಿಸಿದರು. ರಮೇಶ್ ನಾರಿನಿಂಗಜ್ಜಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.