ಜೀವನದ ಬಗ್ಗೆ ಗುರಿಯಿರಲಿ: ಅಣ್ಣಪ್ಪ ಸಲಹೆ
ನರಸಿಂಹರಾಜಪುರ: ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದ ಬಗ್ಗೆ ಗುರಿ ಇಟ್ಟುಕೊಳ್ಳಬೇಕು. ಆದರೆ ಇಂದು ವಿದ್ಯಾರ್ಥಿಗಳ ಬದಲಿಗೆ ಪೋಷಕರೇ ಮಕ್ಕಳ ಜೀವನವನ್ನು ನಿರ್ಧರಿಸುತ್ತಿದ್ದಾರೆ ಎಂದು ಸ.ಪ್ರ.ದ. ಕಾಲೇಜು ಕನ್ನಡ ವಿಭಾಗದ ಸಹಾಯ ಪ್ರಾಧ್ಯಾಪಕ ಅಣ್ಣಪ್ಪ ಎನ್. ಮಳೀಮಠ ತಿಳಿಸಿದರು.
ಅವರು ಮೆಣಸೂರು ಮೌಂಟ್ ಕಾರ್ಮೆಲ್ ಪ.ಪೂ.ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಮೌಂಟ್ ಕಾರ್ಮೆಲ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿನಾಶದತ್ತ ಸಮಾಜ: ಆಧುನಿಕತೆ ಹೆಸರಲ್ಲಿ ಸಮಾಜ ವಿನಾಶದ ಕಡೆ ಹೋಗುತ್ತಿದೆ. ಅದನ್ನು ಪ್ರಗತಿಯತ್ತ ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಆತ್ಮಶಕ್ತಿ ಹೆಚ್ಚಿಸಿಕೊಂಡರೆ ಬದುಕಿನಲ್ಲಿ ಎದುರಾಗುವ ಹಲವು ಸಮಸ್ಯೆ ಎದುರಿಸಲು ಶಕ್ತಿ ಬರುತ್ತದೆ ಎಂದರು.
ಮೆಣಸೂರು ಗ್ರಾಪಂ ಸದಸ್ಯ ಕೆ. ಅನಿಲ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಜ್ಞಾನ ಹೆಚ್ಚಾಗುತ್ತದೆ ಎಂದರು.
ಲಿಟಲ್ ಪವರ್ ಚರ್ಚ್ನ ಫಾದರ್ ಜೋಸ್ ಮಧುಪ್ಲಾಕಲ್ ಸಮಾರಂಭ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾರ್ಮೆಲಲ್ವಿದ್ಯಾಸಂಸ್ಥೆಯ ಸಿಸ್ಟರ್ ಪ್ಲವರ್ಲೆಟ್ ವಹಿಸಿದ್ದರು.
ತಹಸೀಲ್ದಾರ್ ಕೃಷ್ಣಮೂರ್ತಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಇ.ಸಿ. ಶೇವಿಯಾರ್, ಪ್ರಾಂಶುಪಾಲರಾ ದ ಸಿಸ್ಟರ್ ರೋಸಿನಾ, ಉಪನ್ಯಾಸಕ ಐ.ಎಂ. ರಾಜೀವ, ಟಿ. ಮಂಜುನಾಥ್, ಸ್ವಪ್ನ, ಸುಪ್ರೀತ್, ಕಾಲೇಜು ಸ್ಟೂಡೆಂಟ್ ಕೌನ್ಸಿಲ್ ಸಮಿತಿಯ ಜೋಸ್ನ ಜೋಸ್, ನವ್ಯ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

