ಯೋಜನಾ ಬದ್ಧತೆಯಿಂದ ಸ್ವಾವಲಂಬನೆ ಸಾಧ್ಯ
ಚಿಕ್ಕಮಗಳೂರು: ಪಡೆದ ಸಾಲವನ್ನು ದುಡಿಮೆಗೆ ಬಂಡವಾಳವಾಗಿಸಿಕೊಂಡು ಯೋಜನಾ ಬದ್ಧವಾಗಿ ಬಳಸಿಕೊಂಡರೆ ಸ್ವಾವಲಂಬನೆಗೆ ಸಹಕಾರಿಯಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಜಿಲ್ಲಾ ಸಹಕಾರ ಬ್ಯಾಂಕ್ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಿಸಿ ಮಾತನಾಡಿದ ಅವರು, ಸಾಲದ ಹಣವನ್ನು ಹಬ್ಬ ಸಂತೋಷಕೂಟ, ಬಟ್ಟೆ, ಗೃಹ ಉಪಯೋಗಿ ವಸ್ತುಗಳನ್ನು ಕೊಳ್ಳಲು ವಿನಿಯೋಗಿಸಬಾರದು. ವ್ಯಾಪಾರ, ವ್ಯವಹಾರಗಳಿಗೇ ಬಳಸಬೇಕು ಎಂದು ಸಲಹೆ ಮಾಡಿದರು.
ದೇಶದಲ್ಲೇ ದೊಡ್ಡ ಶ್ರೀಮಂತರಾಗಿರುವ ರಿಲೆಯನ್ಸ್ ಮಾಲಿಕ ಧೀರೂಬಾಯಿ ಅಂಬಾನಿ ಆರಂಭದ ದಿನಗಳಲ್ಲಿ ಪೆಟ್ರೋಲ್ ಬಂಕ್ನಲ್ಲಿ ಉದ್ಯೋಗಿಯಾಗಿದ್ದರು. ಸಂತೆಗಳಲ್ಲಿ ಸೋಪಿನಪುಡಿ ಮಾರುತ್ತಿದ್ದ ವ್ಯಕ್ತಿ 40 ವರ್ಷಗಳಲ್ಲಿ ನಿರ್ಮಾದಂತಹ ದೊಡ್ಡ ಉದ್ದಿಮೆಯ ಮಾಲಿಕರಾಗಿ ಸಾವಿರಾರು ಕೋಟಿ ರು. ಲಾಭಗಳಿಸುತ್ತಿದ್ದಾರೆ. ಇಂತಹ ಸಾವಿರಾರು ಉದಾಹರಣೆಗಳಿಂದ ನಾವು ಪ್ರೇರಣೆ ಪಡೆಯಬೇಕು. ಶ್ರಮವಹಿಸಿ ದುಡಿಯುವುದರಿಂದ ನಮ್ಮ ಬದುಕನ್ನು ಬದಲಾಯಿಸಿಕೊಳ್ಳಬಹುದು ಎಂದರು.
184 ಲಕ್ಷ ಸಹಾಯಧನ: ಸ್ವಸಹಾಯ ಗುಂಪುಗಳ ಮೂಲಕ ಗ್ರಾಮೀಣ ಪ್ರದೇಶದ ಕೃಷಿ ಕಾರ್ಮಿಕರಿಗೆ, ಕುಶಲ ಕರ್ಮಿಗಳಿಗೆ ಸಣ್ಣ ವ್ಯಾಪಾರಸ್ಥರಿಗೆ, ವಿವಿಧ ಚಟುವಟಿಕೆಗಳಿಗೆ ಡಿಸಿಸಿ ಬ್ಯಾಂಕ್ನಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ಎಸ್.ಜಿ.ಎಸ್.ವೈ. ಯೋಜನೆಯಡಿ ಈವರೆಗೆ 244 ಗುಂಪುಗಳಿಗೆ ಸರ್ಕಾರದಿಂದ 184 ಲಕ್ಷ ಸಹಾಯಧನ ನೀಡಲಾಗಿದೆ. ರಾಜ್ಯ ಸರ್ಕಾರದ 25 ಸಾವಿರ ಸಾಲ ಮನ್ನಾ ಯೋಜನೆಯಡಿ ಬ್ಯಾಂಕಿನ ಮೂಲಕ ಸಾಲಪಡೆದ 23,712 ರೈತರ 56.84 ಕೋಟಿ ಅಸಲು, 16 ಕೋಟಿ ಬಡ್ಡಿ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಸಿ.ಆರ್. ಪ್ರೆಮ್ಕುಮಾರ್, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಹಿರಿಯ ಅಧಿಕಾರಿಗಳಾದ ರಂಗಪ್ಪ, ರಾಮಚಂದ್ರ, ವ್ಯವಸ್ಥಾಪಕ ನಿರ್ದೇಶಕಿ ಆಶಾ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

