ಹೆದ್ದಾರಿಯಲ್ಲಿ ಹೆಬ್ಬಂಡೆ ಕಿರಿಕಿರಿ
-ಅನಂತ ನಾಡಿಗ್
ತರೀಕೆರೆ: ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ, ಬೃಹತ್ ಗಾತ್ರದ ಕಲ್ಲು ಬಂಡೆಗಳು ಕಳೆದ ಆರು ತಿಂಗಳಿನಿಂದ ಜನ ಸಂಚಾರ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ಸಾಲು ಸಾಲಾಗಿ ಬಿದ್ದಿವೆ.
ಇವು ಭದ್ರಾನದಿಯಿಂದ ಪಕ್ಕದ ಊರಿಗೆ ನೀರು ತೆಗೆದುಕೊಂಡು ಹೋಗಲು ನಗರ ನೀರು ಸರಬರಾಜು ಇಲಾಖೆ ಪೈಪು ಜೋಡಿಸಲು ದೊಡ್ಡ ಪ್ರಮಾಣದ ಕಾಲುವೆ ತೋಡಿದಾಗ ದೊರೆತ ಬೃಹತ್ ಕಲ್ಲು ಬಂಡೆಗಳಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆ ನೀಡುತ್ತಿರುವ ಮತ್ತು ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಈ ಕಲ್ಲಿನ ರಾಶಿಯನ್ನು ತೆರವುಗೊಳಿಸುವ ಕಾರ್ಯ ಇಲ್ಲಿಯವರೆಗೂ ನಡೆಯಲಿಲ್ಲ.
ರಾ.ಹೆ.ಯಾದುದರಿಂದ ಹಗಲು ರಾತ್ರಿ ಎನ್ನದೆ ಜನ ಸಂಚಾರ ಮತ್ತು ವಾಹನ ಸಂಚಾರ ದಿನದ ಇಪ್ಪತ್ನಾಲ್ಕು ಗಂಟೆಗಳೂ ಸಂಚರಿಸುತ್ತಿರುತ್ತದೆ.
ಪಟ್ಟಣದ ಲಾರಿ, ಟ್ರ್ಯಾಕ್ಟರ್, ಬೈಕು ಮತ್ತಿತರ ವಾಹನ, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ದಿನನಿತ್ಯ ಸಂಚರಿಸಬೇಕು.
ಅಪಾಯದ ತಿರುವಿನಲ್ಲಿ: ಬಿ.ಎಚ್. ರಸ್ತೆಯಲ್ಲಿ ಈ ಕಲ್ಲು ಬಂಡೆಗಳು ಬಿದ್ದಿರುವ ಸ್ಳಳ ತುಂಬಾ ಅಪಾಯದ ತಿರುವಿನಲ್ಲಿದೆ.
ಮೇಲಾಗಿ ಸದಾ ಜನದಟ್ಟಣೆಯಿಂದ ಕೂಡಿರುವ ಸ್ಥಳವಾಗಿದೆ. ಅಲ್ಲದೆ ರಸ್ತೆಯ ಎರಡೂ ಭಾಗದಿಂದ ಎದುರು ಬದುರಾಗಿ ಬರುವ ಯಾವುದೇ ವಾಹನಗಳಿಗೆ ತೀರಾ ತಿರುವಿನಲ್ಲಿರುವ ಈ ಬೃಹತ್ ಗಾತ್ರದ ಕಲ್ಲು ಬಂಡೆಗಳು ಹಗಲು ಹೊತ್ತಿನಲ್ಲೇ ಪಕ್ಕನೆ ವಾಹನ ಚಾಲಕರ ಗಮನಕ್ಕೆ ಬರುವುದಿಲ್ಲ. ಇನ್ನು ರಾತ್ರಿ ಹೊತ್ತಿನ ಪಾಡು ಭಗವಂತನಿಗೇ ಬಿಟ್ಟಿದ್ದು.
ಕಾಲುವೆ ತೋಡಿದಾಗ ಹೊರಹಾಕಿದ ಈ ಕಲ್ಲು ಬಂಡೆಗಳನ್ನು ತೆಗೆಸುವಂತೆ ಪುರಸಭೆ ಸಂಬಂಧಿಸಿದ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಕೂಡಲೇ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದಿರುವ ಈ ಬೃಹತ್ ಗಾತ್ರದ ಕಲ್ಲು ಬಂಡೆಗಳನ್ನು ಸಂಬಂಧಿಸಿದ ಇಲಾಖೆ ಕೂಡಲೇ ತೆರವುಗೊಳಿಸಿ ಜನರ ಮತ್ತು ವಾಹನಗಳ ಸುಗಮಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

