ರಾಜ್ಯ ಬಜೆಟ್ 2013
ಕಳೆದ ವರ್ಷ ಬಜೆಟ್ನ ಜೆರಾಕ್ಸ್. ಹಿಂದಿನ ವರ್ಷದಲ್ಲಿ ಘೋಷಣೆ ಮಾಡಿದ್ದ ಹಲವು ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದಿಲ್ಲ. ಚುನಾವಣೆ ಗುರಿಯನ್ನಿಟ್ಟು ಮಂಡಿಸಿರುವ ಬಜೆಟ್ ಸಮಾಧಾನಕಾರವಾಗಿಲ್ಲ.
-ಕೆಎಂಪಿ ಗೌಡ.
ಹೊಸತೇನೂ ಇಲ್ಲ. ಹಳೆಯ ಬಜೆಟ್ ಮತ್ತೊಮ್ಮ ಮಂಡಿಸಲಾಗಿದೆ. ಮಠಮಾನ್ಯಗಳನ್ನು ತೃಪ್ತಿಪಡಿಸುವ ಕೆಲಸವಾಗಿದೆ. ರೈತರ ಪಾಲಿಗೆ ಇದೊಂದು ನಿರಾಶದಾಯಕ ಬಜೆಟ್
- ಶಶಿಧರ್.
ಅತ್ಯಂತ ಕೆಟ್ಟ ಬಜೆಟ್. ಬಿಜೆಪಿಯ ಮುಂದಿನ ಚುನಾವಣೆಯ ಪ್ರಣಾಳಿಕೆಯಂತಿದೆ. ಕಳೆದ ವರ್ಷದಲ್ಲಿ ಮಂಡಿಸಿರುವ ಬಜೆಟ್ನಲ್ಲಿ ಶೇ. 35 ರಷ್ಟು ಕಾರ್ಯಕ್ರಮಗಳು ಅನುಷ್ಟಾನಕ್ಕೆ ತರಲು ಈ ಸರ್ಕಾರದಿಂದ ಸಾಧ್ಯವಾಗಿಲ್ಲ.
- ಸಿ. ಕೆ. ಸತೀಶ್.
ಈ ಬಜೆಟ್ ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಗಾದೆಯ ಮಾತಿನಂತಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟು ಮಂಡನೆ ಮಾಡಲಾಗಿದೆ. ಇದೊಂದು ಅಂಕಿ ಅಂಶಗಳ ಬಜೆಟ್
-ಜಹೀರ್ ಅಹ್ಮದ್.
ಕೋಟಿ ಕೋಟಿಗಳ ಸುರಿಮಳೆ. ರಾಜ್ಯಪಾಲರ ಭಾಷಣಕ್ಕೆ ಉತ್ತರ ನೀಡಿದಂತಿದೆ. ನೋಡಲು ಖುಷಿ. ಆದರೆ, ಜನರಿಗೆ ಪ್ರಯೋಜನವಿಲ್ಲ. ಬಿಎಸ್ವೈ ತೋರಿಸಿದ ಹಾದಿಯಲ್ಲಿ ಮಠಗಳಿಗೆ ಹಣ ನೀಡಲಾಗಿದೆ.
- ಎ. ನರಸಿಂಹಮೂರ್ತಿ.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಮಂಡಿಸಿದ ಬಜೆಟ್ ಸಮಾಧಾನಕರವಾಗಿದೆ. ಆದರೆ, ತೃಪ್ತಿಕರವಾಗಿಲ್ಲ. ಎಲ್ಲಾ ವರ್ಗದ ಜನರಿಗೆ ಇನ್ನಷ್ಟು ನೆರವಿನ ಅಗತ್ಯತೆ ಇತ್ತು.
- ಕೆ.ಎಂ. ಮೀನಾಕ್ಷಿ.
ಹಳೆಯ ಬಜೆಟ್ ಮಂಡಿಸಿದಂತಿದೆ. ಹೊಸ ಯೋಚನೆಯ ಶಕ್ತಿಯನ್ನು ಕಳೆದುಕೊಂಡಂತ್ತಿದೆ. ಕೃಷಿ ಬಜೆಟ್ ಎಂದು ಹೇಳಿದರೂ ಸಹ ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿಲ್ಲ. ರೈತರನ್ನು ಕಡೆಗಣಿಸಲಾಗಿದೆ.
- ರವೀಶ್ ಕ್ಯಾತನಬೀಡು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

