ಚಿಕ್ಕಮಗಳೂರು

ಶಾಶ್ವತ ನೀರಾವರಿ ಕಲ್ಪಿಸಲು ಆಗ್ರಹಿಸಿ ಧರಣಿ

Published On :

ಕಡೂರು: ತಾಲೂಕಿಗೆ ಶಾಶ್ವತ ನೀರಾವರಿ ಕಲ್ಪಿಸುವಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದು,  ಶಾಶ್ವತ ನೀರಾವರಿಗೆ ಮುಂದಾಗಬೇಕು ಎಂದು ರೈತರು ಕಡೂರು ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಸ್ವಾಮೀಜಿಗಳು ಹಾಗು ಮುಂಖಂಡರ ನೈತೃತ್ವದಲ್ಲಿ ಮತಿಘಟ್ಟದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸುವ ಮೂಲಕ ಹೋರಾಟಕ್ಕೆ ಚಾಲನೆ ನೀಡಲಾಯಿತು.        
ಕಡೂರು ತಾಲೂಕಿನ ಮತಿಘಟ್ಟ, ಕೆರೆಸಂತೆ, ಬಳ್ಳೇಕೆರೆ, ಚೀಲನಹಳ್ಳಿ, ಕಡೂರಹಳ್ಳಿ ಗ್ರಾಪಂ ವ್ಯಾಪ್ತಿ ರೈತರು ಕಸಬಾ ಹೋಬಳಿ ಸೇರಿದಂತೆ ಕಡೂರು ತಾಲೂಕಿಗೆ ಶಾಶ್ವತ ನೀರಾವರಿ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟಿಸಿದರು.
ರಸ್ತೆ ತಡೆ: ಕಡೂರು ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಶ್ರೀ, ಹೋರಾಟ ಸಮಿತಿಯ ತಾಲೂಕು ಸಂಚಾಲಕ ಕುಶಾಲ್ ಕುಮಾರ್, ಸಮಿತಿ ಮುಖಂಡ ಎಸ್.ವಿ. ಉಮಾಪತಿ, ಶಿವಕುಮಾರ್, ಕರಿಬಡ್ಡೆ  ಶ್ರೀನಿವಾಸ್, ಶ್ರೀಕಂಠ ಒಡೆಯರ್, ಗುರುಮೂರ್ತಿ ಮತ್ತು ರಾಜನಾಯ್ಕ ನೇತೃತ್ವದಲ್ಲಿ ಮತಿಘಟ್ಟದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಕುಳಿತು ಪ್ರತಿಭಟಿಸಲಾಯಿತು.
 ಇದರಿಂದ ಶಿವಮೊಗ್ಗ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಬಸ್ಸು ಲಾರಿ ಸೇರಿದಂತೆ ಅನೇಕ ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು. ನಂತರ ನಡೆದ ಸಭೆಯಲ್ಲಿ ರೈತರನ್ನು ಉದ್ದೇಶಿಸಿ ಜಿಲ್ಲಾ ರೈತ ಸಂಘದ ಮುಖಂಡ ಕ್ಯಾತನಬೀಡು ರವೀಶ್ ಮಾತನಾಡಿ, ಸ್ವಾತಂತ್ರ್ಯ ಬಂದು 60 ವರ್ಷವಾದರೂ ಸತತ ಬರಗಾಲ ಎದುರಿಸುತ್ತಿರುವ ಈ ಭಾಗದ ಜನರ ಗೋಳು ಯಾರೂ ಕೇಳುತ್ತಿಲ್ಲ ಎಂದರು.
700 ಅಡಿವರೆಗೆ ನೀರು ಕೊರೆದರೂ ನೀರಿಲ್ಲ. ಕಡೂರು ತಾಲೂಕಿಗೆ ಶಾಶ್ವತ ನೀರು ನೀಡುವ ಯೋಚನೆ ಮಾಡದ ಜನಪ್ರತಿನಿಧಿಗಳಿಗೆ ಮತ ಕೇಳುವ ಯೋಗ್ಯತೆ ಇಲ್ಲ. ಜನಪ್ರತಿನಿಧಿಯಾದವರು ಜನರ ಸಮಸ್ಯೆ ಅರಿತು ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ನೇತೃತ್ವ ವಹಿಸಿದ್ದ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಶ್ರೀ ಮಾತನಾಡಿ, 20 ವರ್ಷಗಳಷ್ಟು ಹಿಂದೆಯೇ ಇಂತಹ ಹೋರಾಟಕ್ಕೆ ಮುಂದಾಗಿದ್ದರೆ ಇಂದು ನಮ್ಮ ರೈತರು ಈ ಸ್ಥಿತಿಗೆ ಬರುತ್ತಿರಲಿಲ್ಲ. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅವರಿಗೆ ಮನವಿ ಅರ್ಪಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.