ಚಿಕ್ಕಮಗಳೂರು

ಗೋರಖ್ ಸಿಂಗ್ ವರದಿ ಜಾರಿಗೆ ಒತ್ತಾಯಿಸಿ ಪಾದಯಾತ್ರೆ

Published On :

ಕೊಪ್ಪ: ಅಡಕೆ ಹಳದಿ ಎಲೆರೋಗ ಸಂತ್ರಸ್ತ ರೈತರ ಬಗ್ಗೆ ಗೋರಖ್ ಸಿಂಗ್ ನೀಡಿರುವ ವರದಿ ಜಾರಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಭಾಜಪಾ ಶೃಂಗೇರಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನದ ಪ್ರತಿಭಟನಾ ಪಾದಯಾತ್ರೆಗೆ ಶನಿವಾರ ತಾಲೂಕಿನ ಉತ್ತಮೇಶ್ವರದ ಮದುತ್ತಮೇಶ್ವರ ದೇವಸ್ಥಾನದ ಆವರಣದಲ್ಲಿ ಅಡಕೆ ಬೆಳೆಗಾರ ಶಿವಣ್ಣ ಚಾಲನೆ ನೀಡಿದರು.
ಪಾದಯಾತ್ರೆಗೂ ಮುನ್ನ ಬಿಜೆಪಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಮಸ್ವಾಮಿ  ಸುದ್ದಿಗಾರರೊಂದಿಗೆ ಮಾತನಾಡಿ, 2011ರ ಲೋಕಸಭಾ ಉಪಚುನಾವಣೆ ವೇಳೆಯಲ್ಲಿ ಕೇಂದ್ರ ಮಂತ್ರಿಗಳು   ಗೋರಕ್ ಸಿಂಗ್ ವರದಿಯಾಧಾರಿತ ರು. 1400 ಸಾವಿರ ಕೋಟಿ ಹಳದಿ ಅಡಕೆ ಬೆಳೆಗಾರರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿ ಹೋದವರು ಇದುವರೆಗೆ ಸಾಲಮನ್ನಾ ಮಾಡಿಲ್ಲ. ಬದಲಾಗಿ ಸ್ಥಳೀಯ  ಕಾಂಗ್ರೆಸ್ ನಾಯಕರೊಬ್ಬರು ಪತ್ರಿಕೆಗಳಲ್ಲಿ ಮುಗ್ಧ ರೈತರ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಾ ರೈತರನ್ನು ಯಾಮಾರಿಸುತ್ತಿದ್ದಾರೆ.
ಅಡಿಕೆ ಬೆಳೆಗಾರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಗೋರಕ್ ಸಿಂಗ್ ವರದಿಯನ್ನು ಯಥಾವತ್ತಾಗಿ ಕೇಂದ್ರ ಬಜೆಟ್‌ಗೂ ಮುನ್ನಾ ಘೋಷಣೆ ಮಾಡಬೇಕು ಒತ್ತಾಯಿಸಿ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ ಎಂದರು.
ಸಾರ್ವಜನಿಕ ಸಭೆ: ಈ ಪಾದಯಾತ್ರೆ ಉತ್ತಮೇಶ್ವರ, ಬಿ.ಜಿ. ಕಟ್ಟೆ, ಕಲ್ಕೆರೆ ತೆಂಗಿನ ಮನೆ, ಲೋಕನಾಥಪುರ ಮಾರ್ಗವಾಗಿ  ಜಯಪುರಕ್ಕೆ ತೆರಳಿ ಜಯಪುರದಲ್ಲಿ ಸಾರ್ವಜನಿಕ ಸಭೆ ಮಾಡಲಾಗುವುದು.
ಫೆ10ರ ಬೆಳಿಗ್ಗೆ 10 ಗಂಟೆಗೆ ಹಿರೇಹಡ್ಲು, ಕುಂಚೇಬೈಲು, ಮೆಣಸೆ ಮಾರ್ಗವಾಗಿ ಶೃಂಗೇರಿಗೆ ಸಾಗಿ ಸಂಜೆ 3 ಗಂಟೆಗೆ ಶೃಂಗೇರಿ ಸಂತೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ಮಾಡಲಾಗುವುದು ಎಂದರು.
ಪಾದಯಾತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೀವರಾಜ್, ಬಿಜೆಪಿಯ ಶೃಂಗೇರಿ ಕ್ಷೇತ್ರಾಧ್ಯಕ್ಷ  ನಿಲೇಶ್, ಬಿಜೆಪಿ ಮುಖಂಡರಾದ ಡಾ.ಜಿ.ಎಸ್. ಮಹಾಬಲ್, ನಯನಾ,  ನಾಗರಾಜ್, ಅಂಟೋನಿ, ನರೇಂದ್ರ, ಪದ್ಮವತಿ ರಮೇಶ್, ಸುಚಿತಾ ನರೇಂದ್ರ, ಜಯಂತ್, ಪೂರ್ಣಚಂದ್ರ, ಪ್ರೇಮಾ ದಾಮೋದರ, ಮಳಿಗೆ ಚಂದ್ರಶೇಖರ್ ಹಾಗೂ ಹಳದಿ ಅಡಕೆ ಬೆಳೆಗಾರರು ಭಾಗವಹಿಸಿದ್ದರು. ಲೋಕಾನಾಥಪುರದಿಂದ ಜಯಪುರಕ್ಕೆ ಸಾಗುವ ಮಾರ್ಗ ಮಧ್ಯದ ಮಳಿಗೆ ಗ್ರಾಮದಲ್ಲಿ ಮಳೆ ಎದುರಾದ್ದರಿಂದ ಪಾದಯಾತ್ರೆಗೆ ಕೆಲಕಾಲ ಅಡ್ಡಿಯುಂಟಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.