ಚಿಕ್ಕಮಗಳೂರು

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

Published On :

ಚಿಕ್ಕಮಗಳೂರು: ಚಿಕ್ಕಕುರುಬರಹಳ್ಳಿ ಕಾಲೋನಿ ರಸ್ತೆಗಳನ್ನು 10 ಲಕ್ಷ ವೆಚ್ಚದಲ್ಲಿ ಕಾಂಕ್ರೀಟಿಕರಣ ಮಾಡಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ನಗರಸಭೆ ಸದಸ್ಯ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ.
ಭಾರಿ ನೀರಾವರಿ ಇಲಾಖೆಯ ಎಸ್‌ಇಪಿ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿರುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಚಿಕ್ಕಕುರುಬರಹಳ್ಳಿ ವ್ಯಾಪ್ತಿಯಲ್ಲಿ ಸ್ಥಳೀಯರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಿಸಲಾಗಿದೆ. ಬಾಕ್ಸ್ ಚರಂಡಿ ಮತ್ತು ಮೂಲಭೂತ ಸೌಕರ್ಯ ಸೇರಿದಂತೆ 40 ಲಕ್ಷ ಅನುದಾನ ವ್ಯಯಿಸಲಾಗಿದೆ ಎಂದರು.
ಗುಣಮಟ್ಟ ಕಾಪಾಡಿ: ಎಐಟಿ ಸರ್ಕಲ್‌ನಿಂದ ಚಿಕ್ಕಕುರುಬರಹಳ್ಳಿಯವರೆಗಿನ 2.85 ಕೋಟಿ ವೆಚ್ಚದ ಅಡ್ಡ ರಸ್ತೆಗಳ ಡಾಂಬರೀಕರಣ ಕಾರ್ಯ ಆರಂಭವಾಗಿದೆ ಎಂದು ಹೇಳಿದ ಅವರು, ಸಚಿವ ಸಿ.ಟಿ. ರವಿಯವರ ಸಹಕಾರದಿಂದ ನಗರಸಭೆ ವ್ಯಾಪ್ತಿಯಲ್ಲೆ ಈ ವಾರ್ಡ್ ಮಾದರಿ ಅಭಿವೃದ್ಧಿ ಕಂಡಿದೆ ಎಂದರೆ ನಮ್ಮನ್ನು ಆಯ್ಕೆ ಮಾಡಿದ ಋಣಕ್ಕೆ ಅಭಿವೃದ್ಧಿ ಮೂಲಕ ಪ್ರತಿಫಲ ನೀಡಿರುವುದಾಗಿ ತಿಳಿಸಿ, ಅಭಿವೃದ್ಧಿ ಕೆಲಸ ನಡೆಯುವ ಸಂದರ್ಭದಲ್ಲಿ ಗ್ರಾಮಸ್ಥರು ಎಚ್ಚರ ವಹಿಸಿ ತಮ್ಮ ಮನೆ ಕೆಲಸ ಎಂಬ ಭಾವನೆ ಹೊಂದಿದಾಗ ಕಾಮಗಾರಿಗಳು ಕಳಪೆಯಾಗಲು ಸಾಧ್ಯವಿಲ್ಲ ಎಂದರು.
ಯುರೇಕಾ ಅಕಾಡೆಮಿ ಪ್ರಾಂಶುಪಾಲ ದೀಪಕ್ ದೊಡ್ಡಯ್ಯ ಮಾತನಾಡಿ, ಇಂತಹ ಅಭಿವೃದ್ಧಿ ಕಾಮಗಾರಿಗಳು ನಮ್ಮೂರಿನ ಸೌಂದರ್ಯ ಹೆಚ್ಚಿಸುವ ಜೊತೆ ನಾಗರಿಕರಗೂ ಅನುಕೂಲಕರವಾದುದು ಎಂದು ಹೇಳಿದರು.
ಹಿರಿಯರಾದ ಬಸವಯ್ಯ, ಹೀರಯ್ಯ, ದೊಡ್ಡಯ್ಯ, ವಾರ್ಡ್ ಅಧ್ಯಕ್ಷ ವಿಜಯ್‌ಕುಮಾರ್, ಲಲಿತ್‌ಕುಮಾರ್, ಕೃಷ್ಣಮೂರ್ತಿ, ಓಂಪ್ರಕಾಶ್, ಬಸವರಾಜು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.