ಅಧಿಕಾರ ಹಸ್ತಾಂತರ
ಮೂಡಿಗೆರೆ: ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಎಲ್ಲಾ ಸದಸ್ಯರ ಸ್ಥಾನ ಮಂಗಳವಾರ ಅಂತಿಮಗೊಂಡಿದ್ದು, ಉಪ ತಹಸೀಲ್ದಾರ್ ಮುನೀರ್ ಅವರನ್ನು ಪ.ಪಂ. ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು.
ಪ.ಪಂ. ಅಧ್ಯಕ್ಷೆ ಲತಾಲಕ್ಷ್ಮಣ್ ಅಧಿಕಾರವನ್ನು ಆಡಳಿತಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ.ಪಂ. ಮುಖ್ಯಾಧಿಕಾರಿ ಗಣೇಶ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಪಡಿತರ ಚೀಟಿದಾರರ ಪಟ್ಟಿ ಪ್ರಕಟಣೆ
ಚಿಕ್ಕಮಗಳೂರು: ಜಿಲ್ಲೆಯ ನ್ಯಾಯಬೆಲೆ ಅಂಗಡಿವಾರು ಅಂಗೀಕೃತ, ರದ್ದಾದ, ಪರಿಶೀಲನಾ ಹಂತದಲ್ಲಿರುವ ಮತ್ತು ನಿಲಂಬನೆಯಲ್ಲಿರಿಸಿರುವ ಪಡಿತರ ಚೀಟಿದಾರರ ಪಟ್ಟಿಯನ್ನು ಮುದ್ರಿಸಿ ಸಂಬಂಧಿಸಿದ ಗ್ರಾಪಂ ಮತ್ತು ನಗರಸಭೆ, ಪುರಸಭೆ, ಪಪಂ ಕಚೇರಿಗಳಲ್ಲಿ ಸಾರ್ವಜನಿಕರ ಗಮನಕ್ಕೆ ಪ್ರಕಟಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ.
25 ಕ್ಕೆ ಮಳೂರು ಶ್ರೀ ರೇಣುಕಾ ಯಲ್ಲಮ್ಮ ಜಾತ್ರೆ
ಶೃಂಗೇರಿ: ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಸಮೀಪದ ಪುರಾಣ ಪ್ರಸಿದ್ಧ ಶ್ರೀ ರೇಣುಕಾ ಯಲ್ಲಮ್ಮ ಜಾತ್ರಾ ಮಹೋತ್ಸವ 25 ಹಾಗೂ 26 ರಂದು ನಡೆಯಲಿದೆ. 25 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ದೇವಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ. 26 ರಂದು ಶ್ರೀ ರೇಣುಕಾ ಯಲ್ಲಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಪಂಚಾಮೃತ ಅಭಿಷೇಕ ನಡೆಯಲಿದೆ. ರಾತ್ರಿ ಗುತ್ತಿಯೆಡೆಹಳ್ಳಿ ಸೀತೂರು ಮೇಳದವರಿಂದ ಶ್ರೀ ದೇವಿ ಮಾಹಾತ್ಮೆ ಯಕ್ಷಗಾನ ನಡೆಯಲಿದೆ.
ಅಂಗವಿಕಲರಿಗೆ ಟ್ರೈಸಿಕಲ್ ವಿತರಣೆ
ಚಿಕ್ಕಮಗಳೂರು: ವಿಧಾನಪರಿಷತ್ ಸದಸ್ಯರು ಪ್ರದೇಶಾಭಿವೃದ್ಧಿ ಅನುದಾನದಿಂದ ಸುಮಾರು 10 ಲಕ್ಷ ವೆಚ್ಚದಲ್ಲಿ ಜಿಲ್ಲೆಯ 14 ಮಂದಿ ಅಂಗವಿಕಲರಿಗೆ ಸೋಮವಾರ ಟ್ರೈಸಿಕಲ್ ಮಾಫೆಡ್ ವಿತರಿಸಲಾಯಿತು. ತಾಪಂ ಸಭಾಂಗಣದಲ್ಲಿ ಟ್ರೈಸಿಕಲ್ ಮಾಫೆಡ್ ವಿತರಿಸಿ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿದರು.
ವ್ಹೀಲ್ಛೇರ್ ಟ್ರೈಸಿಕಲ್: ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸಂಸದರ ನಿಧಿಯಿಂದಲೂ ವಿಕಲಚೇತನರಿಗೆ ಅನುಕೂಲವಾಗುವ ವ್ಹೀಲ್ಛೇರ್ ಟ್ರೈಸಿಕಲ್ ವಿತರಿಸಬೇಕೆಂಬ ಉದ್ದೇಶವಿದೆ ಎಂದರು.
ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಲಕ್ಷ್ಮಣ, ಕಾಂಗ್ರೇಸ್ ಮುಖಂಡ ಶಾಂತೇಗೌಡ, ಕೆ. ಮಹಮ್ಮದ್, ಮಂಜುನಾಥ್, ನಾಗೇಶ್ ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

