ಸಮರ್ಪಕ ಗ್ಯಾಸ್ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ
ಮೂಡಿಗೆರೆ: ತಾಲೂಕಿನ ಅಡುಗೆ ಅನಿಲ ಗ್ರಾಹಕರಿಗೆ ಸಮರ್ಪಕ ಗ್ಯಾಸ್ ವಿತರಣೆ ಮಾಡುವಂತೆ ಸೋಷಿಯಲ್ ಡಮಾಕ್ರಟಿ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಯಕರ್ತರು ವಿದ್ಯಾನಗರದಲ್ಲಿರುವ ಶ್ರೀ ವೆಂಕಟೇಶ್ವರ ಗ್ಯಾಸ್ ಏಜೆನ್ಸಿಯ ಎದುರಿನಲ್ಲಿ ಘೋಷಣೆಗಳನ್ನು ಕೂಗಿ ನಂತರ ಮಿನಿ ವಿಧಾನಸೌಧಕ್ಕೆ ಆಗಮಿಸಿದರು.
ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಬಿಳಗುಳ ಅಲ್ತಾಫ್, ಗ್ಯಾಸ್ ಬುಕ್ ಮಾಡಿ ದಿನಗಳು ಕಳೆದರು ಗ್ಯಾಸ್ ವಿತರಣೆ ಮಾಡುತ್ತಿಲ್ಲ. ಏಜೆನ್ಸಿಗೆ ವಿಚಾರಿಸಿದರೆ ಅಸಮರ್ಪಕ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕಿಗೆ ಒಂದೇ ಗ್ಯಾಸ್ ಏಜೆನ್ಸಿ ಇದ್ದು, ತಾಲೂಕಿನ 29 ಗ್ರಾಪಂ ಜನಕ್ಕೂ ಇದೇ ಗ್ಯಾಸ್ ಏಜನ್ಸಿಯಿಂದ ಸರಬರಾಜಾಗುತ್ತಿದ್ದು, ಜನಸಂಖ್ಯೆ 15 ಸಾವಿರಕ್ಕೂ ಅಧಿಕವಿದ್ದರೂ ಅದನ್ನು ತೋರಿಸದೆ ಮರೆಮಾಚಲಾಗುತ್ತಿದೆ. ಮತ್ತೊಂದು ಗ್ಯಾಸ್ ಏಜೆನ್ಸಿಯ ಅವಶ್ಯಕತೆ ಇದ್ದು, ಕೂಡಲೇ ಮತ್ತೊಂದು ಗ್ಯಾಸ್ ಏಜೆನ್ಸಿಗೆ ಅವಕಾಶ ನೀಡುವಂತೆ ಒತ್ತಾಯಿಸಿದರು.
ನಂತರ ತಹಸೀಲ್ದಾರ್ ಜಿ.ಎಸ್. ಸೈಯದ್ ಮುನೀರ್ ಅವರಿಗೆ ಮನವಿ ಪತ್ರವನ್ನು ನೀಡಿದರು. ಪ್ರತಿಭಟನೆಯಲ್ಲಿ ಎಸ್ಡಿಪಿಐನ ವಲಯ ಸಮಿತಿ ಸದಸ್ಯ ಭೂತನಕಾಡು ಅಕ್ಬರ್, ತಾಪಂ ರಫೀಕ್, ಉಪಾಧ್ಯಕ್ಷ ಪೈರೋಜ್, ಅಮ್ಜದ್ ಖಾನ್, ಸೈಮನ್ ರೋಡ್ರಿಗ್ರಸ್, ಹಮೀರ್ ಹಂಜು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

