ಭಾಷೆ ಬೆಳೆದಂತೆ ಭಾವಕ್ಯತೆ ಸಾಧ್ಯ
ಮೂಡಿಗೆರೆ: ಭಾಷೆ, ಸಂಸ್ಕೃತಿಯನ್ನು ಭಾವೈಕ್ಯತೆ ಕಾಣಲು ಸಾಧ್ಯ ಎಂದು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಷಿ ಹೇಳಿದರು.
ಶನಿವಾರ ಸಂಜೆ ಮೂಡಿಗೆರೆ ತುಳುಕೂಟ ಹಮ್ಮಿಕೊಂಡಿದ್ದ 4ನೇ ವರ್ಷದ ಕಾರ್ಯಕ್ರಮ ತುಳು ವೈಭವೋ ಉದ್ಘಾಟಿಸಿ, ನಮ್ಮ ದೇಶದಲ್ಲಿ ಎಣಿಸಲಾರದಷ್ಟು ಭಾಷೆಗಳಿವೆ. ಅದರಲ್ಲಿ ತುಳು ಭಾಷೆ ಸಾಂಸ್ಕೃತಿಕವಾದ ಭಾಷೆಯಾಗಿದ್ದು, ಶಿಸ್ತು, ಸಂಯಮ, ಭಾವನಾತ್ಮಕ ಸಂಬಂಧಗಳನ್ನು ಎತ್ತಿ ಹಿಡಿಯುತ್ತದೆ. ಅಲ್ಲದೆ ಎಲ್ಲಾ ಧರ್ಮ, ಜಾತಿಯ ಜನರನ್ನು ಸೆಳೆದುಕೊಂಡಿದೆ ಎಂದರು.
ಬೆಳವಣಿಗೆ ಅಗತ್ಯ: ಮಂಗಳೂರಿನ ತುಳು ಅಕಾಡಮಿ ನಿಕಟಪೂರ್ವ ಅಧ್ಯಕ್ಷ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್, ಶತಮಾನಗಳ ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ ತುಳು ಮತ್ತಷ್ಟು ಬೆಳವಣಿಗೆಯಾಗಬೇಕು. ಆ ಮೂಲಕ ಗತಕಾಲದ ತುಳು ಸಂಸ್ಕೃತಿ, ಆಚಾರ, ವಿಚಾರ, ಕಲೆ, ಸಾಹಿತ್ಯ ಎಲ್ಲವೂ ಚಿರಕಾಲ ಉಳಿಯುವಂತಾಗಲು ಶ್ರಮ ವಹಿಸಬೇಕು ಎಂದರು.
ಭಾರತೀಯ ಸೇನೆಯ ಕರ್ನಲ್ ಪಿ. ಹರಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ದೇಶದ ಮೇಲೆ ಭಕ್ತಿ ಮೂಡಿಸುವ ಕೆಲಸ ಮಾಡಬೇಕು. ದೇಶಸೇವೆ ಮಾಡಲು ಈಗಿನ ಯುವಕರಿಗೆ ಅರಿವೇ ಇಲ್ಲದಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಸಕ ಎಂ.ಪಿ. ಕುಮಾರಸ್ವಾಮಿ, ಹಿರಿಯಡ್ಕ ಕಾಲೇಜಿನ ಕನ್ನಡ ಉಪನ್ಯಾಸಕಿ ಕಾತ್ಯಾನಿ ಕುಂಜಿಬೆಟ್ಟು ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ಜಿ. ಭೀಮೇಶ್ವರ ಜೋಷಿಯವರು ಭಾರತೀಯ ಸೇನೆಯಲ್ಲಿದ್ದ ಮೂಡಿಗೆರೆಯ ಕರ್ನಲ್ ಪಿ. ಹರಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಳಸೆ ಶಿವಣ್ಣ, ಕೃಷಿ ತೋಟಗಾರಿಕೆ ಪದವಿ ವಿಭಾಗದಲ್ಲಿ ಚಿನ್ನದ ಪದಕ ವಿಜೇತೆ ಕು.ಎಚ್.ಜೆ. ಅಕ್ಷಿತಾ ಯು. ಹೊಸಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಅತುಲರಾವ್ ವಹಿಸಿದ್ದರು. ತಾಪಂ ಅಧ್ಯಕ್ಷ ಎಂ.ಎ. ಶೇಷಗಿರಿ, ಸಂತ ಅಂಥೋನಿ ಚರ್ಚ್ನ ಧರ್ಮಗುರು ರೇ.ಫಾ. ಲ್ಯಾನ್ಸಿ ಪಿಂಟೋ, ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿಯ ಧರ್ಮಗುರು ಜನಾಬ್ ಅಬ್ದುಲ್ ಸಲೀಂ, ಡಾ. ರಾಮಚರಣ್ ಅಡ್ಯಂತಾಯ, ಬಿ.ಎಲ್. ವಿಶ್ವನಾಥ್ ರೈ, ರಮೇಶ್ ಆಚಾರ್ಯ, ಹಳಸೆ ಶಿವಣ್ಣ, ಎಚ್.ಜೆ. ಅಕ್ಷಿತಾ, ದೇಜಪ್ಪ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

