ಹಾಲಿನ ಡೈರಿ ಸ್ಥಾಪನೆಗೆ ಹಣ ಮೀಸಲು
ಕೊಪ್ಪ: 16 ಜಿಲ್ಲೆಯಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡುವುದರಿಂದ ಮಹಿಳೆಯರ ಅರ್ಥಿಕ ಸ್ವಾವಲಂಬನೆ ಜೊತೆಗೆ ಸಾವಯವಕೃಷಿಗೂ ಪ್ರೋತ್ಸಾಹ ನೀಡಿದಂತೆ ಆಗವುದು ಎಂಬ ದೃಷ್ಟಿಯಿಂದ ಜಿಲ್ಲೆಯಲ್ಲಿ ಹಾಲಿನ ಡೈರಿ ಸ್ಥಾಪನೆಗೆ ರಾಜ್ಯ ಆಯವ್ಯಯದಲ್ಲಿ ರು. 20ಕೋಟಿ ಮೀಸಲಿಡಿಸಲಾಗಿದೆ ಎಂದು ಸಚಿವ ಡಿ.ಎನ್. ಜೀವರಾಜ್ ತಿಳಿಸಿದರು.
ಶನಿವಾರ ಇಲ್ಲಿನ ಲಾಲ್ ಬಹುದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಧ.ಗ್ರಾ. ಯೋಜನೆ, ಕೃಷಿ ಉತ್ಸವ ಸ್ವಾಗತ ಸಮಿತಿ, ಕೊಪ್ಪ ಕೃಷಿ ಇಲಾಖೆ, ಪ್ರಗತಿ ಬಂಧು- ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ ಇವರ ಸಹಯೋಗದಲ್ಲಿ ನಡೆಸಿದ ಕೃಷಿ ಉತ್ಸವ-2013 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಷಾದನೀಯ: ಚಿಕ್ಕಮಗಳೂರು ಜಿಲ್ಲೇಯಲ್ಲಿ ಪ್ರತ್ಯೇಕ ಹಾಲಿನ ಡೈರಿ ಸ್ಥಾಪನೆಗೆ ಒಪ್ಪಿಗೆ ಪತ್ರ ನೀಡುವಂತೆ ಹಾಸನ ಹಾಲು ಉತ್ಪಾದಕರ ಒಕ್ಕೂಟಕ್ಕೆ ರಾಜ್ಯ ಸರ್ಕಾರ ಪತ್ರ ಬರೆದು ಜಿಲ್ಲೆಯಲ್ಲಿ ಡೈರಿ ಸ್ಥಾಪನೆಗೆ ಬೇಕಾದ ಎಲ್ಲಾ ಪೂರಕ ತಯಾರಿ ಮಾಡಿಕೊಂಡಿದ್ದರೂ ಸಹ ಇನ್ನೂ ಒಪ್ಪಿಗೆ ಪತ್ರಕೊಡುವ ಮನಸ್ಥಿತಿಯಲ್ಲಿ ಹಾಸನ ಹಾಲು ಉತ್ಪಾದಕರ ಒಕ್ಕೂಟ ಇಲ್ಲಿದಿರುವುದು ವಿಷಾದನೀಯ ಎಂದರು.
ಕೃಷಿ ವಸ್ತು ಪ್ರದರ್ಶನದ ಉದ್ಘಾಟಿಸಿದ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಗಳಿಂದ ರೈತರಿಗೆ ನೀಡುತ್ತಿರುವ ಯೋಜನೆ ಬಗ್ಗೆ ಗ್ರಾಪಂ ಮಟ್ಟದವರೆಗೆ ಮಾಹಿತಿ ಲಭ್ಯವಾಗದೇ ಎಷ್ಟೋ ಯೋಜನೆಗಳು ನೆನಗುದಿಗೆ ಬಿದ್ದಿದ್ದೆ. ಇಂತಹ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ಮುಟ್ಟಿಸುವ ಕೆಲಸವನ್ನು ಅಧಿಕಾರಿಗಳು ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಮಾಡಬೇಕಾಗಿದೆ ಎಂದರು.
ಕೃಷಿ ಸಂಬಂಧಿತ ವಿವಿಧ ಸ್ತಬ್ಧ ಚಿತ್ರಗಳನ್ನೊಳಗೊಂಡ ಪೂರ್ಣಕುಂಭದ ಮೆರವಣಿಗೆಯನ್ನು ಪಟ್ಟಣದ ಯೋಜನಾ ಕಚೇರಿಯಿಂದ ಕ್ರೀಡಾಂಗಣದವರೆಗೆ ಮಾಡಲಾಯಿತು.
ತಾಪಂ ಅಧ್ಯಕ್ಷೆ ಪದ್ಮಾವತಿ ರಮೇಶ್, ಉಪಾಧ್ಯಕ್ಷ ರಮೇಶ್ ಬೆಳಗೊಳ, ಪಪಂ ಅಧ್ಯಕ್ಷ ಉಮೇಶ್ ಶೇಟ್, ಕೃಷಿ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಜಿ. ಶಂಕರ್, ಯೋಜನಾಧಿಕಾರಿ ಸುಕೇಶ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

