ಇಂದಿನಿಂದ ಮಂಡ್ಯ ರಮೇಶ್ ನಾಟಕೋತ್ಸವ
ತರೀಕೆರೆ: ಶಾಂತಿ ಟಾರಿಟಬಲ್ ಟ್ರಸ್ಟ್ ಅರುಣೋದಯ ವಿದ್ಯಾಸಂಸ್ಥೆ ತರೀಕರೆ ನಟನ ಮೈಸೂರು ವತಿಯಿಂದ ಪಟ್ಟಣದಲ್ಲಿ ಫೆ.23 ಮತ್ತು 24ರಂದು ಮಂಡ್ಯ ರಮೇಶ್ ನಿರ್ದೇಶಿಸಿರುವ ಮಹತ್ವದ ಮೂರು ನಾಟಕಗಳ ಪ್ರದರ್ಶನದ ಮಂಡ್ಯ ರಮೇಶ್ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.
ಫೆ.23ರಂದು ಶನಿವಾರ ಸಂಜೆ 6-15ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಪರಮೇಶ್ವರಪ್ಪ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಂತಿ ಚಾರಿಟಬಲ್ ಟ್ರಸ್ಟ್ನ ಗೌರವಾಧ್ಯಕ್ಷರು ಜ.ಎಚ್. ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಚಲನಚಿತ್ರ ನಟರು, ರಂಗ ನಿರ್ದೇಶಕರು ಮಂಡ್ಯ ರಮೇಶ್, ಚಿಕ್ಕಮಗಳೂರು ಪತ್ರಕರ್ತರು ತಾರಾನಾಥ್ ಅವರು ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 7 ಗಂಟೆಗೆ ಸಂಸಾರದಲ್ಲಿ ಸನಿದಪ ಮೂಲಕಥೆ ದಾರಿಯೋ ಘೋ, ಕನ್ನಡದಲ್ಲಿ ಮರುರೂಪ ಕೆ.ವಿ.ಅಕ್ಷರ, ನಿರ್ದೇಶನ- ಮಂಡ್ಯ ರಮೇಶ್ ನಾಟಕ ಪ್ರದರ್ಶನಗೊಳ್ಳಲಿದೆ.
ಮಕ್ಕಳಿಗಾಗಿ ನಾಟಕ: ಫೆ.24ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಅರುಣೋದಯ ವಿದ್ಯಾ ಕೇಂದ್ರದ ಆವರಣದಲ್ಲಿ ವೈದೇಹಿಯವರ ಸತ್ರು ಅಂದ್ರೆ ಸತ್ರಾ.. (ಮಕ್ಕಳಿಗಾಗಿ ದೊಡ್ಡವರು ನಟಿಸುವ ನಾಟಕ) ಪ್ರದರ್ಶನಗೊಳ್ಳಲಿದೆ. ಫೆ.24ರ ಭಾನುವಾರ ಸಂಜೆ 6-15ಕ್ಕೆ ಬೆಂಗಳೂರು ಉದಯವಾಣಿ ಮುಖ್ಯ ವರದಿಗಾರರು ಗಿರೀಶ್ಬಾಬು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಿದ್ದು, ಬೆಂಗಳೂರು ಸಾಕ್ಷ್ಯಚಿತ್ರ ನಿರ್ದೇಶಕರು ಬಿ.ಎಸ್. ತಿಪ್ಪೇಸ್ವಾಮಿ, ಧಾರವಾಹಿ ನಟರು ಹಾಗೂ ರಂಗ ಕಲಾವಿದರು ಲೋಕೇಶ್ ಬಸವಟ್ಟಿ, ಪತ್ರಕರ್ತರು ವಿ. ಶೇಖರ್ ಅವರು ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸುತ್ತಾರೆ.
ಸಂಜೆ 7 ಗಂಟೆಗೆ ಚೋರ ಚರಣದಾಸ ಮೂಲ ಕಥೆ- ಹಬೀಬ್ ತನ್ವೀರ್, ಕನ್ನಡದಲ್ಲಿ ಮೂಲರೂಪ ಮತ್ತು ನಿರ್ದೇಶನ ಮಂಡ್ಯ ರಮೇಶ್ ನಾಟಕ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ಅಂಗವಾಗಿ ಫೆ.23ರಂದು 3-30ರಿಂದ 5-30ರವರೆಗೆ ಅಂಧ ಮಕ್ಕಳ ಶಾಲೆಗೆ ನಿಧಿ ಸಂಗ್ರಹಣೆಗಾಗಿ ಅರುಣೋದಯ ಶಾಲಾ ಮಕ್ಕಳಿಂದ ತಿಂಡಿ ಮೇಳ, ಅಂದು ಸಂಜೆ 5-30ರಿಂದ 6-15ರವರೆಗೆ ಶಿವಮೊಗ್ಗ ಶಾರದ ದೇವಿ ಅಂಧ ಮಕ್ಕಳ ಶಾಲೆಯ ಮಕ್ಕಳಿಂದ ಭಜನೆ, ಫೆ.24ರ ಸಂಜೆ 5 -30ರಿಂದ 6-15ರವರೆಗೆ ಮುಗುಳಿ ಲಕ್ಷ್ಮೀದೇವಮ್ಮ ಮತ್ತು ತಂಡದವರಿಂದ ಜನಪದ ಗಾಯನ ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

