ಅಕ್ರಮ ಮರಳು ಸಾಗಣೆ ತಡೆಗೆ ಜಾಗೃತ ದಳ
ಮೂಡಿಗೆರೆ: ತಾಲೂಕಿನ ಹೇಮಾವತಿ ನದಿಯ ತೀರದಲ್ಲಿ ಅಕ್ರಮ ಮರಳು ಸಾಗಾಣಿಕೆ ನಿರಾಂತಕವಾಗಿ ನಡೆಯುತ್ತಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಜಾಗೃತ ದಳವನ್ನು ಇಂದಿನಿಂದಲೇ ಫೆ.27ರಿಂದ ನೇಮಿಸಲಾಗಿದೆ ಎಂದು ತಹಸೀಲ್ದಾರ್ ಸೈಯ್ಯದ್ ಮುನೀರ್ ತಿಳಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಮೂಡಿಗೆರೆ ಹ್ಯಾಂಡ್ಪೋಸ್ಟ್ನಲ್ಲಿರುವ ಚೆಕ್ಪೋಸ್ಟ್ನಲ್ಲಿ 2 ತಂಡಗಳನ್ನು ರಚಿಸಿದೆ. 1 ತಂಡದಲ್ಲಿ ತಲಾ ಆರು ಅಧಿಕಾರಿ ಹಾಗೂ ನೌಕರರ ತಂಡ ಹಗಲು ಗಸ್ತು ನಡೆಸಿದರೆ ಇನ್ನುಳಿದ ಆರು ಅಧಿಕಾರಿ ಹಾಗೂ ನೌಕರರ ತಂಡ ರಾತ್ರಿ ಗಸ್ತು ನಡೆಸಲಿರುವರೆಂದು ತಿಳಿಸಿದ್ದಾರೆ.
ಗಸ್ತು ಸಮಯದಲ್ಲಿ ಕರ್ತವ್ಯಲೋಪವೆಸಗುವ ನೌಕರರ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.
ಪೇದೆ ನೇಮಕ: ಬೆಳಿಗ್ಗೆ 6ರಿಂದ ಸಂಜೆ 6ರ ತನಕ ಮೂಡಿಗೆರೆ ತಾಲೂಕು ವ್ಯಾಪ್ತಿಯ ಕಂದಾಯ ಇಲಾಖೆ ಹೆಸಗಲ್ ಗ್ರಾಮ ಲೆಕ್ಕಾಧಿಕಾರಿ ರಾಕೇಶ್ ತಂಗಡಿಗೆ ಮೊ. 9449040801, ನಂದೀಪುರ ಗ್ರಾಮ ಲೆಕ್ಕಾಧಿಕಾರಿ ಇಂದ್ರಕುಮಾರ್ ಮೊ- 9449396028, ಬೆಟ್ಟದಮನೆ ಗ್ರಾಮ ಲೆಕ್ಕಾಧಿಕಾರಿ ಸಚಿನ್ ಮೊ- 9481335442, ಮಾಕೋನಹಳ್ಳಿ ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಮೊ- 9483400619, ಗಣಿ ಭೂ ವಿಜ್ಞಾನ ಇಲಾಖೆ ಡಿ ಗ್ರೂಪ್ನ ಸದಾಶಿವ ಹಾಗೂ ಬಣಕಲ್ ಪೊಲೀಸ್ ಠಾಣೆಯ ಪೇದೆಯನ್ನು ನೇಮಿಸಲಾಗಿದೆ.
ರಾತ್ರ ಗಸ್ತು ತಂಡ ಸಂಜೆ 6ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಮೂಡಿಗೆರೆ ತಾಲೂಕು ವ್ಯಾಪ್ತಿಯ ಕಂದಾಯ ಇಲಾಖೆಯ ಹಳೆಕೊಟೆ ಗ್ರಾಮ ಲೆಕ್ಕಿಗ ಮಂಜುನಾಥ್ ಪಿ.ಎನ್ ಮೊ- 9449656316, ಬಿದರಹಳ್ಳಿ ಗ್ರಾಮ ಲೆಕ್ಕಿಗ ಪ್ರದೀಪ್ ನಾಯಕ್ ಮೊ- 9449040702, ಬೆಟ್ಟಗೆರೆ ಗ್ರಾಮ ಲೆಕ್ಕಿಗ ಉಮೇಶ್, ಮೊ- 8762594771, ಊರುಬಗೆ ಗ್ರಾಮ ಲೆಕ್ಕಿಗ ಕಲ್ಲೇಶ್ ಮೊ- 8762595709, ಲೋಕೋಪಯೋಗಿ ಇಲಾಖೆಯ ಡಿ.ಗ್ರೂಪ್ ನೌಕರ ಸಂತೋಷ್ ಹಾಗೂ ಮೂಡಿಗೆರೆ ಠಾಣೆಯ ಪೊಲೀಸ್ ಪೇದೆಯನ್ನು ನಿಯೋಜಿಸಲಾಗಿದೆ. ಅಕ್ರಮ ಮರಳು ಸಾಗಾಣಿಕೆ ಕಂಡು ಬಂದಲ್ಲಿ ಈ ಮೇಲಿನ ದೂರವಾಣಿಗಳಿಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

