'ಕಣ್ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆ'
ಮೂಡಿಗೆರೆ: ಅಖಿಲ ಭಾರತ ಯುವ ಜನ ಫೆಡರೇಷನ್‌ನಿಂದ ಹೊನಲು ಬೆಳಕಿನ ಅಂಬೇಡ್ಕರ್ ಕಪ್ -2013 ಕಬಡ್ಡಿ ಪಂದ್ಯಾವಳಿ 26 ರಂದು ಪಟ್ಟಣದ ಅಡ್ಯಂತಾಯ ರಂಗ ಮಂದಿರದಲ್ಲಿ ನಡೆಯಿತು.
ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಿಂದ 24 ತಂಡಗಳು ಆಗಮಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿ, ಇಂದಿನ ದಿನಗಳಲ್ಲಿ ಕ್ರಿಕೆಟ್ ಭೂತಕ್ಕೆ ಬಲಿಯಾಗಿ, ಜಾನಪದ ಕ್ರೀಡೆಗಳಾದ ಕಬ್ಬಡಿ, ಖೋಖೋ ಸೇರಿದಂತೆ ವಿವಿಧ ಕ್ರೀಡೆಗಳನ್ನು ಮರೆಯುತ್ತಿದ್ದಾರೆ. ಇಂಥಹ ದಿನದಲ್ಲಿ ಮೂಡಿಗೆರೆ ಅಖಿಲ ಭಾರತ ಯುವ ಜನ ಫೆಡರೇಷನ್ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸುವುದರ ಮೂಲಕ ಗ್ರಾಮೀಣ ಕ್ರೀಡೆಗೆ ಹೆಚ್ಚು ಒತ್ತು ನೀಡಿದೆ ಎಂದರು.
ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಗ್ರಾಮೀಣ ಕ್ರೀಡೆಗಳು ಹಳ್ಳಿಗರಿಂದಲೇ ಉಳಿದಿರುವುದು. ಜನರ ಮನಸ್ಸಿನಿಂದ ಮರೆಯಾಗಿದ್ದ ಕಬಡ್ಡಿ ಪಂದ್ಯಾವಳಿ ಆಯೋಜಿಸಿ ಕ್ರೀಡೆಗೆ ಜೀವ ತುಂಬಿದ ಫೆಡರೇಷನ್ ಸದಸ್ಯರನ್ನು ಅಭಿನಂದಿಸಿದರು. ಇದೇ ಸಂಧರ್ಭದಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ. ರಮೇಶ್, ಏಕಲವ್ಯ ಪ್ರಶಸ್ತಿ ವಿಜೇತ ಅರುಣ್ ಡಿ. ಸೋಜ, ಕರ್ನಾಟಕ ಅಮೇಚೋರ್ ಅಥ್ಲೇಟಿಕ್ ಸಂಸ್ಥೆಯ ಉಪಾಧ್ಯಕ್ಷ ಅಜಯ್ ಕುಮಾರ್, ರಾಷ್ಟ್ರೀಯ ಮ್ಯಾರಥಾನ್ ಕ್ರೀಡಾಪಟು ರಮೇಶ್ ಕಳಗೂರ್‌ರನ್ನು ಸನ್ಮಾನಿಸಲಾಯಿತು.
ಜಾವಳಿ ತಂಡ ಪ್ರಥಮ: ಕಬಡ್ಡಿ ಪಂದ್ಯಾವಳಿಯಲ್ಲಿ ಹೇಮಾವತಿ ರೈಡರ್ಸ್ ಜಾವಳಿ ತಂಡ (ಮೂಡಿಗೆರೆ) ಚಿಕ್ಕಮಗಳೂರು ಮತ್ತಿಕೆರೆ ತಂಡವನ್ನು 36-10 ಸೋಲಿಸಿ ಪ್ರಥಮ ಬಹುಮಾನ (ರು. 22,222) ಮತ್ತು ಟ್ರೋಫಿಯನ್ನು ಪಡೆಯಿತು.
ಆಂಜನೇಯ ತಂಡಾ ಮತ್ತಾವರ 2ನೇ ಸ್ಥಾನಕ್ಕೆ ( 11,111) ಟ್ರೋಫಿಯನ್ನು ಪಡೆದು ತೃಪ್ತಿ ಪಟ್ಟಿತು. 3ನೇ ಬಹುಮಾನ (ರು. 5,555) ಟ್ರೊಫಿಗೆ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ತಂಡದ ಪಾಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

