ಚಿಕ್ಕಮಗಳೂರು

ಅಂಧರಲ್ಲಿ ಆತ್ಮಸ್ಥೈರ್ಯ ತುಂಬಲು ಕರೆ

Published On :

ಚಿಕ್ಕಮಗಳೂರು: ಅಂಧ ಮತ್ತು ವಿಕಲಚೇತನ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಜವಾಬ್ದಾರಿ ಶಿಕ್ಷಕರು ಮತ್ತು ಸಮಾಜದ ಮೇಲಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ದೇವರಾಜ್ ಹೇಳಿದ್ದಾರೆ.
ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಅಂಧರು ಮತ್ತು ಅಂಗವಿಕಲ ಮಕ್ಕಳು ದೇವರ ಸಮಾನ. ಕೆಲವರು ಆಕಸ್ಮಿಕವಾಗಿ ಮತ್ತೆ ಕೆಲವರು ಹುಟ್ಟಿನಿಂದ ಇಂತಹ ದೌರ್ಭಾಗ್ಯವಂತರಾಗಿರುತ್ತಾರೆ. ವಿಕಲಚೇತನರು ಎಂಬ ಭಾವನೆ ಹೊಂದಿರುವವರಿಗೆ ಸಮಾಜ  ಆತ್ಮಸ್ಥೈರ್ಯ ತುಂಬಿ ನಾವು ಸಮರ್ಥರು ಎಂಬ ಮನೋಭಾವ ಅವರೊಳಗೆ ಮೂಡಿಸುವಂತಹ ಕೆಲಸ ಮಾಡಿದಾಗ ಮನುಷ್ಯ ಜನ್ಮಕ್ಕೆ ಸಾರ್ಥಕತೆ ಸಿಗುತ್ತದೆ ಎಂದರು.
ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಪಿ. ಲಕ್ಷ್ಮಣ್ ಮಾತನಾಡಿ, 5 ರಿಂದ 10ನೇ ತರಗತಿವರೆಗಿನ ವಿಕಲಚೇತನ ಮಕ್ಕಳಿಗೆ ಐದು ಹಂತದಲ್ಲಿ ಕ್ರೀಡಾಕೂಟ ನಡೆಸುತ್ತಿದ್ದು, ಫೆ. 10 ಮತ್ತು 11 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕ್ರೀಡೆ ಹಮ್ಮಿಕೊಂಡಿದೆ. ವಿಕಲಚೇತನರು ಸಮಾಜದಿಂದ ದೂರ ಉಳಿಯಬಾರದೆಂಬ ದೃಷ್ಟಿ ಹೊಂದಿ ಸರ್ಕಾರ ಈ ಕ್ರೀಡಾಕೂಟ ಆಯೋಜಿಸಿದೆ ಎಂದು ಹೇಳಿದರು.
ಯಾವ ಮಕ್ಕಳಲ್ಲಿ ಸೂಕ್ತ ಪ್ರತಿಭೆ ಅಡಗಿದೆ ಎಂಬುದು ಅವಕಾಶ ದೊರಕಿದಾಗ ಮಾತ್ರ ತಿಳಿಯುತ್ತದೆ. ಎಲ್ಲಾ ಅಂಗಾಂಗ ಹೊಂದಿರುವ ನಮಗಿಂತ ಯಾವುದಕ್ಕೂ ಕಮ್ಮಿ ಇಲ್ಲದಂತೆ ಕೆಲವರು ಸಾಧನೆ ಮಾಡಿದ್ದನ್ನು ಪ್ರತ್ಯಕ್ಷಿಸಿದ್ದೇವೆ. ಇಂತಹ ಕ್ರೀಡೆಗಳ ಮೂಲಕ ಪ್ರತಿಭೆಯನ್ನು ಗುರುತಿಸುವ ಕೆಲಸವಾದಾಗ ಅಂಗವಿಕಲರಿಗೂ ತೋಳ್ಬಲ ಮತ್ತು ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಚಂದ್ರಪ್ಪ, ಶ್ರೀನಿವಾಸ್, ಶಿವಕುಮಾರ್, ಮಲ್ಲಪ್ಪ, ರವಿಕುಮಾರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.