ಚಿಕ್ಕಮಗಳೂರು

'ಸರ್ವರಿಗೂ ಕಾನೂನು ತಿಳಿವಳಿಕೆ ಅಗತ್ಯ'

Published On :

ತರೀಕೆರೆ: ಕಾನೂನಿನ ತಿಳುವಳಿಕೆ ಪ್ರತಿಯೊಬ್ಬರಿಗೂ ಅವಶ್ಯ ಎಂದು ತರೀಕೆರೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹಿದಾಯತ್ ಉಲ್ಲಾ ಷರೀಫ್ ತಿಳಿಸಿದ್ದಾರೆ.
 ಪಟ್ಟಣದ ಎಸ್‌ಜೆಎಂ ಪ್ರಥಮ ದರ್ಜೆ ಕಾಲೇಜು, ಎನ್‌ಎಸ್‌ಎಸ್ ಘಟಕ, ತಾಲೂಕು ಕಾನೂನು ನೆರವು ಸಮಿತಿಯಿಂದ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಲೈಂಗಿಕ ದೌರ್ಜನ್ಯ ಹಾಗೂ ಆತ್ಮರಕ್ಷಣೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕಾನೂನು ಇರುವುದು ನಮ್ಮ ರಕ್ಷಣೆಗಾಗಿ, ಅವುಗಳನ್ನು ಸರಿಯಾಗಿ ತಿಳಿದುಕೊಂಡು, ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು, ಭಾರತದಲ್ಲಿ ಹೆಣ್ಣು ತಾಯಿ ಸ್ವರೂಪದಲ್ಲಿ ಕಾಣುವುದು ನಮ್ಮ ಸಂಸ್ಕೃತಿ, ಸ್ತ್ರೀ ನಮ್ಮ ಸಂಸ್ಕೃತಿಯ ರಕ್ಷಕಿ, ನಮ್ಮ ಧರ್ಮದ ರಕ್ಷಕಿ, ಅವರ ಮೇಲಿನ ದೌರ್ಜನ್ಯ ಸಂಸ್ಕೃತಿಯ ಮೇಲಿನ ದೌರ್ಜನ್ಯ ತಡೆಯಲು ದೇಶದಲ್ಲಿ ಸಾಕಷ್ಟು ಕಾನೂನು ಜಾರಿಯಲ್ಲಿದೆ. ಅವುಗಳನ್ನು ಅರಿತು ಕಾನೂನಿನ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಕಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಭು ಎನ್. ಬಡಿಗೇರ, ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಶಿವಪ್ರಸಾದ್, ವಕೀಲರಾದ  ಕೆ.ಆರ್. ರೇವಣಸಿದ್ದಪ್ಪ, ಎಸ್. ಸುರೇಶ್ ಚಂದ್ರ, ಜಗದೀಶ್ ಮಾತನಾಡಿದರು.
 ಪೊಲೀಸ್ ಅಧಿಕಾರಿ ಸದಾನಂದ ನಾಯಕ್, ಇನ್ಸ್‌ಪೆಕ್ಟರ್ ಸುರೇಶ್ ದಿನನಿತ್ಯದ ಬದುಕಿನಲ್ಲಿ ಬರುವ ಕ್ಲಿಷ್ಟಕರ ಸಮಸ್ಯೆಗಳನ್ನು ಉದಾಹರಣೆ ಸಹಿತವಾಗಿ ವಿವರಿಸಿದರು.
   ನ್ಯಾಯವಾದಿ ತೇಜಮೂರ್ತಿ ವಿಶೇಷ ಉಪನ್ಯಾಸ ನೀಡಿ ಅಪರಾಧಿಗಳಿಗೆ ಶಿಕ್ಷೆಯೇ ಪರಿಹಾರವಲ್ಲ, ಆದರೆ ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು ಎಂಬುದು ಕಾನೂನಿನ ಉದ್ದೇಶ ಎಂದು ತಿಳಿಸಿದರು.
   ವಕೀಲ ತೇಜಮೂರ್ತಿ, ಇನ್ಸ್‌ಪೆಕ್ಟರ್ ಸುರೇಶ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಾಚಾರ್ಯ ಪ್ರೊ.ಕೆ.ವಿ. ಸಜ್ಜಿನಶೆಟ್ಟರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.    
     ಕಾರ್ಯಕ್ರದಲ್ಲಿ ಈ ಸಂದರ್ಭದಲ್ಲಿ ಹಲವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.