ತುಂಗಾ ನಾಲೆಗೆ ನೀರು: ಚರ್ಚಿಸಿ ಕ್ರಮ
ಕ.ಪ್ರ.ವಾರ್ತೆ ಹೊನ್ನಾಳಿ ಜು.5: ಬೆಂಗಳೂರಿನಲ್ಲಿದ್ದ ಸಮಯ ಹೊರತುಪಡಿಸಿ ಹೊನ್ನಾಳಿಯಲ್ಲಿರುವ ಸಂದರ್ಭದಲ್ಲಿ ತಾವೇ ಖುದ್ದಾಗಿ ಬೆಳಗ್ಗೆ 10 ಗಂಟೆಯ ನಂತರ ಪ್ರತಿದಿನ ಶಾಸಕರ ಜನಸಂರ್ಪ ಕಚೇರಿಯಲ್ಲಿ ಇದ್ದು, ಸಾರ್ವಜನಿಕರಿಂದ ಬಂದಂತಹ ಅಹವಾಲು ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಹೊನ್ನಾಳಿ ಪಟ್ಟಣದಲ್ಲಿ ಶಾಸಕರ ನವೀಕೃತ ಜನಸಂರ್ಪಕ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮನಾತನಾಡಿದರು.
ನವೀಕೃತ ಕಟ್ಟಡ: ತಮ್ಮ ನಿವಾಸ ಪಟ್ಟಣದಿಂದ ಸ್ವಲ್ಪ ದೂರ ಗೊಲ್ಲರಹಳ್ಳಿ ಇದ್ದು, ಜನಸಾಮಾನ್ಯರು ಅಲ್ಲಿಗೆ ಬಂದು ತಮಗಾಗಿ ಕಾಯುವುದನ್ನು ತಪ್ಪಿಸಲು ಹೊನ್ನಾಳಿ ಹೃದಯ ಭಾಗದಲ್ಲಿರುವ ಪಪಂಗೆ ಸೇರಿದ ನವೀಕೃತ ಕಟ್ಟಡದಲ್ಲಿ ಜನಸಂಪರ್ಕ ಕಚೇರಿ ಆರಂಭಿಸಿದ್ದು, ಇಲ್ಲಿ ತಮ್ಮ ಆಪ್ತ ಸಹಾಯಕ ಪ್ರತಿದಿನ ಹಾಜರಿರುತ್ತಾರೆ ಎಂದರು.
ಜನಸಾಮಾನ್ಯರು ಇಲ್ಲಿಗೆ ಬಂದು ತಮ್ಮ ಸಮಸ್ಯೆ ಬಗ್ಗೆ ಹಲವಾಲುಗಳನ್ನು ಅವರಿಗೆ ಅಥವಾ ನೇರವಾಗಿ ತಮಗೆ ನೀಡಿದರೆ ಅವುಗಳನ್ನು ಪರಿಶೀಲಿಸಿ ಪರಿಹಾರೋಪಾಯ ಒದಗಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯ ಸೇರಿದಂತೆ ತಾಲೂಕಿನಲ್ಲಿ ಉತ್ತಮ ಮಳೆಯಾಗಿ ಡ್ಯಾಮ್ ಮತ್ತು ನದಿಗಳು ತುಂಬಿ ಹರಿಯುತ್ತಿವೆ. ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ರೈತರಿಗೆ ಈ ಬಾರಿ ಯಾವುದೇ ರೀತಿಯ ಬಿತ್ತನೆ ಬೀಜ, ಗೊಬ್ಬರದ ಕೊರತೆ ಬೀಳದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಬೀಜ, ಗೊಬ್ಬರ ಅಂಗಡಿ ಮಾಲೀಕರು ರೈತರು ಗೊಬ್ಬರ ಬೀಜ ಕೊಳ್ಳುವಾಗ ಜಿಂಕನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತಾನಾಡಿ ಸಮಸ್ಯೆ ಬಗೆಹರಿಸಿದ್ದೇವೆ ಎಂದವರು ಹೇಳಿದರು.
ಬಹು ವರ್ಷದಿಂದ ಹೂಳು ತುಂಬಿದ್ದ ತುಂಗಾ ಕಾಲುವೆಯ ಹೂಳನ್ನು ತೆಗೆಯುತ್ತಿದ್ದು, ಇದರಿಂದ ಕೊನೆಗೆ ಭಾಗದ ರೈತರಿಗೆ ನೀರು ಸರಾಗವಾಗಿ ಹರಿಯುತ್ತದೆ. ಜು. 8ರಂದು ಕಾಡ ಸಭೆ ನಡೆಯಲಿದ್ದು ಕೊನೆಯ ಪಕ್ಷ ಜು.15ರಿಂದ ಮುಂದೆ ತುಂಗಾ ನಾಲೆಗೆ ಕೂಡಲೇ ನೀರು ಹರಿಸಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ರಸ್ತೆ ಆಗಲೀಕರಣಕ್ಕೆ ಚಾಲನೆ: ಹೊನ್ನಾಳಿಯ ತುಂಗಾ ಮೇಲ್ದಂಡೆ ಯೋಜನೆ ಕಚೇರಿಯಿಂದ ಸವಳಂಗದವರೆಗೆ ರಸ್ತೆ ಅಗಲೀಕರಣ 3 ತಿಂಗಳು ಹಾಗೂ ಗೊಲ್ಲರಹಳ್ಳಿಯಿಂದ ಬಸವಾಪಟ್ಟಣದ ಗಡಿಭಾಗದವರೆಗೆ 2 ತಿಂಗಳಲ್ಲಿ ರಸ್ತೆ ಅಗಲೀಕರಣ ಕೆಲಸ ಮುಗಿಸಬೇಕೆಂದು ಗುತ್ತಿಗೆದಾರರನ್ನು ಕರೆಯಿಸಿ ಮಾತಾನಾಡಿದ್ದೇನೆ ಎಂದರು.
ಬಹು ನಿರೀಕ್ಷೆಯಲ್ಲಿದ್ದ ಪಟ್ಟಣದ ರಸ್ತೆ ಆಗಲಿಕರಣ ಈ 2 ಭಾಗಗಲ್ಲಿ ಕಾಮಗಾರಿ ಮುಗಿಯುತ್ತಿದ್ದಂತೆಯೇ ಪಟ್ಟಣದ ಒಳಗಡೆ ಹಾದುಹೋಗುವ ರಸ್ತೆ ಅಗಲೀಕರಣಕ್ಕೆ ಸರಿಸುಮಾರು ಬರುವ ಜನವರಿಯಿಂದ ಪಟ್ಟಣದ ರಸ್ತೆಗೆ ಚಾಲನೆ ನೀಡುವುದಾಗಿ ಹೇಳಿದರು
ಮಾಜಿ ಶಾಸಕ ಎಚ್. ಕೃಷ್ಣಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ವರದರಾಜಪ್ಪ ಗೌಡ, ಕೆಪಿಸಿಸಿ ಸದಸ್ಯ ಎಚ್.ಎ. ಉಮಾಪತಿ, ತಾಪಂ ಸದಸ್ಯ ಕಾಂತರಾಜ್, ದೊಡ್ಡೇರಿ ವಿಶ್ವನಾಥ, ಕಾಂಗ್ರೆಸ್ ಹಿರಿಯ ಮುಖಂಡ ಡಾ. ಈಶ್ವರನಾಯ್ಕ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ಹಾಗೂ ಸಿಬ್ಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

