ಸ್ವಚ್ಛತೆಗೆ ಒತ್ತು ನೀಡಲು ಆಗ್ರಹ
ಬಾಳೆಹೊನ್ನೂರು: ಬಿ. ಕಣಬೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಪರಿಸರ ಸ್ವಚ್ಛತೆಗೆ ಗಮನ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಲ್ಲಿನ ಬಿ. ಕಣಬೂರು ಗ್ರಾ.ಪಂ. ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಹಲವು ಗ್ರಾಮಸ್ಥರು ಈ ಕುರಿತು ಪ್ರಸ್ತಾಪಿಸಿ ಮಾತನಾಡಿದರು. ಪಟ್ಟಣದ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕೊಳೆತು ನಾರುತ್ತಿದ್ದು, ಕೆಲವೆಡೆ ಚರಂಡಿಗಳಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿದೆ. ಕೆಲವೆಡೆ ಕೊಳಚೆ ನೀರು ರಸ್ತೆಗೆ ಹರಿದು ಬರುತ್ತಿದ್ದು ದುರ್ನಾತ ಬೀರುತ್ತಿದೆ. ಪಟ್ಟಣದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಕೊಳಚೆ ನೀರು, ಮಳೆಗಾಲದ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಪಾದಾಚಾರಿಗಳು ಓಡಾಡಲು ತೀವ್ರ ತೊಂದರೆಯಾಗಿರುತ್ತದೆ ಎಂದು ದೂರಿದರು.
ಪಟ್ಟಣದ ಮಾರಿಗುಡಿ ರಸ್ತೆ ದುರಸ್ಥಿ ಕಾಣದೇ ಹಲವು ವರ್ಷಗಳು ಕಳೆದಿದ್ದು, ತೀವ್ರ ಹದಗೆಟ್ಟ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಮನವಿ ಸಲ್ಲಿಕೆ: ನಾಡಕಚೇರಿಯಲ್ಲಿ ನೀಡುತ್ತಿರುವ ಪಹಣಿಯಲ್ಲಿ ಬೆಳೆ ನಮುದಾಗುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಬೆಳೆ ದಾಖಲಾಗುವಂತೆ ಕಂದಾಯ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾಮಗಾರಿ ನಡೆಸಲು ಜಾಬಬ್ಯ್ಕಾರ್ಡ್ ಕೊರತೆಯಿದ್ದು, ಅಧಿಕಾರಿಗಳು ಜಾಬ್ ಕಾರ್ಡ್ ನೀಡುವಲ್ಲಿ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಸಾರ್ವಜನಿಕರ ಅಹವಾಲನ್ನು ಅಲಿಸಿದ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಗ್ರಾ.ಪಂ.ನ ಮಾರ್ಗದರ್ಶಿ ಅಧಿಕಾರಿ ರೋಹಿತ್ ಮಾತನಾಡಿ, ಗ್ರಾಮಸ್ಥರ ಮನವಿ ಹಾಗೂ ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಗೆ ಕ್ರಮಕೈಗೊಳ್ಳಲು ಕಳುಹಿಸಲಾಗುವುದು ಎಂದು ತಿಳಿಸಿದರು. ಬಿ.ಕಣಬೂರು ಗ್ರಾ.ಪಂ. ಅಧ್ಯಕ್ಷೆ ಶಾಹೀದಾ ಬಾನು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಎನ್.ಎ. ಹೂವಮ್ಮ, ತಾ.ಪಂ. ಸದಸ್ಯರಾದ ಹೇಮಲತಾ ಪ್ರಭಾಕರ್, ಉಮಾ ಭೀಮಯ್ಯ, ಗ್ರಾ.ಪಂ. ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಅರ್ಜಿ ಆಹ್ವಾನ
ಕೊಪ್ಪ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2013-14 ನೇ ಸಾಲಿನ ಕುವೆಂಪು ವಿವಿ ಸಂಯೋಜನೆಗೆ ಒಳಪಟ್ಟಂತೆ ಸ್ನಾತಕೋತ್ತರ ವಿಭಾಗದ ಎಂ.ಕಾಂ ತರಗತಿಯ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 40 ಸೀಟುಗಳ ಮಿತಿ ಇದ್ದು, ಸರ್ಕಾರ ಹಾಗೂ ವಿವಿ ನಿಯಮಾನುಸಾರ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಕಾಲೇಜು ಕಚೇರಿಯಿಂದ ಜು.9 ರಿಂದ 17 ವರೆಗೆ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜು. 17 ರ ಸಂಜೆ 4 ಒಳಗೆ ಹಿಂದಿರುಗಿಸಬೇಕಾಗಿದೆ. ಮಾಹಿತಿಗೆ 08265 221005 ಗೆ ಸಂಪರ್ಕಿಸಬಹುದು.
ಶಾಲಾ ಮಕ್ಕಳಿಗೆ ನೋಟ್ಬುಕ್ ವಿತರಣೆ
ತರೀಕೆರೆ: ಎಸ್.ಎಸ್.ಎಫ್ ಮತ್ತು ಎಸ್ವೈಎಸ್ ಸಂಘಟನೆ ವತಿಯಿಂದ ಪಟ್ಟಣದ ಗಾಳಿಹಳ್ಳಿ ಕ್ರಾಸ್ ಸರ್ಕಾರಿ ಉನ್ನತೀಕರಿಸಿದ ಮಾದರಿ ಶಾಲೆಯಲ್ಲಿ ಮಕ್ಕಳಿಗೆ ನೋಟ್ ಬುಕ್ ಮತ್ತು ಲೇಖನಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಎಸ್ಎಸ್ಎಫ್ ಅಧ್ಯಕ್ಷ ಮಹಮದ್ ಅಮಾನುಲ್ಲಾ, ಎಸ್.ವೈ.ಎಸ್. ಅಧ್ಯಕ್ಷ ಇದಿನಬ್ಬ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಮೀವುಲ್ಲಾ ಷರೀಫ್, ಕಾರ್ಯದರ್ಶಿಗಳಾದ ಹೈದರ್ ಆಲಿ, ಅಬ್ದುಲ್ ಖಾದರ್ ಮತ್ತು ಸದಸ್ಯರು, ಶಾಲೆ ಮುಖ್ಯೋಪಾಧ್ಯಾಯ ಎಚ್.ಬಿ. ಲಚ್ಚಾ ನಾಯಕ್ ಅವರು ಶಾಲಾ ಮಕ್ಕಳಿಗೆ ನೋಟ್ಬುಕ್ ಮತ್ತು ಲೇಖನಿಗಳನ್ನು ವಿತರಿಸಿದರು.
ಪಟ್ಟಣ ಮತ್ತು ದುಗ್ಲಾಪುರ ಗ್ರಾಮದ ಶಾಲೆಗಳಲ್ಲೂ ನೋಟ್ ಬುಕ್ ಮತ್ತು ಲೇಖನಿಗಳನ್ನು ವಿತರಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘಟನೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

