'ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ'
ತರೀಕೆರೆ: ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಪಟ್ಟಣದ ಇನ್ನರ್ವ್ಹೀಲ್ ಕ್ಲಬ್ ನೂತನ ಅಧ್ಯಕ್ಷೆ ಅನ್ನಪೂರ್ಣ ಬಸವರಾಜ್ ತಿಳಿಸಿದ್ದಾರೆ. ರೋಟರಿ ಕ್ಲಬ್ ಮತ್ತು ಇನ್ನರ್ವ್ಹೀಲ್ ಕ್ಲಬ್ ವತಿಯಿಂದ ಎಸ್ಜೆಎಂ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕ್ಲಬ್ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಕ್ಲಬ್ನ ನೂತನ ಅಧ್ಯಕ್ಷೆಯಾಗಿ ಪದವಿ ಸ್ವೀಕರಿಸಿಮಾತನಾಡಿದರು. ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಸಮಾಜವನ್ನು ನಡುಗಿಸುತ್ತಿದೆ. ಕಿರುಕುಳ, ಭ್ರೂಣಹತ್ಯೆ ಇತ್ಯಾದಿಗಳು ಮಹಿಳೆಯರ ಮೇಲೆ ನಿತ್ಯ ಶೋಷಣೆಯಾಗುತ್ತಿದೆ. ಸ್ನೇಹ ಮತ್ತು ಸೇವೆಯಿಂದ ಮಹಿಳೆಯರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು, ವಿಕೃತರನ್ನು ಮಹಿಳೆಯರು ಪರಿವರ್ತನೆ ಮಾಡಬೇಕು. ಸುರಕ್ಷತೆ ಕಾರ್ಯವನ್ನು ಇವರೇ ಮಾಡಿಕೊಳ್ಳಬೇಕು, ಮಹಿಳೆಯರಲ್ಲಿ ಆತ್ಮವಿಶ್ವಾಸದ ಕೊರತೆ ಬಹಳ ಇದೆ ಎಂದು ಹೇಳಿದರು.
ಸಹಕಾರ ಪಡೆಯಿರಿ: ಶಿವಮೊಗ್ಗ ಇನ್ನರ್ವ್ಹೀಲ್ ಜಿಲ್ಲಾ ಕಾರ್ಯದರ್ಶಿ ಸುಧಾ ಪ್ರಸಾದ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ, ಕ್ಲಬ್ ಕಳೆದ ವರ್ಷ ಒಳ್ಳೆಯ ಕಾರ್ಯವನ್ನು ನಿರ್ವಹಿಸಿದೆ. ವೇದಿಕೆಯನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕು, ರೋಟರಿ ಸಂಸ್ಥೆಯ ಪೂರ್ಣ ಸಹಕಾರ ಪಡೆದು ಎಲ್ಲ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಎಂದು ತಿಳಿಸಿದರು.
ಇನ್ನರ್ ವೀಲ್ ಕ್ಲಬ್ ಐಪಿಪಿ ನಿರ್ಮಲ ರಾಜಪ್ಪ, ಡಾ.ಅಂಜನಾ ಆಚಾರ್ಯ, ಬಿ.ವಿ. ದಿನೇಶ್ಕುಮಾರ್ ಮಾತನಾಡಿದರು. ಲಕ್ಷ್ಮಿ ವಿಶ್ವನಾಥ್ ಅವರಿಂದ ಭರತನಾಟ್ಯ ಏರ್ಪಡಿಸಲಾಗಿತ್ತು.
ನೂತನ ಕಾರ್ಯದರ್ಶಿ ಮಂಜುಳ ಶರತ್, ವಿನುತ ಕನಕರಾಜ್, ಕ್ಲಬ್ ಸದಸ್ಯೆಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇಂದಿನಿಂದ ನಾಮಪತ್ರ ಸಲ್ಲಿಕೆ
ಕೊಪ್ಪ: ಜು.22 ರಂದು ನಡೆಯುವ ತಾಲೂಕು ಸರ್ಕಾರಿ ನೌಕರ ಸಂಘದ ಚುನಾವಣೆಗೆ ಜು.11 ರಿಂದ ಜು.15 ರ ವರೆಗೆ ನಾಮಪತ್ರವನ್ನು ಪಟ್ಟಣದ ನೌಕರ ಸಂಘದ ಕಟ್ಟಡದಲ್ಲಿ ಸಲ್ಲಿಸಬಹುದಾಗಿದೆ ಎಂದು ಸಾಹಯಕ ಚುನಾವಣಾಧಿಕಾರಿ ದಿವಾಕರ್ ಪೂಜಾರಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ 761 ಸಂಘದ ಸದಸ್ಯರಿದ್ದು, 35 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜು.15 ರ ಸಂಜೆ 5ರ ವರೆಗೆ ನಾಮ ಪತ್ರ ಪಡೆಯಲಾಗುವುದು, ನಾಮಪತ್ರವನ್ನು ಜು.16 ರಂದು ವಾಪಸ್ಸು ಪಡೆಯ ಬಹುದಾಗಿದೆ. ಚುನಾವಣೆ ಪಟ್ಟಣದ ಅಫೀರ್ಸ್ ಕ್ಲಬ್ನಲ್ಲಿ ಜು. 22 ರಂದು ಬೆಳಗ್ಗೆ 11 ರಿಂದ ಸಂಜೆ 4ವರೆಗೆ ಮತದಾನ ನಡೆಯುವುದು ಎಂದು ತಿಳಿಸಿದರು.ಗಂಗಾಧರ್, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಭರತ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

