ಚಿಕ್ಕಮಗಳೂರು

'ಮೆಸ್ಕಾಂ ಕಚೇರಿ ಸ್ಥಳಾಂತರ ಬೇಡ'

Published On :

ಬೀರೂರು: ಪಟ್ಟಣದ ಮೆಸ್ಕಾಂ ಗ್ರಾಹಕ ಸೇವಾ ಕೇಂದ್ರವು ಪಟ್ಟಣದ ಸಂತೆ ಮೈದಾನದ ಸಮೀಪದ ಪುರಸಭಾ ಮಳಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈ ಸೇವಾ ಕೇಂದ್ರವನ್ನು ಮೆಸ್ಕಾಂ ಕಚೇರಿ ಅವರಣಕ್ಕೆ ಸ್ಥಳಾಂತರಿಸಿರುವುದಕ್ಕೆ ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಊರಿನ ಹೊರ ವಲಯದಲ್ಲಿರುವ ಕಚೇರಿಗೆ ಹೋಗಿ ದೂರು ನೀಡಿ ಬರಲು ವೃದ್ಧರು ಮಕ್ಕಳಿಂದ ಸಾಧ್ಯವೇ ಎಂದಿರುವ ಪಟ್ಟಣದ ಜನತೆ, ಊರಿನ ಮಧ್ಯ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಸಮಯಕ್ಕೆ ಸರಿಯಾಗಿ ದುರಸ್ತಿ ನಿರ್ವಹಿಸಲು ಕಷ್ಟವಾಗಿ ಗ್ರಾಹಕರಿಗೆ  ಅನಾನುಕೂಲವಾಗಿತ್ತು. ಇದೀಗ ಇಷ್ಟೊಂದು ದೂರಕ್ಕೆ ಹೋಗಿ ವಿದ್ಯುತ್ ಇಲ್ಲದ ಬಗ್ಗೆ ದೂರು ದಾಖಲಿಸಿ ಬರಲು ಹೋಗಬೇಕೆಂದರೆ  ಏನರ್ಥ ಎಂದು ಪ್ರಶ್ನಿಸಿರುವ ಮೆಸ್ಕಾಂ ಗ್ರಾಹಕರು, ಇಲಾಖೆ ಹಾಗೂ ಪುರಸಭೆಯು ಕೂಡಲೇ ಈಗಿರುವ ಜಾಗದಲ್ಲೇ ಕೇಂದ್ರವನ್ನು ಮುಂದುವರಿಸಲು ಮನವಿ ಮಾಡಿದ್ದಾರೆ.
ಭದ್ರಾ ನಾಲೆಗೆ ನೀರು
ಚಿಕ್ಕಮಗಳೂರು: ಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ಭದ್ರಾ ಬಲದಂಡೆ ನಾಲೆ, ಎಡದಂಡೆ ನಾಲೆ, ಆನವೇರಿ, ದಾವಣಗೆರೆ, ಮಲೆಬೆನ್ನೂರು ಹಾಗೂ ಹರಿಹರ ಶಾಖಾ ನಾಲೆಗಳಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗೆ ಜು.10 ರಿಂದ ಆಗಸ್ಟ್ 30ರವರೆಗೆ, ಸೆ. 11 ರಿಂದ ಅ.31 ರವರೆಗೆ ನೀರು ಹರಿಸಲು ಭದ್ರಾ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯು ತೀರ್ಮಾನಿಸಿದೆ ಎಂದು ಸಮಿತಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.