ಚಿಕ್ಕಮಗಳೂರು

ಶಾಸಕ ಸಿ.ಟಿ. ರವಿ ಹುಟ್ಟುಹಬ್ಬ ಆಚರಣೆ

Published On :

ಚಿಕ್ಕಮಗಳೂರು: ಶಾಸಕ ಸಿ.ಟಿ. ರವಿ ಅವರ 47ನೇ ಹುಟ್ಟುಹಬ್ಬವನ್ನು ಗುರುವಾರ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಆಚರಿಸಿದರು.
ಇಲ್ಲಿನ ಹಳೇ ತಾಲೂಕು ಆಫೀಸ್ ಹತ್ತಿರ ಇರುವ ಗಣಪತಿ ದೇವಸ್ಥಾನದಲ್ಲಿ ಸಿ.ಟಿ. ರವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರುಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅನ್ನಪೂರ್ಣ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಅಗತ್ಯವಿರುವ ವಸ್ತುಗಳಾದ ಬೆಡ್ ಶೀಟ್, ಚಾಪೆ, ಸಿಹಿ ಮತ್ತು ಊಟವನ್ನು ವಿತರಿಸಲಾಯಿತು.
ನಗರ ಬಿಜೆಪಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸದೇ ಇಂತಹ ವೃದ್ಧಾಶ್ರಮಗಳ ಜೊತೆ ಸಾರ್ವಜನಿಕರು, ಸಂಘಸಂಸ್ಥೆಗಳು ಆಚರಿಸಿ ದುಬಾರಿ ವೆಚ್ಚಕ್ಕೆ ಕಡಿವಾಣ ಹಾಕಬೇಕು. ವೃದ್ಧಾಶ್ರಮ, ಅಂಧಮಕ್ಕಳ ಶಾಲೆ, ಬುದ್ಧಿಮಾಂದ್ಯ ಶಾಲೆಗಳಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದರೆ ಬದುಕು ಸಾರ್ಥಕವಾಗುತ್ತದೆ ಎಂದರು. ವೃದ್ಧರು ಅನಿವಾರ್ಯ ಪರಿಸ್ಥಿತಿಯಲ್ಲಿ ವೃದ್ಧಾಶ್ರಮಕ್ಕೆ ಬರುತ್ತಾರೆ, ಅವರನ್ನು ನಿರ್ಲಕ್ಷಿಸದೇ ನಮ್ಮ ತಂದೆ ತಾಯಿಯಂತೆ ಕಾಣಬೇಕು ಹಾಗೂ ವೃದ್ಧಾಶ್ರಮದಲ್ಲಿ ಹಣವಂತರೂ ಇರುತ್ತಾರೆ, ಬಡವರು ಇರುತ್ತಾರೆ ಎಲ್ಲರನ್ನು ಒಂದೇ ರೀತಿ ಕಾಣಬೇಕು ಎಂದು ತಿಳಿಸಿದರು.
ಮಾಜಿ ನಗರಸಭಾ ಅಧ್ಯಕ್ಷ ಹೆಚ್.ಡಿ. ತಮ್ಮಯ್ಯ ಮಾತನಾಡಿ, ಶಾಸಕ ಸಿ.ಟಿ. ರವಿಯವರ ಆಶಯದಂತೆ ಅವರ 47ನೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡದೆ ಅಬಲೆಯರ ಹಾಗೂ ವೃದ್ಧರ ಕಣ್ಣೀರು ಒರೆಸುವ ಮುಖಾಂತರ ಸರಳವಾಗಿ ನಡೆಸಲಾಗುತ್ತಿದೆ ಎಂದರು.
 ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.