ಚಿಕ್ಕಮಗಳೂರು

ಶಿಕ್ಷಣದಿಂದ ಗಮಕ ಕಲೆ ಉಳಿಯಲು ಸಾಧ್ಯ

Published On :

ಕ.ಪ್ರ.ವಾರ್ತೆ, ಮೂಡಿಗೆರೆ,  ಜು.21
ಶಿಕ್ಷಣದಿಂದ ಮಾತ್ರ ಗಮಕ ಕಲೆ ಉಳಿಯಲು ಸಾಧ್ಯ ಎಂದು ಶ್ರೀ ಕ್ಷೇತ್ರದ ಧರ್ಮಕರ್ತ ಜಿ. ಭೀಮೇಶ್ವರ ಜೋಷಿ ಅಭಿಪ್ರಾಯ ಪಟ್ಟರು.
ಶ್ರೀ ಕ್ಷೇತ್ರ ಹೊರನಾಡಿನ ಶ್ರೀ ಮಾಂಗಲ್ಯ ಮಂಟಪದ, ಮಹಾಕವಿ ಲಕ್ಷ್ಮೀಶ ವೇದಿಕೆಯಲ್ಲಿ ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆ ಕಾರ್ಯಕ್ರಮ ಹಾಗೂ ಚಿಕ್ಕಮಗಳೂರು ಜಿಲ್ಲಾ ಗಮಕ ಕಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಪಠ್ಯ ಪುಸ್ತಕಗಳಲ್ಲಿ ಕನ್ನಡ ವ್ಯಾಕರಣವನ್ನು ಅಧ್ಯಯನ ಮಾಡಬೇಕಿದೆ. ಸನಾತನ ಧರ್ಮ ಉಳಿಸಲು ಗಮಕಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದರು.
ಗಮಕದಲ್ಲಿ ಸಾಧನೆ ಮಾಡಿದ ಬಾಳೆಹೊನ್ನೂರಿನ ಸತ್ಯನಾರಾಯಣ್, ಕಡೂರಿನ ಸೂರ್ಯ ನಾರಾಯಣ್, ತರಿಕೆರೆಯ ಬಿ.ಎಸ್. ಕೃಷ್ಣ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ತಟ್ಟೆ ಲೋಟ, ನೋಟ್ ಪುಸ್ತಕ ಹಾಗೂ ರೈತರಿಗೆ ತೆಂಗಿನ ಸಸಿ ಮತ್ತು ಸಪೋಟ ಸಸಿಗಳನ್ನು ವಿತರಿಸಿದರು.
ಸಿನಿಮಾ ಸಂಗೀತ: ಶ್ರೀ ಕ್ಷೇತ್ರ ಹೊರನಾಡಿನ ಅಂಕರಕಣ ಗಣಪತಿ ದೇವಾಲಯದ ಧರ್ಮಕರ್ತ ಜಿ. ರಾಮನಾರಾಯಣ ಜಿಲ್ಲಾ ಗಮಕ ಕಲಾ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೂರ್ಯನಂತೆ ಗಮಕ, ಗಮಕ ಕಲೆ ರಾಮಾಯಣವನ್ನು ತೇತ್ರಾಯುಗದಿಂದ ಪ್ರಾರಂಭವಾಗಿ ಇಂದಿಗೂ ಅಜರಾಮರವಾಗಿದೆ ಎಂದರು.
ಕನ್ನಡಕ್ಕೆ ಪ್ರಥಮ ಆದ್ಯತೆ: ಕಿರುತೆರೆ ನಟ ಜಿ. ರಾಜಗೋಪಾಲ್ ಜೋಷಿ ಮಾತನಾಡಿ, ಗಮಕಕಲೆ ಅಳಿವಿನಂಚನ್ನು ತಲುಪಿದ್ದು, ಅದರ ಉಳಿವಿಗೆ ಸರ್ಕಾರ ಮುಂದೆ ಬರಬೇಕು ಎಂದು ಒತ್ತಾಯಿಸಿದರು.
ಗಮಕ ಒಂದು ಶಿಷ್ಟಕಲೆ: ಗಮಕ ಒಂದು ಶಿಷ್ಟಕಲೆ. ರಾಮಾಯಣದ ಲವ-ಕುಶರೆ ಮೊದಲು ಹಾಡಿದರೆಂಬ ಪ್ರತೀತಿ ಇದೆ. ಇಂದಿನ ದಿನಗಳಲ್ಲಿ ನಶಿಸಿ ಹೋಗುತಿತರುವ ಈ ಕಲೆಗೆ ಚೈತನ್ಯ ತುಂಬ ಬೇಕಾಗಿದೆ ಎಂದು ಗಿರಿವಾಹಿನಿ ಪತ್ರಿಕೆಯ ಸಂಪಾದಕ ಜಿ.ವಿ. ಚೂಡನಾಥ್ ಅಯ್ಯರ್ ಅಭಿಪ್ರಾಯಪಟ್ಟರು.
ಶಾಸಕ ವೈ.ಎಸ್.ವಿ. ದತ್ತ, ಕುಮಾರವ್ಯಾಸ ಜನಪರವಾದ ಕವಿ. ಬದುಕಿನಲ್ಲಿ ಸುಂದರವಾಗಿರಬೇಕೆಂದು ಆಸೆ ಪಟ್ಟವನು ಎಂದು ಹೇಳಿದರು.
ಡಾ.ಜಿ. ಭೀಮೇಶ್ವರ ಜೋಷಿ, ಬಾಲಕೃಷ್ಣ ಭಟ್, ಜಿ.ಕೆ. ಮಂಜಪ್ಪಯ್ಯ, ಜಿ.ವಿ. ಚೂಡಾನಾಥ ಅಯ್ಯರ್, ಎಸ್.ಎಲ್. ರಾಧಕೃಷ್ಣ, ಜೆ.ಪಿ. ಕೃಷ್ಣೇಗೌಡ, ಹಿರೇಮಗಳೂರು ಕಣ್ಣನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.