ಚಿಕ್ಕಮಗಳೂರು

ಪ.ಪೂ.ಕಾಲೇಜು ಕಟ್ಟಡ ಕಳಪೆ ಕಾಮಗಾರಿ

Published On :

ತರೀಕೆರೆ:  ಥಂಡಿ ಹಿಡಿದ ಗೋಡೆಗಳು, ಸತತವಾಗಿ ಸೋರುವ ಮೇಲ್ಚಾವಣಿ, ಆಳೆತ್ತರೆ ಬೆಳೆದಿರುವ ಗಿಡ ಗೆಂಟೆಗಳು, ಸುತ್ತಲೂ ಕೆಸರು ಮಯ.  ಗುಹೆಗಳಂತಿರುವ ತರಗತಿ ಒಳಗಡೆ ಬೆಳಕಿನ ಪ್ರವೇಶವೇ ಇಲ್ಲದೆ ಕಗ್ಗತ್ತಲೆಯ ಖಂಡವಾಗಿದೆ.
ಎಡಬಿಡದೆ ಸುರಿಯುತ್ತಿರುವ ಈ ಮಳೆಯಿಂದ ಸೋರುತ್ತಿರುವ ಆರ್‌ಸಿಸಿ ಮೇಲ್ಚಾವಣಿ ಯಾವಾಗ ಯಾರ ತಲೆ ಮೇಲೆ ದೊಪ್ಪೆಂದು ಬೀಳುತ್ತದೋ ಎಂಬ ಭಯದ ನಡುವೆ ಮತ್ತು ಸೊಳ್ಳೆ ಕಚ್ಚಿದರೆ ಕಚ್ಚಿಸಿಕೊಂಡು, ಚಿಗುಟ ಚಿಗುಟಿದರೆ ಚಿಗುಟಿಸಿಕೊಂಡು, ಪಾಪ ವಿದ್ಯಾರ್ಥಿಗಳು ಪಾಠ ಕೇಳಬೇಕು, ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಬೇಕು           
ಇದು ತರೀಕೆರೆ ಸರ್ಕಾರಿ ಪ.ಪೂ.ಕಾಲೇಜು ಕಟ್ಟಡದ ಬಹುತೇಕ ಎಲ್ಲ ತರಗತಿಗಳಿಗೂ ಒದಗಿರುವ ದುಃಸ್ಥಿತಿ.  
ಮೇಲೆ ಥಳುಕು: ಕಾಲೇಜು ಕಟ್ಟಡ ಓಬಿರಾಯನ ಕಾಲದಲ್ಲಿ ಕಟ್ಟಿದ್ದಲ್ಲ, ಕೇವಲ ಕೆಲವೇ ನಾಲ್ಕಾರು ವರ್ಷಗಳ ಹಿಂದಷ್ಟೆ ಕಟ್ಟಿದ ಅತ್ಯಾದುನಿಕವಾದ ಕಟ್ಟಡಗಳು. ಸರ್ಕಾರದ ಇಂತಿಂಥ ಯೋಜನೆಗಳಲ್ಲಿ ಇಷ್ಟಿಷ್ಟು ಹಣಕಾನಿನ ನೆರವಿನಿಂದ ಕಟ್ಟಿದ ಕಟ್ಟಡ ಎಂದು ಬಣ್ಣ ಬಣ್ಣದ ದೊಡ್ಡ ಬರಹಗಳಲ್ಲಿ ಎದ್ದು ಕಾಣುವ ಥಳುಕಿನ ಬರಹಗಳು ಅಷ್ಟೆ, ಆದರೆ ಕಟ್ಟಡದ ಒಳಹೊಕ್ಕರೆ ಮಳೆ ಬಂದರೆ ಮಾತ್ರವೇ ಕಟ್ಟಡದ ನಿಜವಾದ
ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಮಲೆನಾಡು ಅಭಿವೃದ್ದಿ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎನ್.ಮಂಜುನಾಥ್, ಮ್ಯಾಮ್‌ಕೋಸ್ ನಿರ್ದೇಶಕ ಆರ್.ದೇವಾನಂದ್ ಅವರು ಪದವಿ ಪೂರ್ವ ಕಾಲೇಜಿಗೆ ದಿಢೀರ್ ಭೇಟಿ ನೀಡಿ ನಮ್ಮ ವಿದ್ಯಾರ್ಥಿಗಳು ಎಂತಹ ವಾತಾವರಣದಲ್ಲಿ ದಿನನಿತ್ಯ ಪಾಠ ಕಲಿಯುತ್ತಿದ್ದಾರೆ ಎಂಬುದರ ಸತ್ಯದ ಸಾಕ್ಷಾತ್ ದರ್ಶನ ಮಾಡಿ ಕಟ್ಟಡದ ವ್ಯವಸ್ಥೆ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡರು.
ಅಪೂರ್ಣವಾದ ಕಟ್ಟಡ: ಆರೇಳು ವರ್ಷಗಳ ಹಿಂದೆ ಕೂಲಿಗಾಗಿ ಕಾಳು ಯೋಜನೆಯಲ್ಲಿ ಕಾಲೇಜು ಕಾಂಪೌಂಡಿನಲ್ಲೇ ಕಟ್ಟಲು ಹೊರಟು ಅದು ಅಪೂರ್ಣಗೊಂಡು ಅವಶೇಷವಾಗೇ ಉಳಿದಿದೆ.       
ಸರ್ಕಾರಿ ಪ.ಪೂರ್ವ ಕಾಲೇಜಿನ ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ ದಿನಿನಿತ್ಯ 500ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಠ ಕೇಳಬೇಕು, ಕಾಲೇಜಿನಲ್ಲಿ ಜಾಗದ ಕೊರತೆಯಿಲ್ಲ. ಗಂಟೆಗಟ್ಟಲೆ ಕುಳಿತು ಪಾಠ ಕೇಳುವ ಒಳ್ಳೆಯ ಕಟ್ಟಡದ ಕೊರತೆ ವಿದ್ಯಾರ್ಥಿಗಳನ್ನು ಕಾಡಿಸುತ್ತಿದೆ.  
ವರದಿಗೆ ಸೂಚನೆ: ಜಿ.ಪಂ.ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಅವರು, ಕೂಲಿಗಾಗಿ ಕಾಳು ಕಟ್ಟಡ ಏಕೆ ಅಪೂರ್ಣವಾಗಿದೆ, ಕಾಲೇಜು ಕಟ್ಟಡಗಳಲ್ಲೇ ಏಕೆ ಹೀಗೆ ಹಾಳಾಗಿದೆ ಎಂಬ ಬಗ್ಗೆ ಸಂಪೂರ್ಣ ವರದಿಯನ್ನು ಮತ್ತು ದುರಸ್ಥಿ ಬಗ್ಗೆ ಪ್ರಸ್ತಾವನೆಯನ್ನು ಶೀಘ್ರದಲ್ಲೇ ತಯಾರಿಸಬೇಕೆಂದು ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.