ಚಿಕ್ಕಮಗಳೂರು

ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ

Published On :

ತರೀಕೆರೆ: ಸರ್ಕಾರಿ ನೌಕರರ ಸಂಘದಿಂದ ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಿಂದ ಎಂ.ಬಿ. ರಾಮಚಂದ್ರಪ್ಪ, ಎಚ್. ನಾಗರಾಜ್, ಪುಟ್ಟಸ್ವಾಮಿ, ಎಚ್.ಆರ್. ರಾಜಪ್ಪ ಅವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಎಲ್ಲಾ ಪ್ರಾಥಮಿಕ ಶಿಕ್ಷಕ ವೃಂದಕ್ಕೆ ವಿಜೇತ ಶಿಕ್ಷಕರು ಕೃತಜ್ಞತೆ ಅರ್ಪಿಸಿದ್ದಾರೆ.
ಚುಂಚನಾದ್ರಿ ವಿದ್ಯಾರ್ಥಿ ಸಂಘ ಉದ್ಘಾಟನೆ
ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಕಡ್ಲೇಮಕ್ಕಿ ನಾರಾಯಣಗುರು ಸಮುದಾಯ ಭವನದಲ್ಲಿ ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು, ಬಿಜಿಎಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ 2013-14 ನೇ ಸಾಲಿನ ಚುಂಚನಾದ್ರಿ ವಿದ್ಯಾರ್ಥಿ ಸಂಘ ಉದ್ಘಾಟನೆಗೊಂಡಿತು.
ಬಾಳೆಹೊನ್ನೂರು ವಲಯ ಅರಣ್ಯಾಧಿಕಾರಿ ಸತೀಶ್ಚಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಜೊತೆಗೆ ಸಾಹಿತ್ಯ, ಸಂಗೀತ, ಕಲೆ, ಕಥೆ, ಕಾದಂಬರಿ ಅಧ್ಯಯನದಿಂದ ಜ್ಞಾನ ವೃದ್ಧಿಸುತ್ತದೆ. ಶಿಕ್ಷಣ ಸಂಸ್ಥೆಯ ನಿಯಮ ಅಳವಡಿಸಿಕೊಳ್ಳುವ ಮೂಲಕ ಗಣನೀಯ ಸಾಧನೆಯ ಗುರಿ ಹೊಂದಬೇಕು. ಬಿಜಿಎಸ್ ತನ್ನದೇ ಆದ ವಿಶೇಷ ಶ್ರಮದಿಂದ ಗ್ರಾಮೀಣ ಪ್ರದೇಶದಲ್ಲಿ ಶೇ.100 ಫಲಿತಾಂಶ ದಾಖಲು ಮಾಡಿರುವುದು ಉತ್ತಮ  ಮೈಲಿಗಲ್ಲಾಗಿದೆ ಎಂದರು.
ಅವಿರತ ಶ್ರಮ: ವಿದ್ಯಾರ್ಥಿಗಳ ಜೊತೆಗೆ ಉಪನ್ಯಾಸಕ ವೃಂದದ ಅವಿರತ ಪರಿಶ್ರಮದ ಪಾತ್ರವೂ ಗಮನಾರ್ಹವಾಗಿದ್ದು, ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಾಹಿತ್ಯ, ಸಂಗೀತ, ಕ್ರೀಡೆ ಪೂರಕ ಪಾತ್ರ ವಹಿಸಬಲ್ಲವು ಎಂದರು.
ಪ್ರಾಂಶುಪಾಲ ಡಾ. ವೈ.ಎ. ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರ್ಮಲಾನಂದನಾಥ ಶ್ರೀಗಳ ದೂರದೃಷ್ಟಿತ್ವ, ಪರಿಕಲ್ಪನೆ, ಮಾರ್ಗದರ್ಶನದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಶಿಸ್ತು ಹಾಗೂ ಧ್ಯಾನಕ್ಕೆ ಆದ್ಯತೆ ನೀಡಿದ್ದು, ಪೋಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳ ಸಹಕಾರದಿಂದ ಮುಂಚೂಣಿಯತ್ತ ಹೆಜ್ಜೆ ಹಾಕುತ್ತಿದೆ ಎಂದರು. ಕಾಲೇಜಿನ ಅಭಿವೃದ್ಧಿ ಮಂಡಳಿ ಸದಸ್ಯ ಎಂ.ಕೆ. ಸುಂದರೇಶ್, ಪೋಷಕರ ವೇದಿಕೆ ಅಧ್ಯಕ್ಷ ಕೆ.ಕೆ. ಸುಧಾಕರ್ ಮಾತನಾಡಿದರು. ಪ್ರೌಢಶಾಲಾ ವಿಭಾಗದ ಅಧ್ಯಕ್ಷ ಶಿವಶಂಕರ್, ರೋಟರಿ ಅಧ್ಯಕ್ಷ ಎಚ್.ಎಂ. ಇಬ್ರಾಹಿಂ, ಕಾರ್ಯದರ್ಶಿ  ನಾಗೇಶ್, ಕೃಷ್ಣಮೂರ್ತಿ ಇದ್ದರು.
ಪ್ರಜ್ಞಾ ತಂಡ  ಪ್ರಾರ್ಥಿಸಿತು, ಅಫೀಯ ಪರ್ವಿನ, ಸೌಜನ್ಯ, ದಿಶಾರಾಮ್ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ನಂದಾ ವಂದಿಸಿದರು. ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ ಅತಿಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.