ರಸ್ತೆಗಳ ದುಸ್ಥಿತಿ: ಅಧಿಕಾರಿಗಳ ನಿರ್ಲಕ್ಷ್ಯ
ಕ.ಪ್ರ.ವಾರ್ತೆ, ತರೀಕೆರೆ, ಜು.24
ಎರಡು ಕಡೆ ಚರಂಡಿ, ಹಾಸುಗಲ್ಲು ಚಪ್ಪಡಿಯೊಂದಿಗೆ ಕನ್ಸರ್ವೆನ್ನಿ ರಸ್ತೆಗಳಾದರೂ ಗುಂಡಿಗಳೇ ಇಲ್ಲದೆ ನೋಡಲಾದರೂ ಚೆನ್ನಾಗಿರುತ್ತದೆ. ಆದರೆ, ತರೀಕೆರೆ ಪಟ್ಟಣದ ಬಹುತೇಕ ಎಲ್ಲ ಪ್ರಮುಖ ಮತ್ತು ಸಂಪರ್ಕ ರಸ್ತೆಗಳು ಮರಳು ಸಾರಿಸುವ ಜರಂಡಿಗಿಂತ ಕಡೆಯಾಗಿ ಹಾಳಾಗಿದೆ.
ಪಟ್ಟಣದಲ್ಲಿ ಹಾದುಹೋಗಿರುವ ರಾ.ಹೆ. ಒಳಗೊಂಡು, ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ, ಊರೊಳಗಿನ ಪುರಸಭೆ ವತಿಯ ರಸ್ತೆಗಳು ದುರಸ್ತಿಗೆ ಬಾರದಷ್ಟು ಹಾಳಾಗಿದೆ. ಊರಿನ ಯಾವುದಾದರೂ ಒಂದೇ ಒಂದು ರಸ್ತೆ, ಪಾದಚಾರಿಗಳು ಓಡಾಡಲು, ವಾಹನಗಳು ಸಂಚರಿಸಲು ಚೆನ್ನಾಗಿದೆ ಎಂದು ಉದಾಹರಣೆಗಾಗಿ ಹೇಳಿಕೊಳ್ಳಲು ಯಾವ ರಸ್ತೆಯೂ ಕಾಣಸಿಗುವುದಿಲ್ಲ.
ಗುದ್ದಲಿಪೂಜೆ ಮಾತ್ರ: ಕಳೆದ ವರ್ಷ ಪಟ್ಟಣದಲ್ಲಿ ವಿವಿಧ ಹಣಕಾಸಿನ ಯೋಜನೆಯಡಿಯಲ್ಲಿ ಸ್ಪರ್ಧೆಗಳಿದಿದೆಯೋ ಎನ್ನುವಂತೆ ರಸ್ತೆಗಳ ಡಾಂಬರೀಕರಣ ಕಾರ್ಯ, ಗುದ್ದಲಿಪೂಜೆ ಒಂದರ ನಂತರ ಮತ್ತೊಂದರಂತೆ ಮೇಲಿಂದ ಮೇಲೆ ನಡೆಯಿತು. ಗಟ್ಟಿಮುಟ್ಟಾದ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕೆಂದು ಎಲ್ಲರೂ ಭಾಷಣದ ಮೇಲೆ ಭಾಷಣ ಮಾಡಿದರು. ಆದರೆ ನಿಜವಾಗಿ ಏನು ನೆಡೆದಿದೆ ಎಂದು ಪಟ್ಟಣದ ರಸ್ತೆಯಲ್ಲಿ ಒಮ್ಮೆ ಸಂಚರಿಸಿದರೆ, ಸತ್ಯದ ಸಾಕ್ಷಾತ್ಕಾರ ಬಯಲಿಗೆ ಬರುತ್ತದೆ. ರಸ್ತೆ ದುರಸ್ತಿಯಾಗಿದೆ ಎಂದು ಸರ್ಕಾರಿ ಕಡತಗಳಲ್ಲಿ ಉಳಿಯಿತೇ ವಿನಃ ಡಾಂಬರೀಕರಣ ಕಂಡ ರಸ್ತೆಗಳಿಂದ ಇತ್ತ ಜನರಿಗೂ ಉಪಯೋಗವಾಗಲಿಲ್ಲ.
ತರೀಕೆರೆ ಎಲ್ಲ ರಸ್ತೆಗಳನ್ನು ಚೆಂದ ಕಾಣಿಸಲು ನಗರೋತ್ಥಾನ ಯೋಜನೆಯಡಿಯಲ್ಲಿ ಇಲಾಖೆಯೊಂದು ಅಪಾರ ಹಣವನ್ನು ಮೀಸಲಿಟ್ಟಿದೆ ಎಂದು ಅಧಿಕಾರಿಗಳು ಭರವೆಸೆ ನೀಡುತ್ತೆಲೇ ಇದ್ದಾರೆ. ವಿಪರ್ಯಾಸ ಎಂದರೆ ಆ ಯೋಜನೆ ಕಾಮಗಾರಿಗೆ ಇಲಾಖೆಯ ಅಂತಿಮ ಮುದ್ರೆ ಬಿದ್ದಿಲ್ಲ, ಇಂದೋ ನಾಳೆಯೋ ಖಂಡಿತ ಆಗುತ್ತದೆ ಎನ್ನುವ ಭರವಸೆಯ ಮಾತುಗಳು ಕೇಳಿಬರುತ್ತಿದೆ. ಆದರೆ, ರಸ್ತೆಗಳೆಲ್ಲಾ ಚಂದ ಕಾಣುವ ಆ ಬಹುದೂರದ ಕನಸು ಯಾವಾಗ ಕಾರ್ಯರೂಪಕ್ಕೆ ಬರುತ್ತದೋ ಅಥವಾ ಇಲ್ಲವೋ ಎಂಬುದನ್ನು ಮಾತ್ರ ಕಾಲವೇ ನಿರ್ಧರಿಸಬೇಕಾಗಿದೆ. ಸಂಬಂಧಿಸಿದವರು ಇನ್ನು ಮುಂದಾದರೂ ಗುಣಮಟ್ಟದ ಮತ್ತು ಗಟ್ಟಿಮುಟ್ಚಾದ ಹಾಗು ಎಲ್ಲ ಕಾಲಮಾನಗಳಿಗೂ ಅನ್ವಯವಾಗುವ ರಸ್ತೆ ನಿರ್ಮಾಣಕ್ಕೆ ಕೈಹಾಕಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

