ಚಿಕ್ಕಮಗಳೂರು

ಆಧಾರವಿಲ್ಲದೆ ಇತಿಹಾಸ ಬರವಣಿಗೆ ಅಸಾಧ್ಯ

Published On :

ಕ.ಪ್ರ.ವಾರ್ತೆ ಟಿ ಬಾಳೆಹೊನ್ನೂರು ಟಿ  ಜು.30
ಮೂಲಧಾರವಿಲ್ಲದೆ ಇತಿಹಾಸ ಬರವಣಿಗೆ ಹಾಗೂ ಅಧ್ಯಯನ ಸಾಧ್ಯವಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಹಾಗೂ ನಾಣ್ಯ ಸಂಗ್ರಹಕ ಖಂಡೋಬರಾವ್ ಹೇಳಿದ್ದಾರೆ.
ಇಲ್ಲಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಸ್ಥಳೀಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪರಂಪರೆ ಕೂಟ ಸೋಮವಾರ ಹಮ್ಮಿಕೊಂಡಿದ್ದ ನಾಣ್ಯ ಪರಂಪರೆ ಹಾಗೂ ನಾಣ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಋಗ್ವೇದದಲ್ಲಿ ಉಲ್ಲೇಖ: ನಾಣ್ಯಗಳು ಇತಿಹಾಸವನ್ನು ಸಾರುತ್ತವೆ. ರಾಜ ಮಹಾರಾಜರ ಆಳ್ವಿಕೆಯ ಕಾಲದಲ್ಲಿ ನಾಣ್ಯಗಳಲ್ಲಿ ರಾಜ ಮಹಾರಾಜರ ಮುದ್ರೆ ಹಾಗೂ ಕಾಲವನ್ನು ಕಾಣಬಹುದಾಗಿದೆ. 2650 ವಷಎರ್ಗಳ ಹಿಂದೆ ನಾಣ್ಯದ ಬಳಕೆ ಇತ್ತೆಂದು ಮಾಹಿತಿ ನೀಡಿದ ಅವರು, ವಸ್ತುಗಳ ವಿನಿಮಯ ರೂಪದಲ್ಲಿ ಹಾಗೂ ಮುದ್ರಾಂಕಿತ ನಾಣ್ಯಗಳನ್ನು ಬಳಸುತ್ತಿದ್ದರು.
ಋಗ್ವೇದದಲ್ಲಿ ನಿಷ್ಕಾನಾಣ್ಯ ಹಾಗೂ ಕಂಠಿಹಾರದ ಬಗ್ಗೆ ಉಲ್ಲೇಖವಿದೆ. ಪೂರ್ವದಲ್ಲಿ ಅತೀ ಹೆಚ್ಚು ಗೋವುಗಳನ್ನು ಸಾಕಿದವರನ್ನು ಶ್ರೀಮಂತರೆಂದು ಅರ್ಥೈಸಿಕೊಳ್ಳುತ್ತಿದ್ದರು. ಗೋವುಗಳು ಶ್ರೀಮಂತಿಕೆಯ ದ್ಯೋತಕವಾಗಿದ್ದು, ಗೋವುಗಳನ್ನು ವ್ಯವಹಾರಕ್ಕಾಗಿ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂದರು.
ಜ್ಞಾನ ವೃದ್ಧಿಸಿಕೊಳ್ಳಿ: ನಮ್ಮ ದೇಶದ ಇತಿಹಾಸವನ್ನು ವಿದೇಶಿಗರು ಅರಿತಿದ್ದಾರೆ. ಅದರೆ, ನಮ್ಮವರು ನಮ್ಮ ಇತಿಹಾಸವನ್ನು ಅರಿಯದೇ ಇರುವುದು ದೌರ್ಭಾಗ್ಯ. ಅಧ್ಯಯನಶೀಲ, ಚಿಂತನಾ ಶೀಲ ಬೃಹತ್ ಗ್ರಂಥದ ಅಭ್ಯಾಸವೇ ಇತಿಹಾಸ. ಇತಿಹಾಸವೆಂದರೆ ಸಮುದ್ರವಿದ್ದಂತೆ ವಿದ್ಯಾರ್ಥಿ ಜೀವನದಲ್ಲಿ ಬೃಹತ್ ಗ್ರಂಥಗಳ ಅಧ್ಯಯನ ಮಾಡಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನರಸಿಂಹರಾಜಪುರ ತಾ. ಕಸಾಪ ಅಧ್ಯಕ್ಷ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಓದುವ ಹವ್ಯಾಸ ಕಡಿಮೆಯಾಗುತ್ತಿರುವ ಈ ದಿನಗಗಳಲ್ಲಿ  ನಾಣ್ಯ ಪರಂಪರೆ ಹಾಗೂ ಪ್ರದರ್ಶನ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿದೆ ಎಂದರು.
ಪುರುಷೋತ್ತಮ್, ಬಿಜಿಎಸ್ ಕಾಲೇಜು ಪ್ರಾಚಾರ್ಯ ವೈ.ಎ. ಸುರೇಶ್, ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯ ಅಬೀದುಲ್ಲಾ, ಉಪನ್ಯಾಸಕ ಸತೀಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.