ಮಳೆ ಆರ್ಭಟ: ಕೊಚ್ಚಿಹೋದ ಸೇತುವೆ
ಕ.ಪ್ರ.ವಾರ್ತೆ, ಮೂಡಿಗೆರೆ, ಜು.31
ತಾಲೂಕಿನಾದ್ಯಂತ ಮಳೆರಾಯನ ಆರ್ಭಟ ಮುಂದುವರೆದಿದ್ದು ಬುಧವಾರದ ದಿನವಾದ ಇಂದು ಕಟ್ಟಡಗಳು ಧರೆಗುರುಳಿದ್ದು. ಕೆಲವು ಸೇತುವೆಗಳು ಕೊಚ್ಚಿಹೋದ ಪ್ರಕರಣ ವರದಿಯಾಗಿದೆ.
ಬಣಕಲ್ ಹೋಬಳಿಯ ಸಬ್ಲಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ಸಂಪೂರ್ಣ ಕುಸಿದಿದ್ದರ ಪರಿಣಾಮ ಶಾಲಾ ಕೊಠಡಿಗಳು ಹಲವು ಕಡೆಗಳಲ್ಲಿ ಬಿರುಕು ಬಿಟ್ಟಿದ್ದು ಕುಸಿಯುವ ಹಂತದಲ್ಲಿದೆ. ಬಕ್ಕಿ, ಔಸನ, ಲೋಕವಳ್ಳಿ, ಕಣಚೂರ್ ಗ್ರಾಮಗಳಲ್ಲಿ ಮನೆ ಕುಸಿದಿರುವ ಪ್ರಕರಣಗಳು ವರದಿಯಾಗಿವೆ. ತರುವೆ, ಜಾರ್ಗಲ್, ತ್ರಿಪುರ ಗ್ರಾಮಗಳಲ್ಲಿ ಗಾಳಿ ಮಳೆಗೆ ಕೆಲವು ಮನೆಗಳ ಹಂಚುಗಳು ಹಾರಿ ಹೋಗಿವೆ.
ಗಾಳಿಯ ಹೊಡೆತಕ್ಕೆ ಸಿಲುಕಿ ಕೆಲವು ವಿದ್ಯುತ್ ಕಂಬಗಳು ಧರೆಗುರುಳಿದ್ದರ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಬಿಡದೆ ಸುರಿಯುತ್ತಿರುವ ಮಳೆಯಿಂದ ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು. ಗದ್ದೆಗಳಿಗೆ ನೀರು ನುಗ್ಗಿದ್ದು. ಭತ್ತದ ಪೈರುಗಳು ಕೊಳೆ ರೋಗಕ್ಕೆ ತುತ್ತಾಗುವ ಸಾಧ್ಯತೆಗಳೆ ಕಂಡು ಬರುತ್ತಿದೆ.
ಬಿಡದ ಮಳೆ; ಅಡಕೆಗೆ ಅಪಾಯ
ನರಸಿಂಹರಾಜಪುರ: ತಾಲೂಕಿನಾದ್ಯಂತ ಬಾರೀ ಗಾಳಿ, ಮಳೆ ಮುಂದುವರಿದ್ದು ಕುದುರೆಗುಂಡಿ-ಬಿ.ಎಚ್. ಕೈಮರದ ಮಧ್ಯೆ ಗುಡ್ಡೇಹಳ್ಳದ ಸಮೀಪದ ಮುಖ್ಯ ರಸ್ತೆಗೆ ಬಿದಿರು ಹಿಂಡಿಲು ಉರುಳಿ ಬಿದ್ದಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಅಡಕೆಗೆ ಕೊಳೆ ರೋಗ: ಎಡೆ ಬಿಡದೆ ಮಳೆ ಸುರಿಯುತ್ತಿರುವುದರಿಂದ ಅಡಕೆಗೆ ಕೊಳೆ ರೋಗ ಕಾಣಿಸಿಕೊಂಡಿದ್ದು, ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಅಡಕೆಗೆ ಕೊಳೆ ರೋಗ ಬಾರದಂತೆ ಬೋರ್ಡೋ ಮಿಶ್ರಣ ಸಿಂಪರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲ ಹೊತ್ತು ಮಳೆ ಬಿಟ್ಟರೂ ಅಡಕೆ ಮರಗಳಿಗೆ ಪಾಚಿ ಕಟ್ಟಿದ್ದು ಮರ ಏರಲು ಸಾಧ್ಯವಾಗುತ್ತಿಲ್ಲ. ಇದೇ ರೀತಿ ಮಳೆ ಮುಂದುವರಿದರೆ ಅಡಕೆ ಫಸಲು ಸಂಪೂರ್ಣ ನಷ್ಟ ಉಂಟಾಗುತ್ತದೆ ಎಂದು ಅಡಕೆ ಬೆಳೆಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

