ಇಂದು ಹನುಮ ಜಯಂತಿ
ತರೀಕೆರೆ: ಬ್ರಾಹ್ಮಣ ಸೇವಾ ಸಮಿತಿಯಿಂದ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ನೀರುಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 3 ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಹನುಮ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹನುಮ ಜಯಂತಿ ಅಂಗವಾಗಿ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ, ಮಹಾ ಮಂಗಳಾರತಿ ಮತ್ತು ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಾಗಭೂಷಣ್ ಕೋರಿದ್ದಾರೆ.
ಪ್ರಾರ್ಥನ ಮಂದಿರ ಉದ್ಘಾಟನೆ
ತರೀಕೆರೆ: ಸಮೀಪದ ವರ್ತೆಗುಂಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮುಸ್ಲಿಂರ ಪ್ರಾರ್ಥನಾ ಮಂದಿರದ ಉದ್ಘಾಟನೆ ಏರ್ಪಡಿಸಲಾಗಿತ್ತು.
ಮಕ್ಮಲ್ ಮರಡಿ ಕಾಫಿ ತೋಟದ ಮಹಮದ್ ಸತಾಕ್ ಹಾಗೂ ಸಹೋದರರು ಈ ಭಾಗದ ಮುಸ್ಲಿಂರ ಪ್ರಾರ್ಥನೆಗೆ ಅನುಕೂಲ ಕಲ್ಪಿಸಿಕೊಡಲು, ಮಹಮದ್ ಸತಾಕ್ ಟ್ರಸ್ಟ್ನಿಂದ ಪ್ರಾರ್ಥನಾ ಮಂದಿರ ನಿರ್ಮಿಸಿಕೊಟ್ಟಿದ್ದಾರೆ.
ಶಾಸಕ ಜಿ.ಎಚ್. ಶ್ರೀನಿವಾಸ್ ಪ್ರಾರ್ಥನಾ ಮಂದಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಜಿಪಂ ಸದಸ್ಯ ಹೇಮಾವತಿ ಕೃಷ್ಣಪ್ಪ, ತಿಗಡಾ ಗ್ರಾಪಂ ಅಧ್ಯಕ್ಷೆ ಐಸಮ್ಮ, ಪ್ರಾರ್ಥನಾ ಮಂದಿರದ ಉಸ್ತುವಾರಿಗಳಾದ ಎಂ. ಅಕ್ಬರ್, ವಿ. ಬಷೀರ್, ಫಾರೂಕ್, ಶ್ರೀನಿವಾಸ್ ಜಯರಾಂ, ಚಂದ್ರಶೇಖರ್, ಸೆಲ್ವಿನ್, ಅಬೂಬಕರ್ ಕುಟ್ಟಿ, ಎಂ.ಜಿ. ರಮೇಶ್ ಇದ್ದರು.
ಸರ್ಕಾರ ಭೂ ಬ್ಯಾಂಕ್ ಹಿಂಪಡೆಯಬೇಕಿದೆ: ದೇವನೂರು
ಶಿವಮೊಗ್ಗ: ಪ್ರಸ್ತುತ ಇರುವ ಸರ್ಕಾರವಾದರೂ ಭೂ ಬ್ಯಾಂಕ್ನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಇಡೀ ಜನತೆ ತಮ್ಮ ಉಳುವಿಗಾಗಿ ಭೂಮಿಯನ್ನು ಕಾಪಾಡಿಕೊಳ್ಳಲು ಮತ್ತೊಮ್ಮೆ ಹೋರಾಟ ನಡೆಸಬೇಕಿದೆ ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಆಯೋಜಿಸಿದ್ದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ, ಕೈಗಾರಿಕೆಗಳ ಅಭಿವೃದ್ಧಿ ಹೆಸರಿನಲ್ಲಿ ಸ್ವಾತಂತ್ರ್ಯ ನಂತರದಿಂದ ಕಳೆದ 5 ವರ್ಷದ ಹಿಂದಿನವರೆಗೆ ಸರ್ಕಾರ ಸುಮಾರು 60 ಸಾವಿರ ಎಕರೆ ಭೂಮಿ ಭೂಬ್ಯಾಂಕ್ ಯೋಜನೆಗೆ ಒಳಪಡಿಸಿತ್ತು. ಆದರೆ, ಹಿಂದೆ ಆಡಳಿತ ಮಾಡಿದ ಬಿಜೆಪಿ ಸರ್ಕಾರ 5 ವರ್ಷಗಳಲ್ಲಿ 1 ಲಕ್ಷ ಎಕರೆ ವಶ ಪಡಿಸಿಕೊಂಡಿದೆ ಎಂದು ದೂರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

