ಚಂದ್ರಪ್ಪ ನಿವೃತ್ತಿ: ಕಸಾಪ ಸನ್ಮಾನ
ಕಡೂರು; ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂ. ಚಂದ್ರಪ್ಪನವರು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವಿಸಲಾಯಿತು.
ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಚಂದ್ರಪ್ಪನವರ ಸೇವೆಯನ್ನು ಸ್ಮರಿಸಿ ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಚಂದ್ರಪ್ಪನವರು ಸುದೀರ್ಘ ಸರ್ಕಾರಿ ಸೇವೆಯ ಪಯಣದಲ್ಲಿ ಉತ್ತಮ ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದರು.
ಇದೇ ಸಮಯದಲ್ಲಿ ಚಂದ್ರಪ್ಪನವರಿಗೆ ಸಾಂಪ್ರದಾಯಿಕವಾಗಿ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಗೌರವಿಸಲಾಯಿತು.
ಇಲಾಖೆಯ ಕಾರ್ಯಪಾಲಕ ಅಭಿಯಂತರ ಎನ್.ಶಿವಕುಮಾರ್, ತರೀಕೆರೆಯ ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ತರೀಕೆರೆಯ ಹೆಚ್.ಚಂದ್ರಪ್ಪ, ನಿವೃತ್ತ ಅಭಿಯಂತರ ಜಿ.ಎನ್. ಚಂದ್ರಪ್ಪ, ಗುರುರಾಜ್ ಹಲಮತ್ ಉಪಸ್ಥಿತರಿದ್ದರು.
--
'ಅಭಿವೃದ್ಧಿಗೆ ಅಡ್ಡಗಾಲು ಹಾಕಿದರೆ ಹೋರಾಟ'
ಕ.ಪ್ರ.ವಾರ್ತೆ ಚಿಕ್ಕಮಗಳೂರು ಜೂ. 3
ಬಿಜೆಪಿ ಆಡಳಿತದಲ್ಲಿದ್ದಾಗ ಕ್ಷೇತ್ರಕ್ಕೆ ಭೀಮನ ಪಾಲು ತಂದು ಕೆಲಸ ಮಾಡಿದ್ದೇನೆ. ಈಗಿರುವ ಕಾಂಗ್ರೆಸ್ ಸರ್ಕಾರ ಭೀಮನ ಪಾಲು ನೀಡದಿದ್ದರೂ ಧರ್ಮರಾಯನ ಪಾಲನ್ನು ನೀಡಲೇಬೇಕು ಅದಕ್ಕೆ ಅಡ್ಡಗಾಲು ಹಾಕಿದರೆ ಹೋರಾಟದ ಮೂಲಕ ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಗೃಹಮಂಡಳಿ ಬಡಾವಣೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನಾಗರಿಕ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ನಿಮ್ಮೆಲ್ಲರ ಸಹಕಾರ, ಆಶೀರ್ವಾದದಿಂದ ಗೆಲವು ಸಿಕ್ಕಿದೆ. ನಂಬಿಕೆ ಮತ್ತು ಭರವಸೆ ಇದ್ರೆ ಸಾಕು ಮೊದಲನೆ ಬಾರಿ ಸುಲಭವಾಗಿ ಶಾಸಕನಾಗಬಹುದು. 2-3ನೇ ಬಾರಿ ಎಂಎಲ್ಎ ಆಗಬೇಕಾದರೆ ಕೆಲಸ ಮಾಡಿ ನಂಬಿಕೆ ಉಳಿಸಿಕೊಂಡಿದ್ದರೆ ಮಾತ್ರ ಸಾಧ್ಯ. ನಾನು ದುರಂಹಕಾರಿ, ದೌರ್ಜನ್ಯ ಮಾಡಿದ್ದೇನೆ ಮತ್ತು ಸೋಮಾರಿ ಎನ್ನುವ ರೀತಿ ಜನರು ನನ್ನ ಬಗ್ಗೆ ಮಾತಾಡಲು ಅವಕಾಶ ನೀಡಲಿಲ್ಲ ಎಂದರು.
ಹೋರಾಟದ ಧ್ವನಿ: ಆಡಳಿತ ಪಕ್ಷದ ಎಂಎಲ್ಎ ಇಲ್ಲಿಲ್ಲ ಹೇಗೆ ಕೆಲಸ ಆಗುತ್ತೆ ಎಂಬ ಆತಂಕ ಕೆಲವರಲ್ಲಿ ಮನೆ ಮಾಡಿರಬಹುದು. ಆ ಭಯ ಬೇಡಾ ಇದುವರೆಗೂ ಬೆನ್ನು ತೋರಿಸಿ ರಾಜಕೀಯ ಮಾಡಿಲ್ಲ, ಈ ಹಿಂದಿನ ಅವಧಿಯಲ್ಲಿ ಅನುಮೋದನೆಯಾಗಿರುವ ಯಾವುದೆ ಅಭಿವೃದ್ಧಿ ಕೆಲಸವನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಲು ಮುಂದಾದರೆ ಹೋರಾಟದ ಮೂಲಕ ನಿಮ್ಮ ಧ್ವನಿಯಾಗಿ ಉತ್ತರ ನೀಡುತ್ತೇನೆ ಎಂದು ಹೇಳಿದರು.
ನಗರಸಭಾ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಹಬ್ಬ ಇದನ್ನು ಈ ಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಿದ್ದೇವೆ. ಈ ಬಡಾವಣೆಯಲ್ಲಿ ಶಾಸಕರು ಮಾಡಿದ ಅಭಿವೃದ್ದಿ ಕಾರ್ಯ ಗುರುತಿಸಿ ನಿಮ್ಮೆಲ್ಲರ ಪರಿಶ್ರಮ ಅಭಿಮಾನವನ್ನು ಮತದಾನದ ಮೂಲಕ ಪ್ರೋತ್ಸಾಹಿಸಿದ್ದೀರಿ ಎದರು.
ಕೆಲವು ವಿರೋಧಿಗಳು ಮಾಡಿದ ಅಪಪ್ರಚಾರ ಮತ್ತು ಕೀಳು ಮಟ್ಟದ ರಾಜಕೀಯಕ್ಕೆ ಕಿವಿಗೊಡದೆ ಸರಳ ಮತ್ತು ಪ್ರೀತಿ ವ್ಯಕ್ತಿತ್ವದ ಜನಪ್ರತಿನಿಧಿಯನ್ನು ಆಯ್ಕೆ ಮಾಡಿರುವುದು ನಮ್ಮ ಊರಿನ ಅಭಿವೃದ್ಧಿಗೆ ಸಹಕರಿಸಿದಂತಾಗಿದೆ ಎಂದರು.
ನಗರಸಭೆ ಸದಸ್ಯ ಎಚ್.ಡಿ. ತಮ್ಮಯ್ಯ, ಬುಜೇಂದ್ರ ರಾಜ್ ಅರಸ್, ವನಿತಾ ದೇವಾಲಯ ಟ್ರಸ್ಟ್ ಅಧ್ಯಕ್ಷ ನಾಗರಾಜ್, ರಾಮಲಿಂಗಾಚಾರ್, ಉದಯಸಿಂಹ, ಮುಖಂಡರಾದ ಹಿರೇಮಗಳೂರು ಜಗದೀಶ್, ಜಯ್ಯಣ್ಣ, ಲಕ್ಷಮ್ಮ, ಸೀತಾರಾಂಭರೆಣ್ಯ, ಅನಿಲ್ ಕುಮಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

