ಚಿಕ್ಕಮಗಳೂರು

ಒಂದು ಮರ ಕಡಿದರೆ ಹತ್ತು ಬೆಳೆಯಿರಿ

Published On :

ಕ.ಪ್ರ.ವಾರ್ತೆ, ಮೂಡಿಗೆರೆ, ಜೂ.5 ಪ್ರಕೃತಿ ಸಮತೋಲನ ಕಾಪಾಡಲು ಉತ್ತಮ ಆಮ್ಲಜನಕ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಒಂದು ಮರ ಕಡಿದರೆ ಹತ್ತು ಮರ ಬೆಳೆಯಬೇಕು ಎಂದು ಮೂಡಿಗೆರೆ ಪ್ರಧಾನ ಸಿವಿಲ್ ನ್ಯಾಯಾಧಿಶ ಪದ್ಮ ಪ್ರಸಾದ್ ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಸಿರು ಆಂದೋಲನಾ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಮತ್ತು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ  ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಹಾರ ವ್ಯರ್ಥ: ಇಂದು ನಾವು ಆಚರಿಸುತ್ತಿರುವ ವಿಶ್ವ ಪರಿಸರ ದಿನಾಚರಣೆ ಯೋಚಿಸಿ, ಸೇವಿಸಿ, ಉಳಿಸಿ ಎಂಬ ಅರ್ಥ ಕೊಡುತ್ತದೆ. ಆಹಾರ ತ್ಯಾಜ್ಯ ಹಾಗೂ ಆಹಾರ ನಷ್ಟ ವಿರೋಧಿ ಆಂದೋಲನವಾಗಿದ್ದು, ಪ್ರತಿವರ್ಷ 1.3 ಶತಕೋಟಿ ಟನ್ ಆಹಾರ ವ್ಯರ್ಥವಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಪ ಅರಣ್ಯ ಸಂರಕ್ಷಾಣಾಧಿಕಾರಿ ರಮೇಶ್ ಬಾಬು ಮಾತನಾಡಿ, ಕಾಡಿಲ್ಲದ ಕಾರಣ ಆಹಾರಕ್ಕಾಗಿ ಪ್ರಾಣಿಗಳು ಗ್ರಾಮಗಳತ್ತ ಮುಖಮಾಡುತ್ತಿದೆ. ಕಾಡು ಉಳಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಕಾಡಿದ್ದರೆ ನಾಡು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೆಕು. ಕಾಡಿದ್ದರೆ ಸಮೃದ್ಧ ಮಳೆಯಾಗುತ್ತದೆ. ಮರ-ಗಿಡ-ಸಸಿಗಳ ಸುತ್ತಲೂ ಇಟ್ಟಿಗೆಯ ಕಟ್ಟೆ ಕಟ್ಟುವುದರೊಂದಿಗೆ, ನೀರು ಹರಿದು ಹೋಗದಂತೆ ತಡೆ ಹಿಡಿಯುವುದರ ಮೂಲಕ ಮರದ ಬುಡದಲ್ಲಿ ನೀರು ಇಂಗಿಸುವುದು. ಮರದ ಸುತ್ತಲೂ ತಂತಿ ಬೇಲಿ ಕಟ್ಟುವುದರ ಮೂಲಕ ಮರ-ಗಿಡ-ಸಸಿ ಸಂರಕ್ಷಿಸಲು ಸಾಧ್ಯ ಎಂದರು.
ಮರ-ಗಿಡ-ಸಸಿಗಳ ಪ್ರಾಮುಖ್ಯತೆ ಮನಗಂಡು ಸಾರ್ವಜನಿಕರು ತಮ್ಮ ಮನೆ ಮುಂದಿರುವ ಮರ-ಗಿಡಗಳಿಗೆ ರಕ್ಷಣೆ ನೀಡಿ ಪರಿಸರ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು. ನಂತರ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಗೆ ಪ್ರತಿಜ್ಞಾ ವಿಧಿ ಬೇಧಿಸಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷೆ ಕೆ. ವಿಶಾಲ ಪರಿಸರ ಮತ್ತು ಸಂರಕ್ಷಣೆಯ ಬಗ್ಗೆ ಉಪನ್ಯಾಸ ನೀಡಿದರು. ವಕೀಲರ ಸಂಘದ ಕಾರ್ಯದರ್ಶಿ ಬಿ.ಟಿ. ನಟರಾಜ್, ಕಾಲೇಜಿನ ಪ್ರಾಂಶುಪಾಲ ನಾಗಯ್ಯ, ವಲಯಾರಣ್ಯಾಧಿಕಾರಿ ಸುದರ್ಶನ್ ಸೇರಿದಂತೆ ವಕೀಲರು ಸಂಘದ ಪಧಾಧಿಕಾರಿಗಳು ಅರಣ್ಯ ಇಲಾಖೆಯ ನೌಕರರು, ಶಿಕ್ಷಕರ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.