ಚಿಕ್ಕಮಗಳೂರು

ಜುಲೈನಲ್ಲಿ ಶಾಮನೂರಿಗೆ ಅಭಿನಂದನೆ

Published On :

ಕ.ಪ್ರ.ವಾರ್ತೆ  ಕಡೂರು   ಜೂ.7
ಜುಲೈ ಮೊದಲ ವಾರದಲ್ಲಿ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪನವರಿಗೆ ಕಡೂರು ಪಟ್ಟಣದಲ್ಲಿ ಜಿಲ್ಲಾ ವೀರಶೈವ ಮಹಾಸಭಾದಿಂದ ಅಭಿನಂದಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ. ಲೋಕೇಶ್ ಹೇಳಿದರು.
ಅವರು ಸಮಾಜದ ಮುಖಂಡರೊಂದಿಗೆ ಬೆಂಗಳೂರಿನಲ್ಲಿ ಸಚಿವ ಶಾಮನೂರು ಶಿವಶಂಕರಪ್ಪನವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಕಡೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯ ತಿಳಿಸಿದರು.
ಅಭಿನಂದನೆ: ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಸಚಿವರಾಗಿ ನೇಮಕವಾಗಿರುವ ಸಮಾಜದ ಮುಖಂಡ ಶಾಮನೂರು ಶಿವಶಂಕರಪ್ಪನವರನ್ನು ಜಿಲ್ಲಾ ವೀರಶೈವ ಮಹಾಸಭಾದಿಂದ ಅಭಿನಂದಿಸಲು ತೀಮಾರ್ನಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬರುವ ಜುಲೈ ತಿಂಗಳ ಮೊದಲ ವಾರದಲ್ಲಿ ಕಡೂರು ಪಟ್ಟಣದಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಿ, ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಅಭಿನಂದಿಸಲಾಗುವುದು ಎಂದರು.    
ಗಣ್ಯರ ಆಗಮನ: ಈ ಸಮಾರಂಭಕ್ಕೆ ವೀರಶೈವ ಸಮಾಜದ ವಿವಿಧ ಗಣ್ಯರು, ರಾಜಕೀಯ ಮುಖಂಡರು ಮತ್ತು ಸಮಾಜದ ಎಲ್ಲ ಜನಪ್ರತಿನಿಧಿಗಳು ಮತ್ತು ಸಮಾಜ ಬಾಂಧವರು ಜಿಲ್ಲೆಯ ಎಲ್ಲೆಡೆಯಿಂದ ಭಾಗವಹಿಸಲಿದ್ದಾರೆ ಎಂದರು.
ಈ ನಿಟ್ಟಿನಲ್ಲಿ ಸಮಾಜದ ಭಾಂಧವರು ಎಲ್ಲರೂ ಒಂದಾಗುವ ಮೂಲಕ ಎಲ್ಲ ವೀರಶೈವ ಸಮಾಜದ ಬಂಧುಗಳು ಭಾಗವಹಿಸುವ ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದು ಲೋಕೇಶ್ ಮನವಿ ಮಾಡಿದ್ದಾರೆ.
ವೀರಶೈವ ಮುಖಂಡರಾದ ಎಚ್.ವಿ. ಗಿರೀಶ್, ಮಹಾಸಭಾದ ಉಪಾಧ್ಯಕ್ಷ ತರೀಕೆರೆಯ ಎಚ್.ಸಿ. ಪಂಕಜ ಮಲ್ಲಿಕಾರ್ಜುನ್, ಜಿಲ್ಲಾ ಖಜಾಂಚಿ ಚಂದ್ರಮೌಳಿ, ತುರುವನಹಳ್ಳಿ ರೇಣುಕಯ್ಯ, ಬಳೆಗಾರ ಮಹೇಶ್ವರಪ್ಪ, ಲಿಂಗ್ಲಾಪುರದ ಚಂದ್ರಪ್ಪ, ಸತೀಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.