ಜಾಗೃತಿ ಮೂಡಿಸುವುದರಿಂದ ಡೆಂಘೀ ನಿಯಂತ್ರಣ ಸಾಧ್ಯ
ಕ.ಪ್ರ.ವಾರ್ತೆ ತರೀಕೆರೆ ಜೂ.7
ಜನರಲ್ಲಿ ಜಾಗೃತಿ ಮೂಡಿಸುವುದೇ ಡೆಂಘೀ ತಡೆಗಟ್ಟಲು ಪ್ರಮುಖ ಮಾರ್ಗೋಪಾಯ ಎಂದು ತರೀಕೆರೆ ಉಪ ವಿಭಾಗಾಧಿಕಾರಿ ಜಿ. ಅನುರಾಧಾ ತಿಳಿಸಿದ್ದಾರೆ.
ಅವರು ಮಿನಿವಿಧಾನಸೌಧದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ತರೀಕೆರೆ ಮತ್ತು ಕಡೂರು ತಾಲೂಕಿನಲ್ಲಿ ಹರಡಿರುವ ಡೆಂಘೀ ಕುರಿತಂತೆ ಏರ್ಪಡಿಸಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶೇಷ ಕಾಳಜಿ ಅಗತ್ಯ: ಹೋಟೆಲ್ಗಳಲ್ಲಿ ಗ್ರಾಹಕರಿಗೆ ನೀಡುತ್ತಿರುವ ನೀರು ಸ್ವಚ್ಛತೆ ಹಾಗೂ ಪುರಸಭೆ ವ್ಯಾಪ್ತಿಯ ಕಿರು ನೀರು ಸರಬರಾಜು, ಟ್ಯಾಂಕರ್ಗಳ ಸ್ವಚ್ಛತೆ ಬಗ್ಗೆ ವಿಶೇಷ ಕಾಳಜಿ ವಹಿಸಿ ಸೂಕ್ತ ಕ್ರಮ
ಕೈಗೊಳ್ಳಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ ಅವರು ಡೆಂಘೀ ವ್ಯಾಪಕವಾಗಿ ಹರಡಲು ಬರಗಾಲದಿಂದಾಗಿ ನೀರಿನ ಸರಬರಾಜಿನಲ್ಲ ಉಂಟಾದ ಕೊರತೆಯೇ ಪ್ರಮುಖ ಕಾರಣವಾಗಿದೆ ಎಂದರು.
ರೋಗಕ್ಕೆ ಕಾರಣವಾದ ಈಡಿಸ್, ಈಜಿಪ್ಟ್, ಸೊಳ್ಳೆಗಳ ಜೀವಿತಿ ಅವಧಿ 30 ದಿವಸಗಳಾಗಿದ್ದು, ನೀರಿನಲ್ಲಿ ಲಾರ್ವಾ ರೂಪದಲ್ಲಿ, 14 ದಿನಗಳು ಬೆಳೆದು, ಆನಂತರ 14 ದಿನಗಳಲ್ಲಿ ಸಂತಾನೋತ್ಪತ್ತಿ ಆಗಿ ರೋಗ ಹರಡುತ್ತದೆ. ಆದ ಕಾರಣ ರೋಗ ಹರಡುವುದಕ್ಕೆ ಮಂಚೆಯೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಡೆಂಘೀ ಕುರಿತಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಜೊತೆ ಜೊತೆಯಾಗಿ ಶಾಲಾ ಕಾಲೇಜು ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳು ಸುತ್ತಮುತ್ತಲಿನ ಪ್ರದೇಶಗಳ ಪ್ರತಿ ಮನೆಗೆ ಭೇಟಿ ನೀಡಿ, ಡೆಂಘೀ ಕುರಿತು ಜಾಗೃತಿ ಮೂಡಿಸುವಂತಹ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅವರು ಸೂಚಿಸಿದರು.
ಸಾಂಕ್ರಾಮಿಕ ರೋಗ: ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ಅವರು ಡೆಂಘೀ ಕುರಿತು ಮಾಹಿತಿ ನೀಡಿ, ಡೆಂಘೀ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಇದು ಜನರಿಂದ ಜನರಿಗೆ ಹರಡುವ ಗುಣ ಹೊಂದಿದೆ. ಇದಕ್ಕೆ ನಿರ್ದಿಷ್ಟ ಔಷಧ ಇಲ್ಲ, ಕಾಯಿಲೆಯಿಂದ ರಕ್ತ ಕಣಗಳು ಕಡಿಮೆಯಾಗಿ ಮನುಷ್ಯನನ್ನು ಸಾವಿನ ಅಂಚಿಗೆ ಕರೆದೊಯ್ಯುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ,.ಆರ್. ಪರಮೇಶ್ವರಪ್ಪ, ಕಡೂರು ತಹಸೀಲ್ದಾರ್ ಶಾರದಾಂಬೆ, ಡಾ. ಕಿರಣ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

